ಹೊಸ ತಲೆಮಾರಿಗೆ ಹಳೆಯ ನೆನಪು 4 | ಸಿಹಿ ನೀರಿನ ಕಣಜ ಅಕ್ಕಿತಿಮ್ಮನಹಳ್ಳಿ ಕೆರೆ ಮೇಲಿದೆ ‘ಹಾಕಿ ಕ್ರೀಡಾಂಗಣ’

Date:

Advertisements
1970ರ ದಶಕದವರೆಗೂ ಬೆಂಗಳೂರಿನ ಪ್ರಮುಖ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಅಕ್ಕಿತಿಮ್ಮನಹಳ್ಳಿ ಕೆರೆ ನಿರ್ನಾಮ ಮಾಡಿ, ಅದರ ಮೇಲೆ 'ಹಾಕಿ ಕ್ರೀಡಾಂಗಣ' ನಿರ್ಮಿಸಲಾಗಿದೆ.

ಕೆಂಪೇಗೌಡರ ಕಾಲಘಟ್ಟದಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಸಾವಿರಾರು ಕೆರೆಗಳಿದ್ದವು ಎಂಬ ಇತಿಹಾಸವಿದೆ. ಆದರೆ, ಈಗ ಆ ಅಂಕಿ ಸಾವಿರದಿಂದ 210ಕ್ಕೆ ಇಳಿದಿದೆ. ನಗರದಲ್ಲಿನ ಕೆರೆಗಳು ಒಂದೊಂದಾಗಿ ಅವನತಿ ಹೊಂದುತ್ತಾ ಸಾಗುತ್ತಿವೆ. ನಗರೀಕರಣದ ಹಿಂದೆ ಬಿದ್ದಿರುವ ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದಾಗಿ ಕೆರೆಗಳು ಅಳಿವಿನ ಅಂಚಿನಲ್ಲಿವೆ. ವಿಸ್ತಾರವಾಗಿ ಹರಡಿಕೊಂಡಿದ್ದ ಕೆರೆಗಳನ್ನು ಮುಚ್ಚಿ ಅಲ್ಲಿ ಬೃಹದಾಕಾರದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.

ಅಭಿವೃದ್ಧಿಯ ಸೆಲೆಗೆ ಸಿಲುಕಿ ಧರ್ಮಾಂಬುಧಿ ಕೆರೆ, ಚಳ್ಳಘಟ್ಟ ಕೆರೆ, ಕೋರಮಂಗಲ ಕೆರೆ, ಸಿದ್ಧಿಕಟ್ಟೆ ಕೆರೆ, ಕಾರಂಜಿ ಕೆರೆ, ಸೂಳೆಕೆರೆ, ನಾಗಶೆಟ್ಟಿಹಳ್ಳಿ ಕೆರೆ, ಕಾಡುಗೊಂಡನಹಳ್ಳಿ ಕೆರೆ, ದೊಮ್ಮಲೂರು ಕೆರೆ, ಸುಭಾಷ್‌ನಗರ ಕೆರೆ, ಚೆನ್ನಮ್ಮನಕೆರೆ, ಮಿಲ್ಲರ್ಸ್ ಕೆರೆ, ಕೋಡಿಹಳ್ಳಿ ಕೆರೆ, ಮಾರೇನಹಳ್ಳಿ ಕೆರೆ, ಶಿವನಹಳ್ಳಿ ಕೆರೆ, ಜಕ್ಕರಾಯನ ಕೆರೆ ಸೇರಿದಂತೆ ನೂರಾರು ಕೆರೆಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಖುದ್ದು ಸರ್ಕಾರವೇ ಹತ್ತಾರು ಕೆರೆಗಳನ್ನು ನಿರ್ನಾಮ ಮಾಡಿದೆ. ಆ ಪಟ್ಟಿಯಲ್ಲಿ ವಿಸ್ತಾರವಾಗಿ ಹರಡಿಕೊಂಡಿದ್ದ ಅಕ್ಕಿತಿಮ್ಮನಹಳ್ಳಿಯ ಕೆರೆಯೂ ಒಂದು. ಸಿಹಿ ನೀರಿನ ಕಣಜವಾಗಿದ್ದ ಆ ಕೆರೆಯನ್ನು ಮುಚ್ಚಿ, ಅದರ ಮೇಲೆ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಹಾಕಿ ಕ್ರೀಡಾಂಗಣ)ಯನ್ನು ಸರ್ಕಾರ ನಿರ್ಮಾಣ ಮಾಡಿದೆ.ಹಾಕಿ ಕ್ರೀಡಾಂಗಣ

