ಶಾಲೆಗಳಲ್ಲಿ ಸಾಮಾನ್ಯವಾಗಿ ಪ್ರಾರ್ಥನೆ ಮಾಡುವಾಗ ಕೇಳಿ ಬರುವ ಹಿಂದಿ ಪದ ‘ಸಾವ್ಧಾನ್’ ಮತ್ತು ‘ವಿಶ್ರಾಮ್’. ಈ ಹಿಂದಿ ಪದದ ಕಮಾಂಡ್ಗೆ ಇದೀಗ ಬೆಂಗಳೂರು ನಗರ ಪೊಲೀಸರು ಕೊನೆ ಹಾಡಿದ್ದಾರೆ.
ಪೊಲೀಸ್ ಪರೇಡ್ನಲ್ಲಿ ಅಥವಾ ಗೌರವ ವಂದನೆ ನಡೆಯುವಾಗ ಸಾಮಾನ್ಯವಾಗಿ ಮೊದಲಿನಿಂದಲೂ ಹಿಂದಿಯ ಈ ಪದಗಳನ್ನು ಬಳಸಲಾಗುತ್ತಿತ್ತು. ಇದೀಗ, ಈ ಹಿಂದಿ ಪದಗಳ ಬದಲಾಗಿ ಕನ್ನಡದಲ್ಲಿ ಕಮಾಂಡ್ ನೀಡುವ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ.
ಹಿಂದಿಯಲ್ಲಿ ಕೇಳಿಬರುತ್ತಿದ್ದ ಸಾವ್ಧಾನ್, ವಿಶ್ರಾಮ್ ಎಂಬ ಪದದ ಬದಲಾಗಿ ಕನ್ನಡದಲ್ಲಿ ಬಹಳಪಡೆ ವಂದನಾ ಶಸ್ತ್ರ ಮತ್ತು ಬಹಳಪಡೆ ವಿಸರ್ಜನೆ ಎಂಬ ಪದ ಬಳಕೆ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ, “ಕನ್ನಡದ ಮಾತು ಚಂದ; ಕನ್ನಡದ ಕಮಾಂಡ್‌ಗಳು ಇನ್ನೂ ಚಂದ. ಏನಂತಿರಾ…?” ಎಂದು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನು ಲವ್ ಜಿಹಾದ್ಗೆ ಒಳಗಾಗಿದ್ದೇನೆ ಸಹಾಯ ಮಾಡಿ ಎಂದು ಪೊಲೀಸರಿಗೆ ಟ್ವೀಟ್ ಮಾಡಿದ ಯುವತಿ
ಕನ್ನಡದಲ್ಲಿ ಕಮಾಂಡ್ ಹೇಳುವ ವಿಡಿಯೊ ತುಣುಕುವೊಂದನ್ನು ಆಯುಕ್ತರು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಕನ್ನಡದಲ್ಲೇ ಕಮಾಂಡ್ ನೀಡುತ್ತಿದ್ದಾರೆ.
ಆಯುಕ್ತರ ಈ ಟ್ವೀಟ್‌ಗೆ ಹಲವು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ರಾಜೋತ್ಸವಕ್ಕೆ ಒಂದು ತಿಂಗಳಿರುವಾಗಲೇ ಕಾರ್ಯಕ್ರಮಕ್ಕೆ ಪೊಲೀಸರು ತಯಾರಿ ನಡೆಸುತ್ತಿದ್ದಾರೆ.