ಮೂರನೇ ದಿನ ಶಕ್ತಿ ಯೋಜನೆಯ ಲಾಭ ಪಡೆದ 51 ಲಕ್ಷ ಮಹಿಳೆಯರು

Date:

Advertisements
  • ಜೂ. 11ರಂದು 5,71,023 ಮಹಿಳೆಯರ ಪ್ರಯಾಣ
  • ಶಕ್ತಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ತನ್ನ 5 ಗ್ಯಾರಂಟಿಗಳಲ್ಲಿ ಒಂದಾದ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಮೂರನೇ ದಿನ ಒಟ್ಟು 51,52,769 ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಮೊದಲ ದಿನ 5,71,023 ಮಹಿಳೆಯರು ಉಚಿತ ಪ್ರಯಾಣಿಸಿದ್ದು, ಒಟ್ಟು ₹1,40,22,878 ಕೋಟಿ ಟಿಕೆಟ್‌ ಮೊತ್ತವಾಗಿತ್ತು. ಎರಡನೇಯ ದಿನ ಅಂದರೆ, ಜೂನ್ 12ರಂದು ಒಟ್ಟು 1,03,67,039 ಪ್ರಯಾಣಿಕರು ಸಂಚರಿಸಿದ್ದು, ಈ ಪೈಕಿ 41,34,726 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹8,83,53,434 ಕೋಟಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೊತ್ತವಾಗಿದೆ.

ಜೂ. 11ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಕ್ತಿ ಯೋಜನೆಗೆ ಚಾಲನೆ ನೀಡಿದರು. ರಾಜ್ಯ ಸಾರಿಗೆ ನಾಲ್ಕು ನಿಗಮಗಳ ಲಕ್ಸುರಿ ಬಸ್‌ಗಳನ್ನು ಹೊರತುಪಡಿಸಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. 

Advertisements

ಮೊದಲ ದಿನದ ಅಂಕಿ-ಅಂಶ

ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಮಹಿಳೆಯರು ಪ್ರಯಾಣಿಸಿದ ವಿವರಗಳನ್ನು ನಿಗಮ ನೀಡಿದೆ.

ಜೂನ್ 11ರಂದು ನಾಲ್ಕು ಸಾರಿಗೆ ನಿಗಮಗಳ ವಾಹನದಲ್ಲಿ ಒಟ್ಟಾರೆಯಾಗಿ 5,71,023 ಮಹಿಳೆಯರು ಪ್ರಯಾಣಿಸಿದ್ದು, ಒಟ್ಟು ₹1,40,22,878 ಪ್ರಯಾಣಿಸಿದ ಮೊತ್ತವಾಗಿದೆ ಎಂದು ಸಾರಿಗೆ ನಿಗಮ ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಬಸ್‌ಗಳಲ್ಲಿ 1,93,831 ಮಹಿಳೆಯರು ಪ್ರಯಾಣಿಸಿದ್ದು, ₹58,16,178 ಪ್ರಯಾಣದ ಮೌಲ್ಯವಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳಲ್ಲಿ 2,01,215  ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ₹26,19,604 ಮೊತ್ತವಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲೂಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ 1,22,354 ಮಹಿಳೆಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದು, ₹36,17,096 ಪ್ರಯಾಣದ ಮೊತ್ತವಾಗಿದೆ.

ಎರಡನೇ ದಿನದ ಅಂಕಿ-ಅಂಶ

ಜೂನ್‌ 12ರಂದು ಒಟ್ಟು 1,03,67,039 ಪ್ರಯಾಣಿಕರು ಪ್ರಯಾಣಿಸಿದ್ದು, ಇದರಲ್ಲಿ 41,34,726 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕರಾರಸಾಸಂಸ್ಥೆಯಲ್ಲಿ ಒಟ್ಟು 36,31,075 ಪ್ರಯಾಣಿಕರ ಪೈಕಿ ಮಹಿಳೆಯರು 11,40,057 ಪ್ರಯಾಣಿಸಿದ್ದಾರೆ. ಮಹಿಳೆಯರ ಟಿಕೆಟ್ ಮೌಲ್ಯ ₹3,57,84,677 ಆಗಿದೆ.

ಬೆಂಮಸಾಸಂಸ್ಥೆಯಲ್ಲಿ 34,94,714 ಒಟ್ಟು ಪ್ರಯಾಣಿಕರಲ್ಲಿ 17,57,887 ಮಹಿಳಾ ಪ್ರಯಾಣಿಕರಿದ್ದು, ₹1,75,33,234 ಕೋಟಿ ಟಿಕೆಟ್‌ ಮೌಲ್ಯವಾಗಿದೆ.

ವಾಕರಸಾಸಂಸ್ಥೆಯಲ್ಲಿ 18,31,832 ಒಟ್ಟು ಪ್ರಯಾಣಿಕರಲ್ಲಿ 8,31,840 ಮಹಿಳೆಯರು ಪ್ರಯಾಣಿಸಿದ್ದಾರೆ. ಟಿಕೆಟ್‌ ಮೊತ್ತ ₹2,10,66,638 ಮೊತ್ತವಾಗಿದೆ.

ಕರಾರಸಾಸಂಸ್ಥೆಯಲ್ಲಿ 14,09,418 ಒಟ್ಟು ಪ್ರಯಾಣಿಕರಲ್ಲಿ 4,04,942 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹1,39,68,885 ಟಿಕೆಟ್‌ ಮೊತ್ತವಾಗಿದೆ.

ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ಮೊದಲ ದಿನ: 5 ಲಕ್ಷ ಮಹಿಳೆಯರ ಪ್ರಯಾಣ

ಮೂರನೇ ದಿನದ ಅಂಕಿ-ಅಂಶ

ಜೂನ್‌ 13 ರಂದು ಒಟ್ಟು 1,16,66,621 ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 51,52,769 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹10,82,02,191 ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯವಾಗಿದೆ.

ಕರಾರಸಾಸಂಸ್ಥೆಯಲ್ಲಿ 38,27,640 ಒಟ್ಟು ಪ್ರಯಾಣಿಕರಲ್ಲಿ 13,97,665 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹4,12,26,780 ಕೋಟಿ ಟಿಕೆಟ್‌ ಮೊತ್ತವಾಗಿದೆ.

ಬೆಂಮಸಾಸಂಸ್ಥೆಯಲ್ಲಿ 40,17,974 ಒಟ್ಟು ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 20,56,856 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹2,02,14,395 ಟಿಕೆಟ್ ಮೊತ್ತವಾಗಿದೆ.

ವಾಕರಸಾಸಂಸ್ಥೆಯಲ್ಲಿ 22,53,930 ಒಟ್ಟು ಪ್ರಯಾಣಿಕರಲ್ಲಿ 11,08,930 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹2,72,19,029 ಕೋಟಿ ಮಹಿಳಾ ಟಿಕೆಟ್‌ ಮೊತ್ತವಾಗಿದೆ.

ಕರಾರಸಾಸಂಸ್ಥೆಯಲ್ಲಿ 15,67,077 ಒಟ್ಟು ಪ್ರಯಾಣಿಕರ ಪೈಕಿ 5,89,318 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ₹1,95,41,987 ಕೋಟಿ ಮಹಿಳಾ ಟಿಕೆಟ್‌ ಮೊತ್ತವಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X