“ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ನಮಗೆ 10 ವರ್ಷಗಳು ಬೇಕಾಯಿತು. ನಾವು ಇನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ” ಎಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ) ಶಾಹೀನ್ ಶಾಸಾ ಹೇಳಿದರು.
ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಬಿಬಿಪಿವಿ 10ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬಸ್ ಸಮಸ್ಯೆಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳ ಧ್ವನಿಯನ್ನು ಜೀವಂತವಾಗಿಡಲು ವೇದಿಕೆಯ ಸದಸ್ಯರು ಶ್ರಮಿಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆಯ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ಹೊಂದಿರುವ ಧೋರಣೆಯ ವಿರುದ್ಧ ಹೋರಾಡುತ್ತಿದ್ದೇವೆ. ಈಗ ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಯ ಬಗ್ಗೆ ಮಾತನಾಡುತ್ತಿದ್ದಾರೆ” ಎಂದರು.
“ನಗರದಲ್ಲಿ ಸಾರಿಗೆ ಬಸ್ ವ್ಯವಸ್ಥೆಯನ್ನು ಹೇಗೆ ಯೋಜಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂಬ ಬಗ್ಗೆ ಎಲ್ಲ ಸಾರಿಗೆ ಇಲಾಖೆ, ಸಾರಿಗೆ ಸಂಸ್ಥೆ ಮತ್ತು ಏಜೆನ್ಸಿಗಳು ಮರುಪರಿಶೀಲಿಸುವ ಅಗತ್ಯವಿದೆ. ನಗರಕ್ಕೆ ಇನ್ನೂ ಹೆಚ್ಚಿನ ಬಸ್ಗಳ ಅಗತ್ಯವಿದೆ. ವಿಶೇಷವಾಗಿ ನಾನಾ ರೀತಿಯ ಬಸ್ಗಳು ಕಾರ್ಯಾಚರಣೆ ನಡೆಸಬೇಕು. ಸಾರಿಗೆ ಬಸ್ಗಳಿಗೆ ಆದ್ಯತೆ ನೀಡುವ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡುವ ಅಗತ್ಯವಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಆವರಣದಲ್ಲಿ ಅಗ್ನಿ ಅವಘಡ; ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
“ಸುರಂಗ ರಸ್ತೆಗಳು ಮತ್ತು ಸಂಯೋಜಿತ ಕಾರಿಡಾರ್ಗಳಂತಹ ಯೋಜನೆಗಳನ್ನು ವಿರೋಧಿಸುತ್ತಿದ್ದೇವೆ. ಏಕೆಂದರೆ, ಅವುಗಳು ಬಸ್ಗಳಿಗೆ ಸಂಚಾರ ಜಾಗವನ್ನು ಕುಗ್ಗಿಸುತ್ತವೆ” ಎಂದು ಹೇಳಿದರು.