‘ನಮ್ಮ ಮೆಟ್ರೋ’ ಕಾಮಗಾರಿ ವೇಳೆ 30ಕ್ಕೂ ಹೆಚ್ಚು ಬಲಿ; ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ನಿಗಮ

Date:

Advertisements
  • 2007ರಲ್ಲಿ ಪ್ರಾರಂಭವಾದ ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ 38 ಜನರು ಸಾವು
  • ಇದುವರೆಗೆ ಸಂತ್ರಸ್ತ ಕುಟುಂಬಗಳಿಗೆ ₹3.15 ಕೋಟಿ ಪರಿಹಾರ ನೀಡಿದ ಗುತ್ತಿಗೆದಾರರು

‘ನಮ್ಮ ಮೆಟ್ರೋ’ ನಿರ್ಮಾಣ ಕಾಮಗಾರಿ ವೇಳೆ ಇಲ್ಲಿಯವರೆಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಯಾವುದೇ ಕ್ರಮ ಕೈಗೊಂಡಿಲ್ಲ.

2007ರಲ್ಲಿ ಪ್ರಾರಂಭವಾದ ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ ಇಲ್ಲಿಯವರೆಗೆ 38 ಜನರು ಸಾವನ್ನಪ್ಪಿದ್ದಾರೆ. 50 ಜನರು ಗಾಯಗೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. 2023ರ ಜನವರಿಯಲ್ಲಿ ನಡೆದ ಅಪಘಾತವನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಅಪಘಾತಗಳಲ್ಲಿ ಗುತ್ತಿಗೆ ಸಿಬ್ಬಂದಿಗಳು ಬಲುಯಾಗಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

ಬಿಎಂಆರ್‌ಸಿಎಲ್‌ ರೀಚ್ 2 ವಿಸ್ತರಣೆಯಲ್ಲಿ (ಪರ್ಪಲ್ ಲೈನ್‌ನ ಪಶ್ಚಿಮ ಭಾಗ) ಎರಡು ಸಾವುಗಳು ಸಂಭವಿಸಿವೆ. ನಿರ್ಮಾಣದ ಸಮಯದಲ್ಲಿ ಯಾವುದೇ ಸಾರ್ವಜನಿಕ ಸದಸ್ಯರು ಗಾಯಗೊಂಡಿಲ್ಲ ಅಥವಾ ಸಾವನ್ನಪ್ಪಿಲ್ಲ ಎಂದು ನಿಗಮ ಹೇಳಿದೆ.

Advertisements

ಬಿಎಂಆರ್‌ಸಿಎಲ್ ಗೊಟ್ಟಿಗೆರೆಯಿಂದ ಡೈರಿ ವೃತ್ತದವರೆಗಿನ ರೀಚ್ 6 ಎಲಿವೇಟೆಡ್ ಭಾಗದ ಕಾಮಗಾರಿಯಲ್ಲಿ ಡೆಲಿವರಿ ಬಾಯ್ ಸುಶೀಲ್ ಕಾಂಚನ್ ಮತ್ತು ಅನಂದಪ್ಪ ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಈ ಅವಧಿಯಲ್ಲಿ ಈ ಇಬ್ಬರು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ ಎಂದು ನಿಗಮ ವಿವರ ನೀಡಿದೆ.

