ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಪಬ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಪಬ್ ನಿಗದಿತ ಅವಧಿಗಿಂತಲೂ ಅಧಿಕ ಅವಧಿಯವರೆಗೂ ತೆರೆದಿರುವ ಕಾರಣ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ವಿರಾಟ್ ಕೊಹ್ಲಿ ಒಡೆತನದ ಪಬ್ ಮಾತ್ರವಲ್ಲದೆ ಅವಧಿ ಮೀರಿ ಕಾರ್ಯನಿರ್ವಹಿಸಿದ ಆರೋಪದಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆಯೂ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಪ್ರಧಾನಿ ಜೊತೆಗಿನ ಸಂವಾದದ ವೇಳೆ ‘ಅಹಂಕಾರ’ವನ್ನು ಉಲ್ಲೇಖಿಸಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್
ಸಾಮಾನ್ಯವಾಗಿ ಪಬ್‌ಗಳು ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ತೆರೆದಿರಲು ಅವಕಾಶವಿದೆ. ಆದರೆ ಒನ್ 8 ಕಮ್ಯೂನ್ ಪಬ್ ಮಧ್ಯರಾತ್ರಿ 1.30ರವರೆಗೆ ತೆರೆದಿರುವುದು ಕಂಡುಬಂದಿದೆ. ಜೋರಾದ ಸಂಗೀತದ ಬಗ್ಗೆ ದೂರು ಕೇಳಿ ಬಂದ ಕಾರಣ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.
ವಿರಾಟ್ ಕೊಹ್ಲಿಯವರ ಈ ಪಬ್ 2019ರಲ್ಲಿ ಆರಂಭವಾಗಿದೆ. ಇದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಇದೆ.