ಬೆಂಗಳೂರು | ವಿದ್ಯುತ್ ದರದಲ್ಲಿ 49 ಪೈಸೆ ಹೆಚ್ಚಳಕ್ಕೆ ಬೆಸ್ಕಾಂ ಪ್ರಸ್ತಾವನೆ

Date:

Advertisements

ವಾರ್ಷಿಕ ಆಯವ್ಯಯದ ಭಾಗವಾಗಿ, ರಾಜ್ಯದ ಎಲ್ಲ ಇಂಧನ ಪೂರೈಕೆ ಕಂಪನಿಗಳು (ಎಸ್ಕಾಮ್‌) ವಿದ್ಯುತ್ ದರವನ್ನು ಹೆಚ್ಚಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ. ಬೆಸ್ಕಾಂ ಕೂಡ ತನ್ನ ಪ್ರಸ್ತಾವನೆ ಸಲ್ಲಿಸಿದೆ.

ಕಳೆದ ವರ್ಷ ಎಲ್ಲ ಎಸ್ಕಾಮ್‌ಗಳು 1.36 ರೂ. ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅಂತಹ ಪ್ರಸ್ತಾವನೆಗಳ ನಡುವೆ ಕುತೂಹಲಕಾರಿಯಾಗಿ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತವು (ಬೆಸ್ಕಾಂ) ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 49 ಪೈಸೆ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.

ಕೆಇಆರ್‌ಸಿ ಕಳೆದ ವರ್ಷ ಪ್ರತಿ ಯೂನಿಟ್‌ಗೆ 70 ಪೈಸೆಯಷ್ಟು ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಿತ್ತು. ವಿದ್ಯುತ್ ದರವನ್ನು ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಈ ವೇಳೆ, ಪ್ರಸರಣ ಮತ್ತು ವಿತರಣಾ ನಷ್ಟಗಳು ಮತ್ತು ವಿದ್ಯುತ್ ಖರೀದಿ ಒಪ್ಪಂದಗಳನ್ನು ಲೆಕ್ಕಹಾಕಲಾಗುತ್ತದೆ. ಕಳೆದ ವರ್ಷ, ಪರಿಷ್ಕೃತ ದರಗಳನ್ನು 2023ರ ಮೇ 12 ರಂದು ಘೋಷಿಸಲಾಗಿತ್ತು. ಆ ದರವು ಏಪ್ರಿಲ್‌ನಿಂದ ಜಾರಿಗೆ ಬಂಡಿತ್ತು.

Advertisements

ಇದೀಗ, ಪ್ರಸ್ತಾವನೆ ಸಲ್ಲಿಸಿರುವ ಗೆಸ್ಕಾಂ ಪ್ರತಿ ಯೂನಿಟ್‌ಗೆ 1.63 ರೂ., ಮೆಸ್ಕಾಂ 59 ಪೈಸೆ, ಹೆಸ್ಕಾಂ 57 ಪೈಸೆ ಮತ್ತು ಚೆಸ್ಕಾಂ 50 ಪೈಸೆ ಹೆಚ್ಚಳ ಮಾಡಲು ಪ್ರಸ್ತಾಪಿಸಿವೆ. ಇದೆಲ್ಲದರಲ್ಲಿ ಬೆಸ್ಕಾಂ ಕಡಿಮೆ ದರದ (49 ಪೈಸೆ) ಪ್ರಸ್ತಾವನೆ ಸಲ್ಲಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ನಿಮ್ಮ ಬಿಟ್ಟಿ ಗ್ಯಾರಂಟಿಗಳನ್ನು ನಿಲ್ಲಿಸಿ…ಏಕೆಂದ್ರೆ ಬೇರೆ ಬೇರೆ ಆಸ್ತಿ, ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸಿ ಬಿಟ್ಟಿ ಗ್ಯಾರಂಟಿ ಕೊಡುವುದು ಬಿಡಿ. ಗೃಹ ಲಕ್ಷ್ಮಿ ಯೋಜನೆಯಡಿ ಉಚಿತ ವಿದ್ಯುತ್ ನೀಡ್ತಿದ್ದೀರಿ.. ಅದ್ರೆ, ಪ್ರತಿ ಯೂನಿಟ್ ಗೆ 49 ಪೈಸೆ ಹೆಚ್ಚಿಸಲು ಮುಂದಾಗಿದ್ದೀರಿ.. ಏಕೆ ಬೇಕು ಇಂತಹ ದ್ವಂಧ್ವತೆ…ಇನ್ನು ಬೇಸಿಗೆ ಆರಂಭವಾಗುತ್ತಿದೆ. ಹೇಗಿದ್ರೂ ಉಚಿತ ಕರೆಂಟ್ ಕೊಡ್ತೀದ್ದೀವಿ ಅಂತೇಳಿ ಕರೆಂಟ್ ತೆಗೆದು ಜನರಿಗೆ ಮತ್ತಷ್ಟು ಉಪದ್ರವ ಕೊಡದಿದ್ರೆ ಸಾಕು…

    ಎಂ.ಶಿವರಾಂ.. ಬೆಂಗಳೂರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X