ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಐಟಿಎಂಎಸ್ ಅಳವಡಿಕೆ; 18.34 ಲಕ್ಷ ಪ್ರಕರಣ ದಾಖಲು

Date:

Advertisements

ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಕೃತಕ ಬುದ್ಧಿಮತ್ತೆ (ಎ.ಐ) ಸಂಚಾರ ನಿರ್ವಹಣಾ ವ್ಯವಸ್ಥೆಯಡಿ (ಐಟಿಎಂಎಸ್) ಬೆಂಗಳೂರು ನಗರದಲ್ಲಿ ಆಧುನಿಕ ಮಾದರಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ಮೂರು ತಿಂಗಳಿನಲ್ಲಿ 18.34 ಲಕ್ಷ ಪ್ರಕರಣಗಳು ದಾಖಲಾಗಿವೆ. 80.61 ಕೋಟಿ ರೂ. ದಂಡ ವಿಧಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಸಂಪರ್ಕ ರಹಿತವಾಗಿ ದಂಡ ವಿಧಿಸಲು ಬೆಂಗಳೂರು ನಗರದ 50 ಜಂಕ್ಷನ್‌ಗಳಲ್ಲಿ 250 ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಈ ಕ್ಯಾಮೆರಾಗಳು ಸಕ್ರಿಯವಾಗಿದ್ದು, ನಿಯಮ ಉಲ್ಲಂಘಿಸುವವರ ಫೋಟೊವನ್ನು ಕ್ಲಿಕ್ಕಿಸುತ್ತಿವೆ. ವಾಹನ ನೋಂದಣಿ ಸಂಖ್ಯೆ ಆಧರಿಸಿ ಐಟಿಎಂಎಸ್ ಮೂಲಕ ಮಾಲೀಕರಿಗೆ ದಂಡದ ಬಗ್ಗೆ ಸಂದೇಶಗಳು ರವಾನೆಯಾಗುತ್ತಿವೆ.

ಅತಿ ವೇಗದ ಚಾಲನೆ, ಜೀಬ್ರಾ ಕ್ರಾಸಿಂಗ್, ಸಿಗ್ನಲ್‌ ಜಂಪ್‌, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್ ಸೇರಿದಂತೆ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದೂ ಕೂಡ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ.

Advertisements

“ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ. ಸಂಚಾರ ನಿಯಮ ಉಲ್ಲಂಘನೆ ಪತ್ತೆ ಮಾಡುವುದರಲ್ಲಿ ಹೆಚ್ಚು ಸಮಯ ಹೋಗುತ್ತಿತ್ತು. ಹಾಗಾಗಿ, ಸ್ವಯಂಚಾಲಿತ ಕ್ಯಾಮೆರಾ ಅಳವಡಿಸಲಾಗಿದೆ. ಇದೀಗ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ” ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ ಸಲೀಂ ಹೇಳಿದ್ದಾರೆ.

“ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ್ದ ಸವಾರ ಹಾಗೂ ಹಿಂಬದಿ ಸವಾರರ ಫೋಟೊವನ್ನು ಕ್ಯಾಮೆರಾಗಳು ಸೆರೆ ಹಿಡಿದಿವೆ. ನಿಯಮ ಉಲ್ಲಂಘಿಸಿದ್ದ 10.50 ಲಕ್ಷ ಮಂದಿಗೆ ದಂಡ ವಿಧಿಸಲಾಗಿದ್ದು, ಅವರಿಗೆ ಸಂದೇಶವನ್ನೂ ಕಳುಹಿಸಲಾಗಿದೆ” ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

2023ರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಬೆಂಗಳೂರು ನಗರದಲ್ಲಿ 1197 ಅಪಘಾತಗಳು ಸಂಭವಿಸಿದ್ದು, 205 ಮಂದಿ ಮೃತಪಟ್ಟಿದ್ದಾರೆʼ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಪಿಂಚಣಿ ಪರಿಷ್ಕರಣೆಗೆ ಆಗ್ರಹಿಸಿ ನಿವೃತ್ತ ಉದ್ಯೋಗಿಗಳಿಂದ ಉಪವಾಸ ಸತ್ಯಾಗ್ರಹ

ಸರಕಾರಿ ಬ್ಯಾಂಕ್ ಪಿಂಚಣಿದಾರಿಗೆ ಮತ್ತು ನಿವೃತ್ತಿ ವೇತನದಾರರಿಗೆ ಪಿಂಚಣಿ ಪರಿಷ್ಕರಣೆ ಮಾಡಬೇಕು...

ದ್ವೇಷ, ಸುಳ್ಳಿನ ವಿರುದ್ಧ ಕಾನೂನು ತರುವುದಕ್ಕೂ ಮುನ್ನ ಸರ್ಕಾರ ಸಮಗ್ರವಾದ ಚರ್ಚೆ ನಡೆಸಲಿ: ಶಿವಸುಂದರ್

ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ದ್ವೇಷ, ಸುಳ್ಳು ಸುದ್ದಿಗಳ ಪ್ರಚಾರದ ವಿರುದ್ಧ ಕಾನೂನು ತರಲು...

ಬೆಂಗಳೂರು | ಉದ್ಧಟತನ ತೋರಿದ ಜಿ. ಪಲ್ಲವಿಯವರ ಆಪ್ತ ಕಾರ್ಯದರ್ಶಿ ವರ್ಗ, ನಮ್ಮ ಹೋರಾಟಕ್ಕೆ ಜಯ: ಲೋಹಿತಾಕ್ಷ ಬಿ ಆರ್

ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ....

ಅನೇಕ ಪ್ರಕರಣಗಳಲ್ಲಿ ಸಾಕ್ಷಿಯಿದ್ದರೂ ತದ್ವಿರುದ್ಧ ತೀರ್ಪು: ಮಾಲೆಗಾಂವ್ ತೀರ್ಪಿಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ

ಅನೇಕ ಪ್ರಕರಣಗಳಲ್ಲಿ ಸಾಕ್ಷಿಗಳಿದ್ದರೂ ಕೂಡ ತದ್ವಿರುದ್ಧವಾಗಿ ತೀರ್ಪು ಪ್ರಕಟವಾಗಿರುವ ಉದಾಹರಣೆಗಳು ಇವೆ....

Download Eedina App Android / iOS

X