1894ರಲ್ಲಿ ಹೆಸರಘಟ್ಟ ಕೆರೆ, 1933ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ 1970ರ ದಶಕದಿಂದ ಕಾವೇರಿ ನದಿ ನೀರನ್ನು ಬೆಂಗಳೂರಿಗೆ ಒದಗಿಸಲಾಯಿತು. ಇದರಿಂದ ನಗರದಲ್ಲಿದ್ದ ಸಾವಿರಾರು ಕೆರೆಗಳು ಮತ್ತು ಇತರ ನೀರಿನ ಮೂಲಗಳಾದ ಬಾವಿಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತಾ ಸಾಗಿತು. ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮದಡಿ ಸರ್ಕಾರ ಹಲವಾರು ಕೆರೆಗಳನ್ನು ಮುಚ್ಚಿ ಹಾಕಿತು. ಮಾತ್ರವಲ್ಲದೆ, ಆ ಜಾಗದಲ್ಲಿ ವಾಣಿಜ್ಯ ಪ್ರದೇಶಗಳು, ಕೈಗಾರಿಕೆಗಳು, ಸರ್ಕಾರಿ ಕಟ್ಟಡಗಳು, ಬಸ್ ನಿಲ್ದಾಣಗಳು, ಕ್ರೀಡಾಂಗಣ, ಆಟದ ಮೈದಾನಗಳು ಮತ್ತು ವಸತಿ ಕಾಲೋನಿಗಳನ್ನು ಸೃಷ್ಟಿಸಿತು.

Advertisements

ಅಕ್ಕಿತಿಮ್ಮನ ಹಳ್ಳಿ ಕೆರೆಯ ಹಿನ್ನೆಲೆ

1970ರ ದಶಕದವರೆಗೂ ಬೆಂಗಳೂರಿನ ಪ್ರಮುಖ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಅಕ್ಕಿತಿಮ್ಮನಹಳ್ಳಿ ಕೆರೆಯನ್ನು ನಿರ್ನಾಮ ಮಾಡಿ, ಅದರ ಮೇಲೆ ಹಾಕಿ ಕ್ರೀಡಾಂಗಣ ನಿರ್ಮಿಸಲಾಗಿದೆ.

ಅಕ್ಕಿತಿಮ್ಮನಹಳ್ಳಿ ಕೆರೆಯ ನೀರು ತುಂಬಾ ಸಿಹಿಯಾಗಿತ್ತು. ಶಾಂತಿನಗರ, ರಿಚ್ಮಂಡ್ ಟೌನ್, ಲ್ಯಾಂಗ್ಫೋರ್ಡ್ ಟೌನ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಇದೆ ಕೆರೆಯ ನೀರು ಆಧಾರವಾಗಿತ್ತು. ಈ ಕೆರೆಯ ಸುತ್ತಮುತ್ತ ಗದ್ದೆಗಳಿದ್ದವು. ಇಲ್ಲಿ ಹೆಚ್ಚಾಗಿ ಮಾವು ಮತ್ತು ಭತ್ತವನ್ನು ಬೆಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.ಹಾಕಿ ಕ್ರೀಡಾಂಗಣ

ಕ್ರಮೇಣ, ಬೆಂಗಳೂರು ಬೆಳೆದಂತೆ ಕೆರೆಗೆ ನೀರು ಹರಿದುಬರುವ ಜಾಲವೇ ಇಲ್ಲದಂತಾಯಿತು. ಪರಿಣಾಮ, ಕೆರೆಯ ನೀರು ಖಾಲಿಯಾಗಿ, ಕೆರೆ ಬತ್ತಿಹೋಯಿತು. ನಂತರ, ನೀರಿಲ್ಲದೆ ಒಣಗಿದ್ದ ಕೆರೆಯಲ್ಲಿ ಸುತ್ತಮುತ್ತಲ ಪ್ರದೇಶದ ಮಕ್ಕಳು ಆಟವಾಡಲು ಆರಂಭಿಸಿದ್ದರು. ಹೆಚ್ಚಾಗಿ ಈ ಸ್ಥಳದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದರು. ಆಟಗಳು ಸಾಗಿದಂತೆ ಕೆರೆಯನ್ನು ಮುಚ್ಚಿದ ಸರ್ಕಾರ, ಅದರ ಮೇಲೆ ಹಾಕಿ ಕ್ರೀಡಾಂಗಣ ತಲೆ ಎತ್ತುವಂತೆ ಮಾಡಿತು.

ಅಕ್ಕಿತಿಮ್ಮನಹಳ್ಳಿ ಹೆಸರು ಹೇಗೆ ಬಂತು?

