ಕೆಕೆಆರ್‌ಟಿಸಿ | ಪ್ರೀಮಿಯಂ ರಹಿತ ₹1.20 ಕೋಟಿ ಅಪಘಾತ ಪರಿಹಾರ‌ ವಿಮಾ ಯೋಜನೆ ಜಾರಿ

Date:

Advertisements

ಕಲ್ಯಾಣ‌ ಕರ್ನಾಟಕ‌ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಕೆಆರ್‌ಟಿಸಿ) ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಹಗಲಿರಳು ಶ್ರಮಿಸುತ್ತಿರುವ ನಿಗಮದ ಸಿಬ್ಬಂದಿಗೆ ಸಂಸ್ಥೆಯಿಂದ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದೀಗ, ಮತ್ತೊಂದು ಮಹತ್ವದ ಯೋಜನೆಯಾದ ಪ್ರೀಮಿಯಂ ರಹಿತ ₹1.20 ಕೋಟಿ ಅಪಘಾತ ಪರಿಹಾರ‌ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ನಿಗಮ ಮಾಹಿತಿ ನೀಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ನಿಗಮ, “ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಉಪಸ್ಥಿತಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹಾಗೂ ಕರ್ನಾಟಕ ವಲಯ ಮುಖ್ಯಸ್ಥ ನವನೀತ್ ಕುಮಾರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅವರೊಂದಿಗೆ ಒಡಂಬಡಿಕೆ ವಿನಿಮಯ ಮಾಡಿಕೊಂಡರು” ಎಂದು ತಿಳಿಸಿದೆ.

ಈ ವೇಳೆ ಮಾತನಾಡಿದ ಸಚಿವರು, “ಅಪಘಾತದಿಂದ ನಿಗಮದ ಸಿಬ್ಬಂದಿಗೆ ಉಂಟಾಗುತ್ತಿರುವ ಸಾವು-ನೋವಿನ ಪ್ರಮಾಣ ಗಮನಿಸಿ ನೌಕರರು ವೈಯಕ್ತಿಕ / ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ಅಂಗನ್ಯೂನತೆಗೆ ಒಳಗಾದಲ್ಲಿ ಸಿಬ್ಬಂದಿಗೆ ವಿಮೆ ಮೊತ್ತ ಹೋಗಲಿದೆ. ಅಥವಾ ಸಿಬ್ಬಂದಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಗಣನೀಯ ಮೊತ್ತದಷ್ಟು ಹಣ ದೊರೆಯುವಂತೆ ಮಾಡುವ ಉದ್ದೇಶದಿಂದ ಡಿ.21 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅವರೊಂದಿಗೆ ಯೋಜನೆಯ ಸೌಲಭ್ಯ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರೀಮಿಯಂ ರಹಿತವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಹಕರಿಸಿದ ಯೂನಿಯನ್ ಬ್ಯಾಂಕ್ ಅವರಿಗೆ ಧನ್ಯವಾದ” ಎಂದು ತಿಳಿಸಿದರು.

Advertisements

ಈ ಯೋಜನೆಯಡಿ ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಅಪಫಾತವಾಗಿ ನಿಧನರಾದಲ್ಲಿ ಅಂತಹ ನೌಕರರ ಅವಲಂಬಿತರಿಗೆ ₹1.20 ಕೋಟಿ ಅಪಘಾತ ವಿಮೆ ಹಣ ದೊರಕಲಿದೆ.

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲೂ ಕೊರೋನಾ ಸೋಂಕು ದಿನೇ ದಿನೆ ಏರಿಕೆ : ಬೆಂಗಳೂರಿನಲ್ಲಿ 19 ಕೇಸ್ ಪತ್ತೆ

ನೌಕರರು ಶಾಶ್ವತ ಅಂಗನ್ಯೂನತೆ ಅಥವಾ ಭಾಗಶಃ ಶಾಶ್ವತ ಅಂಗನ್ಯೂನತೆಗೆ ಒಳಗಾದಲ್ಲಿ ₹1 ಕೋಟಿ ಪಡೆಯಬಹುದಾಗಿದೆ. ಡೆಬಿಟ್ ಕಾರ್ಡ್ ಮೇಲೆ ₹15 ಲಕ್ಷಗಳ ಅಪಘಾತ ವಿಮಾ ಸೌಲಭ್ಯವನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಅಪಘಾತವಲ್ಲದ ಸ್ವಾಭಾವಿಕ ಮರಣಕ್ಕೆ ₹5 ಲಕ್ಷ ವಿಮೆದೊಂದಿಗೆ ಇತರೆ ಹೆಚ್ಚುವರಿ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದೆ.

ದೇಶದ ಸಾರಿಗೆ ನಿಗಮಗಳಲ್ಲಿ ಮೊದಲ ಬಾರಿಗೆ ₹1.20 ಕೋಟಿ ಅಪಘಾತ ವಿಮೆ ಸಾರಿಗೆ ನೌಕರರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾರಿಗೆ ತರಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X