- ಬೆಳಗ್ಗೆ 8ರಿಂದ 12 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ
- ಭಾನುವಾರ ನಗರದ 23 ರಸ್ತೆಗಳಲ್ಲಿ ಸಂಚರಿಸಲಿರುವ ಪ್ರಧಾನಿ ಮೋದಿ
ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ಮತಬೇಟೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ 28 ಕಿ.ಮೀ ರೋಡ್ ಶೋ ನಡೆಸಿದ್ದಾರೆ. ಭಾನುವಾರವೂ ಪ್ರಧಾನಿ ಅವರ ರೋಡ್ ಶೋ ಮುಂದುವರೆಯಲಿದ್ದು, ನಗರದ 23 ರಸ್ತೆಗಳಲ್ಲಿ ಮೋದಿ ಸಂಚರಿಸಲಿದ್ದಾರೆ. ಈ ವೇಳೆ, ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಭಾನುವಾರ ಮಹದೇವಪುರ, ಕೆ ಆರ್ ಪುರಂ, ಸಿವಿ ರಾಮನ್ ನಗರ, ಶಿವಾಜಿನಗರ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರ ರೋಡ್ ಶೋ ಬೆಳಗ್ಗೆ 10 ರಿಂದ 11.30ರ ಅವಧಿಯಲ್ಲಿ ನಡೆಯಲಿದೆ.
ಬೆಳಗ್ಗೆ 8ರಿಂದ 12 ಗಂಟೆಯವರೆಗೆ ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ರೇಸ್ಕೋರ್ಸ್ ರಸ್ತೆ, ಟಿ ಚೌಡಯ್ಯ ರಸ್ತೆ, ರಮಣಮಹರ್ಷಿ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜನ್ದಾಸ್ ರಸ್ತೆ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೇಸ್ಕೋರ್ಸ್ ರಸ್ತೆ, ಜಗದೀಶ ನಗರ ಕ್ರಾಸ್ ರಸ್ತೆ, ಜೆಬಿ ನಗರ ಮುಖ್ಯ ರಸ್ತೆ, ಬಿಇಎಂಎಲ್ ಜಂಕ್ಷನ್, ನ್ಯೂ ತಿಪ್ಪಸಂದ್ರ ಮಾರ್ಕೆಟ್ ರಸ್ತೆ, 80 ಅಡಿ ರಸ್ತೆ ಇಂದಿರಾನಗರ, ನ್ಯೂ ತಿಪ್ಪಸಂದ್ರ ರಸ್ತೆ, 12ನೇ ಮುಖ್ಯ ರಸ್ತೆ 100 ಅಡಿ ರಸ್ತೆ, ಇಂದಿರಾ ನಗರ, ಕಾವೇರಿ ಸ್ಕೂಲ್, ಸಿಎಂಎಚ್ ರಸ್ತೆ, 17ನೇ ಕ್ರಾಸ್, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ಸ್ಟೇಷನ್, ಟ್ರಿನಿಟಿ ಜಂಕ್ಷನ್ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.