ಬ್ರಿಟಿಷರು ಚಿತ್ರಿಸಿದ ನಕ್ಷೆಗಳಲ್ಲಿ ಈ ಪ್ರದೇಶವನ್ನು 1800ರ ದಶಕದಲ್ಲಿ ‘ಅಕ್ಕಾಟಿಂಪಲ್ಲಿ’ ಎಂದು ಕರೆಯುತ್ತಿದ್ದರು. ಇದು ದಂಡು ಪ್ರದೇಶದ ಗಡಿಯ ಹೊರಗೆ ಇತ್ತು. ಈ ಪ್ರದೇಶದಲ್ಲಿ ಅನೇಕ ಭತ್ತದ ಗದ್ದೆಗಳು ಮತ್ತು ಮಾವಿನ ಗಿಡಗಳು ಇದ್ದವು. ಇಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದರು. ಈ ಗದ್ದೆಗಳು ತಿಮ್ಮ ಎಂಬ ಶ್ರೀಮಂತ ವ್ಯಾಪಾರಿಗೆ ಸೇರಿದ್ದವಾಗಿದ್ದವು. ಹೀಗಾಗಿ, ಅಲ್ಲಿದ್ದ ಹಳ್ಳಿಯನ್ನು ‘ಅಕ್ಕಿತಿಮ್ಮನಹಳ್ಳಿ’ ಎಂದು ಕರೆದ ಬ್ರಿಟಿಷರು, ಅಲ್ಲಿಯೇ ಇದ್ದ ಕೆರೆಯನ್ನು ‘ಅಕ್ಕಿತಿಮ್ಮನಹಳ್ಳಿ ಕೆರೆ’ ಎಂದು ಹೇಳುತ್ತಿದ್ದರು ಎನ್ನಲಾಗಿದೆ.

ಹಿನ್ನೆಲೆ

1809ರಲ್ಲಿ ಬ್ರಿಟಿಷರು ದಂಡು ಪ್ರದೇಶ ಸ್ಥಾಪಿಸಿದಾಗ, ಸರೋವರದ ಉದ್ದಕ್ಕೂ ಇರುವ ಮನೆಗಳನ್ನು ಪ್ರಭಾವಿ ಆಡಳಿತಗಾರರು ಮತ್ತು ಆಂಗ್ಲೋ-ಇಂಡಿಯನ್ನರಿಗೆ ಹಂಚಲಾಗಿತ್ತು.ಹಾಕಿ ಕ್ರೀಡಾಂಗಣ

1970ರ ದಶಕದ ಆರಂಭದಲ್ಲಿ ಮಲೇರಿಯಾ ನಿರ್ಮೂಲನಾ ಅಭಿಯಾನದ ಭಾಗವಾಗಿ ಕೆರೆಯನ್ನು ಮುಚ್ಚಲಾಯಿತು. ಅದರ ಜಾಗದಲ್ಲಿ ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣ ಮತ್ತು ವಾಣಿಜ್ಯ ಸಂಕೀರ್ಣ ಬಂದಿತು. ಇದರ ಒಂದು ಭಾಗವು ಆಟದ ಮೈದಾನವಾಗಿ ಉಳಿದಿದೆ. ಇದನ್ನು ಮುಖ್ಯವಾಗಿ ಹತ್ತಿರದ ಪ್ರದೇಶಗಳ ಮಕ್ಕಳು ಬಳಸುತ್ತಾರೆ.

ಕೆರೆಯಲ್ಲಿ ನೀರು ಬತ್ತಿದಾಗ, ಜನರು ಇಟ್ಟಿಗೆ ಮತ್ತು ಮನೆಗಳನ್ನು ಮಾಡಲು ಜೇಡಿಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರು. ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು.

ಈ ಕೆರೆಯ ಸುತ್ತಮುತ್ತ ಅಷ್ಟಾಗಿ ಮನೆಗಳು ಇರಲಿಲ್ಲ. ಹೆಚ್ಚಾಗಿ ಗದ್ದೆ ತೋಟ ಗಳಿದ್ದವು. ಅಕ್ಕಿತಿಮ್ಮನಹಳ್ಳಿಯ ಅಗ್ರಹಾರ ಎಂಬಲ್ಲಿ ಮೇಲ್ವರ್ಗಕ್ಕೆ ಸೇರಿದ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದರು.ಹಾಕಿ ಕ್ರೀಡಾಂಗಣ

