ಮಂಗಳವಾರ ರಾತ್ರಿ ‘ನಮ್ಮ ಮೆಟ್ರೋ’ ಹಸಿರು ಮಾರ್ಗದಲ್ಲಿ ಸಂಚರಿಸಿದ ರೋಡ್ ಕಮ್ ರೈಲ್ ವಾಹನವು ಆಯತಪ್ಪಿದ್ದ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಸದ್ಯ ಆರ್.ಆರ್.ವಿ ಅನ್ನು ಕ್ರೇನ್ ಸಹಾಯದಿಂದ ಟ್ರ್ಯಾಕ್ನಿಂದ ತೆರವುಗೊಳಿಸಲಾಗಿದ್ದು, ಮಧ್ಯಾಹ್ನ 03:40ರ ಬಳಿಕ ಕಾರ್ಯಾಚರಣೆಯನ್ನು ಎಂದಿನಂತೆ ಪುನರಾರಂಭಿಸಲಾಗಿದೆ.
'ನಮ್ಮ ಮೆಟ್ರೋ' ಹಸಿರು ಮಾರ್ಗದಲ್ಲಿ ಸಿಲುಕಿದ್ದ ಆರ್.ಆರ್.ವಿ(ರೋಡ್ ಕಮ್ ರೈಲ್) ವಾಹನವನ್ನು ಕ್ರೇನ್ ಸಹಾಯದಿಂದ ಟ್ರ್ಯಾಕ್ನಿಂದ ತೆರವುಗೊಳಿಸಲಾಗಿದ್ದು, ಮಧ್ಯಾಹ್ನ 03:40ರ ಬಳಿಕ ಕಾರ್ಯಾಚರಣೆಯನ್ನು ಎಂದಿನಂತೆ ಪುನರಾರಂಭಿಸಲಾಗಿದೆ.@WF_Watcher @NammaBengaluroo@NammaMetro_ @nammametrouser @AshikMulki pic.twitter.com/KUlDcFLvsU
— eedina.com (@eedinanews) October 3, 2023
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, ಯಶವಂತಪುರದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ಕಾರ್ಯಾಚರಣೆಯನ್ನು ಮಧ್ಯಾಹ್ನ 2 ಗಂಟೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಂತರ, ಆರ್.ಆರ್.ವಿ ವಾಹನವನ್ನು ಕ್ರೇನ್ನ ಸಹಾಯದಿಂದ ಟ್ರ್ಯಾಕ್ನಿಂದ ತೆರವುಗೊಳಿಸಲಾಗಿದೆ. 03:40ಕ್ಕೆ ರೈಲು ಕಾರ್ಯಾಚರಣೆಯನ್ನು ಎಂದಿನಂತೆ ಪುನರಾರಂಭಿಸಲಾಗಿದೆ. ಪ್ರಯಾಣಿಕರಿಗೆ ಇದರಿಂದಾಗಿರುವ ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
Normalcy of Metro Services on Green line is restored from 15.40 Hrs. Metro Commuters may kindly note. pic.twitter.com/sUiTlNXuZf
— ನಮ್ಮ ಮೆಟ್ರೋ (@cpronammametro) October 3, 2023
ಆಗಿದ್ದೇನು?
ಇಂದು ರೋಡ್ ಕಮ್ ರೈಲ್ ವಾಹನವು (ಆರ್ಆರ್ವಿ) ಡಿಪೋ ಪರೀಕ್ಷೆಯ ನಂತರ, ಪೀಣ್ಯ ಡಿಪೋದಿಂದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದವರೆಗೆ ಕಾರ್ಯಾಚರಣೆ ಇಲ್ಲದ ವೇಳೆಯಲ್ಲಿ ರಾಜಾಜಿನಗರದ ಬಳಿ ತಿರುವು ಸ್ಥಳಗಳನ್ನು ಟ್ರಯಲ್ ನಡೆಸುವ ಸಮಯದಲ್ಲಿ ವಾಹನ ಹಿಂದಿನ ಚಕ್ರದ ರಸ್ತೆ ಮತ್ತು ರೈಲು ಆಯತಪ್ಪಿತ್ತು. ಇದನ್ನು ಇತರ ಆರ್ಆರ್ವಿ ವಾಹನದ ಸಹಾಯದಿಂದ ಕೂಡ ಸರಿಪಡಿಸಲು ಸಾಧ್ಯವಾಗಿರಲಿಲ್ಲ.
ರಾಜಾಜಿನಗರದ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ರೈಲು ಹಳಿ ತಪ್ಪಿದ್ದರಿಂದ ಯಶವಂತಪುರದ ಮೆಟ್ರೋ ನಿಲ್ದಾಣದಲ್ಲಿ ಕಂಡು ಬಂದ ಪ್ರಯಾಣಿಕರ ದಂಡು @NammaBengaluroo @NammaMetro_ @nammametrouser
— eedina.com (@eedinanews) October 3, 2023
ವಿಡಿಯೋ ಕೃಪೆ: @AshikMulki pic.twitter.com/JHj9JQpVi8
ಇದೇ ವೇಳೆ ಈ ಸಮಸ್ಯೆಯಿಂದ ಯಶವಂತಪುರದ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಹರಸಾಹಸ ಪಡಬೇಕಾಗಿತ್ತು. ಮೆಟ್ರೋ ಪ್ರಯಾಣಿಕರಿಗಾದ ಅನಾನುಕೂಲತೆಯನ್ನು ಕಡಿಮೆ ಮಾಡಲು, ಮೊದಲು ಯಶವಂತಪುರ ನಂತರ ರಾಜಾಜಿನಗರದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಎಲ್ಲ ಕಾರ್ಯಾಚರಣೆಯ ವಿಧಾನವನ್ನು ಅನುಸರಿಸಿ ಬೆಳಗ್ಗೆ 06.30 ರಿಂದ 2 ಗಂಟೆಗಳವರೆಗೆ ಏಕಮುಖ ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಈಗ ತೆರವುಗೊಳಿಸಲಾಗಿದ್ದು, ಮಧ್ಯಾಹ್ನ 03:40ರ ಬಳಿಕ ಕಾರ್ಯಾಚರಣೆಯನ್ನು ಎಂದಿನಂತೆ ಪುನರಾರಂಭಿಸಲಾಗಿದೆ.
Mission Accomplished
— Ashik_Mulki (@AshikMulki) October 3, 2023
The derailed re-rail was shifted using a hydraulic crane. The service will start after checking the safety of the Current Metro Route. #nammametro @MDNammaMetro pic.twitter.com/Vi5NTACul6