- ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕ
- ಕೋವಿಡ್‌ಗೆ 2021ರಲ್ಲಿ ಸಾವನ್ನಪ್ಪಿದ್ದ ಅವರ ಪತಿ
ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಿಯಾಂಕ 10 ದಿನದ ರಜೆಯ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರಕ್ಕೆ ತೆರಳಿದ್ದರು. ಭಾನುವಾರ ರಾತ್ರಿ 11:30ರ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪ್ರಿಯಾಂಕಾ 2018ರಲ್ಲಿ ಮದುವೆಯಾಗಿದ್ದಳು. ಆದರೆ, ಕೋವಿಡ್ ಮಹಾಮಾರಿಗೆ ಅವರ ಪತಿ 2021ರಲ್ಲಿ ಸಾವನ್ನಪ್ಪಿದ್ದರು. ಇವರ ಪತಿ ಸಾವನ್ನಪ್ಪಿದಾಗ ಪ್ರಿಯಾಂಕ ಒಂದು ತಿಂಗಳ ಗರ್ಭಿಣಿಯಾಗಿದ್ದರು. ಗಂಡನನ್ನು ಕಳೆದುಕೊಂಡರು ದೃತಿಗೆಡದೆ ಸಂಚಾರಿ ಪೊಲೀಸ್ ಕರ್ತವ್ಯದಲ್ಲಿ ನಿರತರಾಗಿದ್ದರು. ಜತೆಗೆ ಮಗುವಿಗೆ ಜನ್ಮವನ್ನು ನೀಡಿದ್ದರು.
ಅನಾಥವಾದ ಮಗು
ಹುಟ್ಟುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಇದೀಗ ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ಮಗುವಿಗೆ ಈಗ ಒಂದು ವರ್ಷವಾಗಿದೆ.