ಅಕ್ಕಿತಿಮ್ಮನಹಳ್ಳಿ ಕೆರೆಯ ಅಳಿವು-ಉಳಿವು

ಅಕ್ಕಿತಿಮ್ಮನಹಳ್ಳಿ ಕೆರೆ 9.29 ಎಕರೆಯಲ್ಲಿ ವಿಸ್ತಾರವಾಗಿ ಹರಡಿಕೊಂಡಿತ್ತು. 1970ರ ದಶಕದಲ್ಲಿ ಹಾಕಿ ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ಕಾರ 6.07 ಎಕರೆ ಕಬಳಿಸಿತು. 1.30 ಎಕರೆ ಜಾಗವನ್ನು ದಿವ್ಯಶ್ರೀ ಚೇಂಬರ್ಸ್ ಎಂಬ ಸಂಸ್ಥೆಯ ದೊಡ್ಡ ಕಟ್ಟಡ ನಿರ್ಮಾಣವಾಗಿದೆ. ಇನ್ನು ಅಳಿದು ಉಳಿದ ಭಾಗವನ್ನು ಮೈದಾನವಾಗಿ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 3 | ಸಂಪಂಗಿ ಕೆರೆಯ ಮೇಲೆ ತಲೆಯೆತ್ತಿ ಮೆರೆಯುತ್ತಿರುವ ಕಂಠೀರವ ಕ್ರೀಡಾಂಗಣ

ಅಕ್ಕಿತಿಮ್ಮನಹಳ್ಳಿಯನ್ನು ಅಭಿವೃದ್ಧಿ ಮಾಡಿ, ಕೆರೆಯನ್ನು ಕಬಳಿಸಬೇಡಿ ಎಂದು ಹಲವರು ಪ್ರತಿಭಟನೆಗೆ ಕುಳಿತರು. ಹಾಗಾಗಿ, ಕೆರೆಯ ಒಂದು ಭಾಗ ಮೈದಾನವಾಗಿ ಉಳಿದುಕೊಂಡಿದೆ.

ಅಕ್ಕಿತಿಮ್ಮನಹಳ್ಳಿಯಲ್ಲಿ ಉಳಿದ ಈ ಆಟದ ಮೈದಾನದಲ್ಲಿ ಖಾಸಗಿ ವಾಹನಗಳ ಅಗತ್ಯತೆಗಳನ್ನು ಪೂರೈಸಲು ಈ ಪ್ರದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭೂಗತ ಪಾರ್ಕಿಂಗ್ ಸ್ಥಳವಾಗಿ ಪರಿವರ್ತಿಸುವ ಯೋಜನೆಯನ್ನು 2007ರಲ್ಲಿ ರೂಪಿಸಿತು. ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಯಿತು.ಹಾಕಿ ಕ್ರೀಡಾಂಗಣ

ಕೆರೆಗಳನ್ನು ನಿರ್ನಾಮ ಮಾಡುತ್ತಿರುವ ಸರ್ಕಾರ, ತನ್ನ ಅನಾಚಾರವನ್ನು ಈಗಲಾದರೂ ನಿಲ್ಲಿಸಬೇಕು. ಬೆಂಗಳೂರಿಗೆ ದೂರದ ನದಿಗಳು-ಜಲಾಶಯಗಳಿಂದ ನೀರು ತರಲು ಯೋಜನೆಗಳನ್ನು ರೂಪಿಸುವುದನ್ನು ಕೈಬಿಟ್ಟು, ಇಲ್ಲಿನ ಕೆರೆಗಳನ್ನೇ ಅಭಿವೃದ್ಧಿ ಪಡಿಸಬೇಕು. ಸ್ಥಳೀಯ ಜಲಮೂಲಗಳನ್ನು ರಕ್ಷಿಸಿ, ನಗರದಲ್ಲಿಯೇ ನೀರು ದೊರೆಯುವಂತೆ ಮಾಡಬೇಕು. ಆಗ, ನಗರದ ನೀರಿನ ಬವಣೆಯೂ ತಪ್ಪುತ್ತದೆ. ಮಳೆಗಾಲದಲ್ಲಿ ಬೆಂಗಳೂರು ಸಮುದ್ರವಾಗುವುದರಿಂದ ಮುಕ್ತಿಯೂ ಸಿಗುತ್ತದೆ ಎನ್ನುತ್ತಿದ್ದಾರೆ ನಗರದ ನಾಗರಿಕರು.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ‌ಧನ್ಯವಾದಗಳು,ನಾಗರೀಕತೆ ಹುಟ್ಟಿದ್ದೇ ನದೀ ತೀರಗಳಲ್ಲಿ..ನೀರು ನೀರಾಗಿ ಇರುವುದರಿಂದಲೇ ಈ ಭೂಮಂಡಲದ ಮೇಲೆ ಎಲ್ಲಾ ಜೀವ ಕೋಶಗಳ ಉಗಮವಾಯಿತು..ಮನುಷ್ಯ ಎಷ್ಟೇ ಬುದ್ದಿವಂತ ಆದರು ಒಂದು ಹನಿ ನೀರನ್ನು ಯಾವ ಲ್ಯಾಬೋರೇಟರಿ ಯಲ್ಲೂ ಉತ್ಪಾದಿಸಲಾರ..

  2. Very good news article and this reminds how yester years of Bangalore were vibrant and green; and this brings back vintage memories of Bangalore!!😄😄😄

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X