ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಮೂಲಸೌಕರ್ಯ ಒದಗಿಸಿ: ನೈಜ ಹೋರಾಟಗಾರರ ವೇದಿಕೆ

Date:

Advertisements

ವಿರಾಜಪೇಟೆ ತಾಲೂಕಿನಲ್ಲಿರುವ ಬಾಳಗೂಡಿ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ ಸೇರಿದಂತೆ ಹಲವಾರು ಮೂಲ ಸೌಕರ್ಯಗಳ ಕೊರತೆಯಿದೆ. ಈ ಕೊರತೆಗಳ ಮಧ್ಯೆಯೇ ಆದಿವಾಸಿ ಜನರು ಬದುಕು ಸಾಗಿಸುತ್ತಿದ್ದಾರೆ. ಆದಷ್ಟು ಬೇಗ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಮನವಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನೈಜ ಹೋರಾಟಗಾರರ ವೇದಿಕೆ ಹೆಚ್‌.ಎಮ್‌.ವೆಂಕಟೇಶ್, “ನ.23ರಂದು ನೈಜ ಹೋರಾಟಗಾರರ ವೇದಿಕೆಯ ಸದಸ್ಯರು ಬಾಳಗೂಡಿ ಆದಿವಾಸಿ ಜನರು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿದ್ದೇವು. ಈ ಸ್ಥಳಕ್ಕೆ ಭೇಟಿ ನೀಡಿದಾಗಿನಿಂದ ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ” ಎಂದರು.

“ಏಕೆಂದರೆ, ಆದಿವಾಸಿ ಮಹಿಳೆಯರು ಮಕ್ಕಳು ವಾಸಿಸುವ, ಬದುಕುವ ಸ್ಥಿತಿಗತಿಗಳನ್ನು ನೋಡಿ ನಮಗೆ ಶಾಕ್ ಆಗಿದೆ.  ಆದಿವಾಸಿ ಜನರು ಬದುಕುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಇಲ್ಲ, ಶೌಚಾಲಯ ಇಲ್ಲ, ವಿದ್ಯುತ್ ದೀಪಗಳಿಲ್ಲ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಯವರ ಹೆಸರಿನಲ್ಲಿರುವ ಸರ್ವೇ ನಂಬರ್ 337/1 ರಲ್ಲಿ ವಾಸಿಸುವವರಿಗೆ ಸರ್ಕಾರದಿಂದ ಈವರೆಗೆ ಹಕ್ಕುಪತ್ರ ನೀಡಿಲ್ಲ” ಎಂದು ಹೇಳಿದರು.

Advertisements

“ಈ ಎಲ್ಲ ಇಲ್ಲಗಳ ನಡುವೆ ಆದಿವಾಸಿ ಜನರು ಬದುಕುವುದಾದರೂ ಹೇಗೆ? ಜಿಲ್ಲಾಡಳಿತ ಆದಿವಾಸಿ ಜನರಿಗೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸದೆ ಇರುವುದು ದುರದೃಷ್ಟಕರ ಸಂಗತಿ ಎಂದು ಹೇಳಬೇಕೇ ಅಥವಾ ಸರ್ಕಾರದ ವೈಫಲ್ಯ ಎಂದು ಹೇಳಬೇಕೇ? ನಮಗಂತೂ ತಿಳಿಯುತ್ತಿಲ್ಲ. ಇದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಾಗಿದೆ” ಎಂದರು.

