“ಒಂದು ದೇಶ – ಒಂದು ಚುನಾವಣೆ’ ಘೋಷಣೆಯ ಹಿಂದೆ ಎಲ್ಲವನ್ನೂ ಕಪಿಮುಷ್ಟಿಗೆ ತೆಗೆದುಕೊಳ್ಳುವ ಹುನ್ನಾರವಿದೆ. ವೈದಿಕಶಾಹಿ, ಬ್ರಾಹ್ಮಣಶಾಹಿ ಹಿಡಿತದಲ್ಲಿ ಎಲ್ಲವನ್ನು ತೆಗೆದುಕೊಳ್ಳಬೇಕು ಎಂಬುದು ಅವರ ಇರಾದೆ. ಆದರೆ, ಪ್ರಜಾಪ್ರಭುತ್ವದ ಹಿನ್ನೆಲೆ ಕೆಳವರ್ಗದವರು ಕೂಡ ಪಾರ್ಲಿಮೆಂಟ್‌ಗೆ ಕಾಲಿಡುತ್ತಿದ್ದಾರೆ. ಇದನ್ನ ತಡೆಯಬೇಕು ಅಧಿಕಾರದ ಚುಕ್ಕಾಣಿ ಕೆಳವರ್ಗದವರ ಕೈಗೆ ಹೋಗಬಾರದು ಎಂಬುದು ಅವರ ಉದ್ದೇಶ. ಇದನ್ನ ತಪ್ಪಿಸುವ ಭಾಗವಾಗಿ ಒಂದು ದೇಶ ಒಂದು ಚುನಾವಣೆಯನ್ನ ಇದೀಗ ಮುನ್ನೆಲೆಗೆ ತಂದಿದ್ದಾರೆ ಎಂದು ದಸಂಸ ಹಿರಿಯ ಮುಖಂಡ ಇಂದೂಧರ ಹೊನ್ನಾಪುರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ‘ಒಂದು ದೇಶ – ಒಂದು ಚುನಾವಣೆ; ನಿರಂಕುಶ ಪ್ರಭುತ್ವದತ್ತ ಭಾರತ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬಹುತ್ವ ಭಾರತವನ್ನ ಅವರು (ಬಿಜೆಪಿ-ಆರ್‌ಎಸ್‌ಎಸ್) ಹಿಂದುತ್ವ ಭಾರತ, ಬ್ರಾಹ್ಮಣ್ಯ ಭಾರತ ಎಂದು ಹೇಳುತ್ತಿದ್ದಾರೆ. ಆದರೆ, ಅದು ಅಲ್ಲ. ಭಾರತವನ್ನ ಕಟ್ಟಿ ಬೆಳೆಸಿದವರು ದುರ್ಬಲರು, ತಳಸಮುದಾಯದವರು, ಕಾರ್ಮಿಕರು. ಇವರೆಲ್ಲರೂ ಮೆಲೇರಿಬಿಟ್ಟರೇ ಅವರು ಕೆಳಗೆ ಇಳಿಯುತ್ತಾರೆ. ಕೆಳವರ್ಗದವರನ್ನ ಅವರ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವುದು ಅವರ ದುರಾಸೆ” ಎಂದಿದ್ದಾರೆ.
“ಭಾರತ ಅನ್ನೋದು ಎಲ್ಲ ಪಿತೂರಿಗಳನ್ನೂ ಮೀರಿದ ಆತ್ಮಸಂಯಮ ಇಟ್ಟುಕೊಂಡಿರುವ ದೇಶ. ಈ ದೇಶದಲ್ಲಿ ಸಂವಿಧಾನ ನಾಶ ಮಾಡಿಬಿಟ್ಟರೇ, ಚುನಾವಣೆ ಪ್ರಕ್ರಿಯೆ ನಾಶ ಮಾಡಿಬಿಟ್ಟರೇ, ಅದನ್ನ ಕಬ್ಜ ಮಾಡಿಬಿಟ್ಟರೆ ತಾವು ಎಲ್ಲವನ್ನೂ ಹಿಡಿತ ಮಾಡಿಕೊಳ್ಳಬೇಕು ಎಂಬುದು ಅವರ ಉದ್ದೇಶ” ಎಂದು ಹೇಳಿದ್ದಾರೆ.
“ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ತಂದುಕೊಟ್ಟವರು ಅದನ್ನ ಕಿತ್ತುಕೊಳ್ಳಲು ಈಗ ಒಂದು ದೇಶ ಒಂದು ಚುನಾವಣೆ ಎಂಬುದನ್ನ ಮುನ್ನೆಲೆಗೆ ತಂದಿದ್ದಾರೆ. ಭಯೋತ್ಪಾದಕರು ಆಡಳಿತದ ಖುರ್ಚಿಯಲ್ಲಿ ಕುಳಿತಿದ್ದಾರೆ. ಸಂವಿಧಾನವನ್ನ ಹಾಳು ಮಾಡುವ ಕುತಂತ್ರ ಮಾಡುತ್ತಿದ್ದಾರೆ. ನಮ್ಮಭಾಷೆ, ಸಂಸ್ಕ್ರತಿ ಸರ್ವನಾಶಕ್ಕೆ ತೆಗೆದುಕೊಂಡು ಹೋಗುವ ಏಕ ಪ್ರಕ್ರಿಯೆಗೆ ಕೊಂಡೋಯ್ಯುವ ಕೆಲಸ ಮಾಡುತ್ತಿದ್ದಾರೆ. ಬ್ರಾಹ್ಮಣ್ಯದ ಕಪಿ ಮುಷ್ಟಿಗರ ಮತ್ತೆ ಎಲ್ಲರನ್ನು ದುಡೂವ ಪ್ರಯತ್ನವಾಗಿದೆ. ಕಾಂಗ್ರೆಸ್ ರಹಿತ ದೇಶ ಮಾಡತೀವಿ ಎಂದು ಹೇಳತಾ ಇದ್ದರು. ಆದರೆ, ಬ್ರಾಹ್ಮಣ್ಯ ಸರ್ವಾಧಿಕಾರ ನಡೆಸಬೇಕು ಎನ್ನುವುದು ಅವರ ಉದ್ದೇಶ” ಎಂದು ತಿಳಿಸಿದ್ದಾರೆ.
“ಒಂದು ದೇಶ ಒಂದು ಚುನಾವಣೆ ನಡೆದರೇ ಮೊದಲ ಪೆಟ್ಟು ಬೀಳೋದೆ ದಲಿತರ ಮೇಲೆ, ಇದನ್ನ ಅಸ್ತಿತ್ವಕ್ಕೆ ತರುವುದು ಕೂಡ ಅಷ್ಟೋಂದು ಸುಲಭದ ಕೆಲಸವಲ್ಲ. ಇದಕ್ಕೆ ಬಹುತ್ವದ ಅವಶ್ಯಕತೆ ಇದೆ. ಆದರೆ, ನಾವು ಆರಿಸಿ ಕಳಿಸಿರುವುದು ಕಳ್ಳಕಾಕರನ್ನ, ಅವರ ದುಡ್ಡು ತಿಂದು ಇದಕ್ಕೆ ಅನುಮತಿ ಸೂಚಿಸಿದರೂ ಅನುಮಾನ ಇಲ್ಲ. ಸಂವಿಧಾನದ ಹೆಸರಿನಿಲ್ಲಿ ನಮಗೆಲ್ಲ ಮೋಸ ಮಾಡುತ್ತಿದ್ದಾರೆ” ಎಂದು ಇಂದೂಧರ ಹೊನ್ನಾಪುರ ತಿಳಿಸಿದ್ದಾರೆ.
