ರಾಜ್ಯ ರಾಜಧಾನಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ, ಜುಲೈ 18 ರಾತ್ರಿ 12 ಗಂಟೆಯಿಂದ ಮುಂದಿನ ಸೂಚನೆಯವರೆಗೆ ಪ್ಲಾಟ್ಫಾರ್ಮ್ ನಂ 1ರ (ಯಶವಂತಪುರ ಮಾರುಕಟ್ಟೆ) ಬದಿಯಿಂದ ನಿಲ್ದಾಣದ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಪ್ಲಾಟ್ಫಾರ್ಮ್ಗಳನ್ನು ಪ್ರವೇಶಿಸಲು ಪ್ಲಾಟ್ಫಾರ್ಮ್ ಸಂಖ್ಯೆ 6 (ತುಮಕೂರು ರಸ್ತೆಯ ಯಶವಂತಪುರ ಮೆಟ್ರೋ ನಿಲ್ದಾಣದ) ಕಡೆ ಇರುವ ಪ್ರವೇಶವನ್ನು ಬಳಸಲು ರೈಲ್ವೆ ಇಲಾಖೆ ವಿನಂತಿಸಲಾಗಿದೆ.
“ಎಲ್ಲ ಪ್ಲಾಟ್ಫಾರ್ಮ್ಗಳು ನಿಲ್ದಾಣದ ಎರಡೂ ಬದಿಗಳಲ್ಲಿ ಪಾದಚಾರಿ ಸೇತುವೆಗಳೊಂದಿಗೆ ಸಂಪರ್ಕ ಹೊಂದಿವೆ. ಶುಲ್ಕ ನೀಡಿ ಬಳಸಬಹುದಾದ ಬ್ಯಾಟರಿ ಚಾಲಿತ ಕಾರ್ ವ್ಯವಸ್ಥೆಯೂ ಲಭ್ಯವಿದೆ. ವಾಹನ ನಿಲುಗಡೆ ಸೌಲಭ್ಯವು ಪ್ಲಾಟ್ಫಾರ್ಮ್ ಸಂಖ್ಯೆ 6ರ ಕಡೆ ಪ್ರವೇಶದಲ್ಲಿ ಮಾತ್ರ ಇರುತ್ತದೆ” ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬ್ರ್ಯಾಂಡ್ ಬೆಂಗಳೂರು | ಮನೆ ಬಾಗಿಲಿಗೆ ಆಸ್ತಿ ದಾಖಲೆ ತಲುಪಿಸುವ ವ್ಯವಸ್ಥೆ ಜಾರಿ: ಡಿ ಕೆ ಶಿವಕುಮಾರ್
“ನಿಲ್ದಾಣದಲ್ಲಿ ಡಿಜಿಟಲ್ ಮಾಹಿತಿ ಫಲಕಗಳ ಸೇವೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದು, ಈ ಅವಧಿಯಲ್ಲಿ ಹಸ್ತಚಾಲಿತ ಪ್ರಕಟಣೆಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.