ಕರ್ನಾಟಕ ರಾಜ್ಯಪಾಲರನ್ನು ಬಿಟ್ಟು ಹೈದರಾಬಾದ್‌ಗೆ ಹಾರಿದ ವಿಮಾನ; ದೂರು ದಾಖಲು

Date:

Advertisements
  • ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿಮಾನ ತಪ್ಪಿಸಿಕೊಂಡ ರಾಜ್ಯಪಾಲರು
  • ಒಂದು ಗಂಟೆ ತಡವಾಗಿ ಹೈದರಾಬಾದ್​ಗೆ ತೆರಳಿದ ರಾಜ್ಯಪಾಲರು

ಹೈದರಾಬಾದ್‌ಗೆ ತೆರಳಬೇಕಿದ್ದ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅವರನ್ನು ಬಿಟ್ಟು ವಿಮಾನ ಹಾರಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಜುಲೈ 28ರಂದು ರಾಜ್ಯಪಾಲರು ಹೈದರಾಬಾದ್‌ಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆಯ ವಿಮಾನದಲ್ಲಿ ಹೋಗಲು ನಿಲ್ದಾಣಕ್ಕೆ 1:30ಕ್ಕೆ ಆಗಮಿಸಿದ್ದರು. ಏರ್‌ ಏಷ್ಯಾ ವಿಮಾನ ಹೊರಡಲು ಇನ್ನೂ ಸಮಯವಿದೆ ಎಂದು ಸಿಬ್ಬಂದಿ ರಾಜ್ಯಪಾಲರನ್ನು ವಿಐಪಿ ಲಾಂಜ್​ನಲ್ಲಿ ಕೂರಿಸಿ, ವಿಮಾನದಲ್ಲಿ ಲಗೇಜ್ ಇಟ್ಟು ಬಂದಿದ್ದರು.

ತುಂಬಾ ಹೊತ್ತು ಕಾದು ಕುಳಿತ ರಾಜ್ಯಪಾಲರು ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ವಿಮಾನ ಹತ್ತಲು ಹೋಗಿದ್ದಾರೆ. ಆದರೆ, ಇತ್ತ ಕಡೆ ಸಮಯ ಆದ್ದರಿಂದ ವಿಮಾನ ಟೇಕಾಫ್ ಆಗಿ ಹೈದರಾಬಾದ್‌ಗೆ ಹಾರಿದೆ.

Advertisements

ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಜ್ಯಪಾಲರು ವಿಮಾನವನ್ನು ತಪ್ಪಿಸಿಕೊಂಡಿದ್ದು, ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್​ಗೆ ಕಳುಹಿಸಿಕೊಟ್ಟಿದ್ದಾರೆ. 

ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಜ್ಯಪಾಲರು ಒಂದು ಗಂಟೆ ತಡವಾಗಿ ಹೈದರಾಬಾದ್​ಗೆ ತೆರಳಬೇಕಾಯಿತು. ಸಿಬ್ಬಂದಿಯ ಈ ನಿರ್ಲಕ್ಷ್ಯವನ್ನು ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಂಕಿತ ಉಗ್ರರಿಗೆ ಪಿಸ್ತೂಲ್ ಸರಬರಾಜು ಮಾಡಿದ್ದವನ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು

ಕರ್ನಾಟಕ ರಾಜ್ಯಪಾಲರಿಗೆ ವಿಮಾನ ತಪ್ಪಿ ಅವರು ಒಂದು ಗಂಟೆ ತಡವಾಗಿ ಮತ್ತೊಂದು ಫ್ಲೈಟ್‌ ಮುಖಾಂತರ ಹೈದರಾಬಾದ್‌ಗೆ ತೆರಳುವಂತಾಯಿತು. ಈ ಹಿನ್ನೆಲೆ, ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್​ ಠಾಣೆಗೆ ಏರ್ ಏಷ್ಯಾ ಏರ್​​ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ.

ವಿಮಾನ ಮಿಸ್‌ ಆಗಲು ಕಾರಣ ತಿಳಿಸುವ ಜತೆಗೆ ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X