ದಿನನಿತ್ಯ ಒಂದಲ್ಲ ಒಂದು ವಿಚಿತ್ರ ವಿಶೇಷ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಘಟನೆಯೊಂದು ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ 52 ವರ್ಷದ ಮೀನಾಕ್ಷಿ ಎಂಬುವವರನ್ನು ಸೋಮವಾರ ಅನಾರೋಗ್ಯದ ಹಿನ್ನಲೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಬಳಿಕ ಮಹಿಳೆಯ ಶವವನ್ನು ಮನೆಗೆ ತರಲಾಯಿತು. ಮನೆಗೆ ತಂದು ಇಳಿಸಿದ ನಂತರ ಮಹಿಳೆ ಒಮ್ಮೆಲೆ ಕಣ್ಣು ತೆರೆದು ಉಸಿರಾಡಿದ್ದಾರೆ.
ಇದರಿಂದ ಅಚ್ಚರಿಗೊಂಡ ಮನೆಯವರು ಅವರನ್ನು ಕೂಡಲೇ ಮನೆ ಬಳಿ ಇರುವ ಖಾಸಗಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಿಳೆಯನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ ವೈದ್ಯರು ಆಕೆಯ ನಾಡಿ ಬಡಿತವನ್ನು ಪರಿಶೀಲಿಸಿ ಉಸಿರಾಟ ಮತ್ತು ನಾಡಿಬಡಿತ ಎಲ್ಲವೂ ಸಹಜವಾಗಿದೆ ಎಂದು ಖಚಿತ ಪಡಿಸಿದರು.
ನಂತರ ಅವರನ್ನು ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಘಟನೆಯಿಂದ ಕುಟುಂಬಸ್ಥರಿಗೆ ಹಾಗೂ ಅಲ್ಲಿ ಮಹಿಳೆ ಮೃತಪಟ್ಟರೆಂದು ಭಾವಿಸಿದ್ದ ಜನರಿಗೆ ಅಚ್ಚರಿ ಜತೆಗೆ ಸಂತೋಷವೂ ಆಗಿದೆ.
ಇದನ್ನೂ ಓದಿ: ಭದ್ರಾವತಿ | ಹೊಸಮನೆ ಪೊಲೀಸರಿಂದ ರೌಡಿಶೀಟರ್ ಕಾಲಿಗೆ ಗುಂಡೇಟು
ಅದೃಷ್ಟ ಎಂಬುದು ಗಟ್ಟಿ ಇದ್ದರೆ ಯಮ ಬಂಇಡ್ದಅನ್ರೂನು ಸಹ ಏನು ಮಾಡಲು ಸಾಧ್ಯವಿಲ್ಲ ಎಂಬ ಮಾತು ಈ ಘಟನೆಯಿಂದ ನಿಜವಾಗಿದೆ.
