ʼಕೆಲವು ಕಡೆ ಇನ್ನೂ ಬಾಲ್ಯ ವಿವಾಹ ಪದ್ದತಿ ಜಾರಿಯಲ್ಲಿದೆ. ಇದನ್ನು ತಡೆಗಟ್ಟಬೇಕಾದರೆ ತಾಯಂದಿರು ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬಾಲ್ಯವಿವಾಹ ಮಾಡಲು ಮನೆಯಲ್ಲಿ ಸಿದ್ದರಾದರೆ ಅದನ್ನು ತಾಯಂದಿರು ಪ್ರತಿಭಟಿಸಬೇಕುʼ ಎಂದು ಭಾಲ್ಕಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ತಿಳಿಸಿದರು.
ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತೇಗಂಪುರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕ ಮಹಿಳೆಯರೊಂದಿಗೆ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಮಾತನಾಡಿ, ʼಕುಟುಂಬ ಮತ್ತು ದೇಶದ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಅನನ್ಯವಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿ ಮಹಿಳೆಯರಿಗಾಗಿ ಅನೇಕ ಹಕ್ಕುಗಳನ್ನು ಕೊಡಲಾಗಿದೆ. ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡಲಾಗಿದೆʼ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್ ಸಿಂಗ್ ಠಾಕೂರ ಅಧ್ಯಕ್ಷೆ ವಹಿಸಿದ್ದರು. ಇದೇ ವೇಳೆ ನೂರು ದಿನ ಪೂರೈಸಿದ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮರ್ಯಾದಾಗೇಡು ಹತ್ಯೆ | ಅಂತರ್ಜಾತಿ ಪ್ರೀತಿ; ತಂದೆಯ ಕ್ರೌರ್ಯಕ್ಕೆ ಮಗಳು ಬಲಿ
ಈ ಸಂದರ್ಭದಲ್ಲಿ ಪ್ರಮುಖರಾದ ಪಿಡಿಒ ಚಂದ್ರಕಾಂತ ಫುಲೆ ಸೇರಿದಂತೆ ಪ್ರಮುಖರಾದ ಶಿವಕುಮಾರ್ ಪಾಟೀಲ್ ತೇಗಂಪುರ, ಪಿಂಟು ಠಾಕೂರ್, ರಮೇಶ ಬೆಲ್ದಾರ್, ಕಾರ್ಯದರ್ಶಿ ಅನಿತಾ ಕೆಪ್ಪೆ, ಮಾಯಾವತಿ ಟೀಳೆಕರ್, ಜ್ಯೋತಿ, ಸವಿತಾ ಕುಪ್ಪೆ, ಶಶಿಕಲಾ, ಬಂಡೆಮ್ಮ ಮೇಟಾರೆ ಸೇರಿದಂತೆ ಹಲವರು ಇದ್ದರು.