“ಶೌಚಾಲಯವಿಲ್ಲದೆ ಬಯಲು ಶೌಚಾಲಯವನ್ನು ಉಪಯೋಗಿಸುತ್ತಿರುವ ಮಹಿಳೆಯರನ್ನು ನೋಡಿದರೆ ಸ್ವಚ್ಚ ಭಾರತ್ ಅಭಿಯಾನದ ವ್ಯಂಗ್ಯವೆಂದು ಹೇಳಬೇಕೆ? ಗುಡಿಸಲುಗಳಲ್ಲಿ ವಾಸಿಸುವ ಈ ಆದಿವಾಸಿಗಳನ್ನು ನೋಡಿದರೆ ವಸತಿ ಹೀನರಿಗೆ ವಸತಿ ಒದಗಿಸುತ್ತೇವೆ ಎಂದು ಹೇಳುವ ಸರ್ಕಾರದ ವೈಫಲ್ಯವೆನ್ನಬೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಶುದ್ಧ ಕುಡಿಯುವ ನೀರಿಲ್ಲದೆ ವಾಸಿಸುವ ಇಲ್ಲಿನ ಆದಿವಾಸಿ ಮಹಿಳೆಯರು ಎರಡು ಕಿಲೋಮೀಟರ್ ವರೆಗೆ ನಡೆದು ಹೋಗಿ ನೀರು ತರುವಂತಹ ಪರಿಸ್ಥಿತಿಯನ್ನು ನೋಡಿದಾಗ ನಮ್ಮ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಘರ್ ಘರ್ ನಳ ಟಿವಿ ಮಾಧ್ಯಮದಲ್ಲಿ ಬರುವ ಈ ಪ್ರಚಾರಗಳನ್ನು ನೋಡಿ ಹಾಸ್ಯಸ್ಪದವೆನಿಸುತ್ತಿದೆ. ಇಲ್ಲಿ ನಾವು ಮೊದಲು ಮಾಡಬೇಕಾಗಿರೋದು ಭೇಟಿ ಬಚಾವೋ, ಹೆಣ್ಣು ಮಕ್ಕಳ ರಕ್ಷಣೆ ಆಗಬೇಕಾಗಿದೆ” ಎಂದು ವಿವರಿಸಿದರು.

“ಹೀಗೆ ಸಾಲು ಸಾಲು ಸಮಸ್ಯೆಗಳ ಮೂಟೆಯನ್ನು ಹೊತ್ತು ಬದುಕುತ್ತಿದ್ದಾರೆ ಇಲ್ಲಿನ ಜನ. ನಾವೆಲ್ಲರೂ ಬದುಕುತ್ತಿರುವ ಹಾಗೆ ಇವರು ಕೂಡ ನಾಗರಿಕ ಸಮಾಜದಲ್ಲಿ ಇದ್ದಾರೆ ಎಂದು ಹೇಳಲು ನಮಗೆ ನಾಚಿಕೆಯಾಗುತ್ತಿದೆ. ಈ ಎಲ್ಲ ಸರ್ಕಾರಿ ಯೋಜನೆಗಳು ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಚಾರಕ್ಕೆ ಜಾಹಿರಾತಿಗೆ, ಮಾಧ್ಯಮಗಳ ಮುಂದೆ ಹೇಳಲು ಮಾತ್ರ ಸಿಮೀತವಾಗಿವೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ; ವೈದ್ಯರು ಸೇರಿ 9 ಮಂದಿ ಬಂಧನ

“ಇಲ್ಲಿ ಬದುಕುತ್ತಿರುವ ಆದಿವಾಸಿ ಜನರ ಆಗುಹೋಗುಗಳನ್ನು ಪರಿಶೀಲಿಸಿದ್ದೇವೆ. ಅಧಿಕಾರಿಗಳು ಟಾರ್ಪಲ್‌ಗಳನ್ನು ಕೊಡುವುದನ್ನು ಬಿಟ್ಟು ಬೇರೆ ಏನೂ ಮಾಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಪೊನ್ನಂಪೇಟೆ ತಾಲೂಕಿನ ಆದಿವಾಸಿ ಅಧಿಕಾರಿ ನಮ್ಮ ಕೋರಿಕೆಯಂತೆ ಸ್ಥಳಕ್ಕೆ ಬಂದಿದ್ದರು” ಎಂದರು.

ನೈಜ ಹೋರಾಟಗಾರರ ವೇದಿಕೆ ಆದಿವಾಸಿ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರವನ್ನು ಬರೆದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X