ಕಲಬುರಗಿ ದಸಂಸ ಸಂಚಾಲಕರಾದ ಮರಿಯಪ್ಪ ಹಳ್ಳಿ ಮಾತನಾಡಿ, “ಈ ದೇಶದಲ್ಲಿ 2014ರಿಂದ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಕಂಗನಾ ಅವರು ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆಯೇ ಸ್ವಾತಂತ್ರ್ಯ ಬಂದಿತ್ತು ಎಂದು ಹೇಳುತ್ತಾರೆ. ಈ ದೇಶಕ್ಕೆ ನೆಹರು ಅವರು ಮೊದಲ ಪ್ರಧಾನಿ ಎಂಬುದು ಅವರಿಗೆ ಗೊತ್ತಿಲ್ಲ. ಮನುವಾದಿ ಆರ್‌ಎಸ್‌ಎಸ್, ಜಾತಿವಾದಿ ಬೇಕು ಎಂಬುದು ಅವರ ವಾದವಾಗಿದೆ. ಚಿಂತಕರು ಚುನಾವಣೆಗೆ ನಿಂತರೇ ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ. 400ಕ್ಕಿಂತ ಹೆಚ್ಚು ಮೆಜಾರಿಟಿ ಬಂದರೆ, ಸಂವಿಧಾನ ಬದಲಾವಣೆ ಮಾಡಬೇಕು ಅನ್ನೋದು ಅವರ ವಿಚಾರ. ಆದರೆ ಈ ಚುನಾವಣೆಯಲ್ಲಿ ಅವರ ಕನಸು ಭಗ್ನ ಆಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಶವನ್ನ ರಾಜ್ಯ ಮುಕ್ತವಾಗಿ ಮಾಡಬೇಕು ಎಂಬುದು ಬಿಜೆಪಿ ಉದ್ದೇಶ: ಎ ನಾರಾಯಣ
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಜನವರಿ ತಿಂಗಳಿನಲ್ಲಿ ದಿನಪತ್ರಿಕೆಗಳಲ್ಲಿ ಒಂದು ಚಿಕ್ಕ ಪ್ರಚಾರ ಬಂದಿತ್ತು. ಸಮಿತಿಯ ಶಿಫಾರಸ್ಸುಗಳನ್ನ ಅನುಷ್ಟಾನಗೊಳಿಸಲು ಪ್ರಚಾರವೊಂದು ಬಂದಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ 10 ದಿನ ಕಾಲಾವಕಾಶ ನೀಡಲಾಗಿತ್ತು. ವೆಬ್ ಮೂಲಕ ಅಥವಾ ಮೇಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ಹೇಳಿತ್ತು. ಆದರೆ, ಈ ದೇಶದ ಎಲ್ಲ ಜನರು ಪತ್ರಿಕೆ ಓದಾತ್ತಾರಾ? ವೆಬ್ ಮೇಲ್ ಬಳಸೋದು ಗೋತ್ತಾ? ಅಂದರೆ, ಇದರ ಹುನ್ನಾರ ಇಷ್ಟೇ ಒಂದು ದೇಶ – ಒಂದು ಚುನಾವಣೆ ಜಾರಿಗೆ ತರುವುದು ಇವರ ಉದ್ದೇಶವಾಗಿದೆ. ಕೆಲವು ವಿಚಾರಗಳನ್ನ ವಿಷಯಾಂತರ ಮಾಡೋದಕ್ಕೆ ಈ ಹುನ್ನಾರ ನಡಿಸ್ತಾ ಇದ್ದಾರೆ. ಇವರ ಹುನ್ನಾರಗಳನ್ನ ನಾವುಗಳು ಅರ್ಥ ಮಾಡಿಕೊಳ್ಳಬೆಕಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಜೆಂಡಾಗಳನ್ನ ಹಿಮ್ಮೆಟ್ಟಿಸಬೇಕು. ಚಳುವಳಿಯ ಮೂಲಕವೇ ನಮ್ಮೆಲ್ಲಾ ಹಕ್ಕುಗಳನ್ನ ಇಟ್ಟುಕೊಳ್ಳಬೇಕು. ಇದಕ್ಕೆ ಪ್ರಬಲ ಪ್ರತಿರೋಧ ಒಡ್ಡಬೇಕು” ಎಂದಿದ್ದಾರೆ.
ಕಾರ್ಯಕ್ರಮಲ್ಲಿ ಎರಡು ನಿರ್ಣಯಗಳನ್ನು ಒಮ್ಮತದಿಂದ ಅಂಗೀಕರಿಸಲಾಯಿತು. ಮೊದಲಬೇಯದು, ಒಂದು ದೇಶ – ಒಂದು ಚುನಾವಣೆಯನ್ನ ಒಕ್ಕೊರಲಿನಿಂದ ನಾವು ಖಂಡಿಸುತ್ತೇವೆ. ಮತ್ತೊಂದು, ಜಾತಿಗಣತಿ ವರದಿ ಕುರಿತು ಸಂಪುಟದಲ್ಲಿ ಪರಿಶೀಲನೆಗೆ ಮುಂದಾಗಿದ್ದು ಸ್ವಾಗತಾರ್ಹ ಎಂದಿದ್ದಾರೆ.