ಮೃತಪಟ್ಟ ಸುಶೀಲ್ ಅವರ ಕುಟುಂಬಕ್ಕೆ ಗುತ್ತಿಗೆದಾರರು ಪಾವತಿಸಿದ ಪರಿಹಾರದ ಮೊತ್ತವನ್ನು ದಾಖಲೆಯಲ್ಲಿ ಬಹಿರಂಗಪಡಿಸಿಲ್ಲ ಮತ್ತು ಅನಂದಪ್ಪ ಅವರ ಕುಟುಂಬದವರು ಪರಿಹಾರವನ್ನು ಪಡೆಯಲು ನಿರಾಕರಿಸಿದ್ದರು. ಇತರ 29 ಮಂದಿಯ ಸಾವಿಗೆ ಸಂಬಂಧಿಸಿದಂತೆ ನಿಗಮ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಅಪಘಾತಗಳ ಕಾರಣವನ್ನು ಅಧ್ಯಯನ ಮಾಡಲು ಸುರಕ್ಷತಾ ಎಚ್ಚರಿಕೆಗಳು ಮತ್ತು ನಿರ್ದೇಶನಗಳೊಂದಿಗೆ ಹಾಗೇಯೇ ಬಿಟ್ಟ ಅಧಿಕಾರಿಗಳ ವಿರುದ್ಧ ನಿಗಮ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪಟ್ಟಿ ಮಾಡಲಾದ ಎಲ್ಲ ಪ್ರಕರಣಗಳಲ್ಲಿ ಕಾರ್ಮಿಕರ ನಿರ್ಲಕ್ಷ್ಯ ಅಥವಾ ಗುತ್ತಿಗೆದಾರರು ಕೆಲಸ ಪ್ರಾರಂಭಿಸುವ ಮೊದಲು ಅಧಿಕಾರಿಗಳಿಗೆ ತಿಳಿಸಿಲ್ಲ ಎಂಬ ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಗುತ್ತಿಗೆದಾರರಿಗೆ ನೋಟೀಸ್‌ ನೀಡಲಾಗಿದೆ. ಅಥವಾ 1 ಲಕ್ಷದಿಂದ 5 ಲಕ್ಷದವರೆಗೆ ದಂಡವನ್ನು ವಿಧಿಸಲಾಯಿತು. ಸಂತ್ರಸ್ತರಿಗೆ ಅಥವಾ ಅವರ ಕುಟುಂಬಗಳಿಗೆ ₹5.5 ಲಕ್ಷದಿಂದ ₹16 ಲಕ್ಷದವರೆಗೆ ಪರಿಹಾರವನ್ನು ನೀಡಲಾಯಿತು ಎಂದು ಮಾಹಿತಿ ನೀಡಿದೆ.

ಪಟ್ಟಿ ಮಾಡಲಾದ ಒಂಬತ್ತು ಪ್ರಕರಣಗಳಲ್ಲಿ ಐದರಲ್ಲಿ ಗುತ್ತಿಗೆದಾರರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ.

ಜನವರಿಯಲ್ಲಿ ಎಚ್‌ಬಿಆರ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮತ್ತು ಆಕೆಯ ಪುಟ್ಟ ಮಗು ಸಾವನ್ನಪ್ಪಿದ ಪ್ರಕರಣದ ನಂತರ, ಬಿಎಂಆರ್‌ಸಿಎಲ್ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಗುತ್ತಿಗೆದಾರರಿಗೆ ₹15 ಲಕ್ಷ ದಂಡ ವಿಧಿಸಿ ಅವರಿಂದ ಕಾರಣ ಕೇಳಿದೆ. ಗುತ್ತಿಗೆದಾರರು, ಮೂವರು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದೆ.

ಈ ಸುದ್ದಿ ಓದಿದ್ದೀರಾ? ಸುರಕ್ಷಿತ ಮಟ್ಟಕ್ಕಿಂತ ಕೆಟ್ಟದಾದ ಬೆಂಗಳೂರಿನ ವಾಯು ಗುಣಮಟ್ಟ: ವರದಿ

ಇದುವರೆಗೆ ಗುತ್ತಿಗೆದಾರರು ಸಂತ್ರಸ್ತರ ಕುಟುಂಬಗಳಿಗೆ ₹3.15 ಕೋಟಿ ಪರಿಹಾರ ನೀಡಿದ್ದರೆ, ಬಿಎಂಆರ್‌ಸಿಎಲ್‌ ಗುತ್ತಿಗೆದಾರರಿಂದ ₹1.77 ಕೋಟಿ ದಂಡ ವಿಧಿಸಿದೆ.

ಕಾಮಗಾರಿ ವೇಳೆ ಅಪಘಾತ ಸಂಭವಿಸಿದರೆ, ಗಾಯವಾಗಿದ್ದರೆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಗುತ್ತಿಗೆದಾರರೇ ಭರಿಸುತ್ತಾರೆ. ಕಾರ್ಮಿಕರು ಸುರಕ್ಷತಾ ಹೆಲ್ಮೆಟ್ ಮತ್ತು ಬಲವರ್ಧಿತ ಬೂಟುಗಳನ್ನು ಧರಿಸಬೇಕು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸುದ್ದಿ ಮಾಹಿತಿ : ಡೆಕ್ಕನ್ ಹೆರಾಲ್ಡ್‌

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X