ಭಟ್ಕಳ | ಕರಾವಳಿ ಮೀನುಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ

Date:

Advertisements

ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಕರಾವಳಿ ಮೀನುಗಾರರ ಕಲಾಸಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಸಂಘಕ್ಕೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಚಾಲನೆ ನೀಡಿದರು.

“ಮೀನುಗಾರರ ಬದುಕು ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ. ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸಮುದ್ರದ ಆಳಕ್ಕೆ ದುಡಿಯಲು ಹೋಗುವ ಮೀನುಗಾರನ ಬದುಕು ನಿಜಕ್ಕೂ ಕಠಿಣ. ಇಂತಹ ಮೀನುಗಾರರು ಎಲ್ಲರು ಒಗ್ಗಟ್ಟಿನಿಂದ ಇಂದು ಜೊತೆಯಾಗಿ ತಮ್ಮವರ ಕ್ಷೇಮಭಿವೃದ್ಧಿಗಾಗಿ ಸಂಘ ಸ್ಥಾಪಿಸಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ಸಚಿವರು ಹೇಳಿದರು.

ಇಂದು ರಾಜ್ಯದಲ್ಲಿ ಮೀನುಗಾರಿಕೆ ಮಂತ್ರಿಯಾಗಿ ಸೇವೆ ಮಾಡುತ್ತಿರುವುದಕ್ಕೆ ಕಾರಣ ಮೀನುಗಾರರು. ಆ ಶ್ರೇಯಸ್ಸು ಅವರಿಗೇ ಸಲ್ಲಬೇಕಾಗುತ್ತದೆ. ಪೃಕೃತಿಗೆ ಸವಾಲೊಡ್ಡಿ ಸಮುದ್ರದ ಅಲೆಗಳ ವಿರುದ್ಧ ಹೋರಾಡುವ ಮೀನುಗಾರ ನಿಜಕ್ಕೂ ಯೋಧನೇ ಎನ್ನಬಹುದು ಎಂದು ಮೀನುಗಾರರಿಗೆ ಧನ್ಯವಾದಗಳು ಅರ್ಪಿಸಿದರು.

Advertisements

ತಾವು ಕಷ್ಟ ಪಟ್ಟು ದುಡಿಯುವ ಹಣದಲ್ಲಿ ನೀಡುತ್ತಿದ್ದ ಶೇಕಡಾ 22% ಹಣವನ್ನು ಶೇಕಡಾ 25% ಏರಿಸಬೇಕೆಂದು ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ಮೀನುಗಾರರು ಇಂದು ಹೋರಾಟದ ಜೊತೆಯಲ್ಲಿ ಮೀನುಗಾರರ ಕ್ಷೇಮಾಭಿವೃದ್ದಿ ಸಂಘ ಸ್ಥಾಪಿಸಿರುವುದು ಹಗಲಿರುಳು ದುಡಿಯುವ ಕರಾವಳಿಯ ಎಲ್ಲ ಮೀನುಗಾರ ಕಾರ್ಮಿಕರಿಗೆ ಧೈರ್ಯ ಬಂದಂತಾಗಿದೆ. ಮೀನುಗಾರರ ಕ್ಷೇಮಕ್ಕಾಗಿ ಇಲಾಖೆ 2 ವರ್ಷದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಧನ ನೀಡುತ್ತಿದೆ ಎಂದರು.

IMG 20250818 WA0088

ಹಿಂದೆಲ್ಲ ಮೀನುಗಾರಿಕೆಗೆ ತೆರಳಿದಾಗ ಮೀನುಗಾರರು ನಾಪತ್ತೆಯಾದದಲ್ಲಿ ಯಾವುದೇ ಪರಿಹಾರ ಸಿಗುತ್ತಿರಲಿಲ್ಲ ಆದರೆ ನಾನು ನಮ್ಮ ಮೀನುಗಾರರ ಕುಟುಂಬದ ಜೊತೆಯಲ್ಲಿ ನಿಂತು ನಾಪತ್ತೆಯಾದ ಮೀನುಗಾರರಿಗೂ ಪರಿಹಾರ ನೀಡುವುದರ ಜೊತೆಯಲ್ಲಿ ಪರಿಹಾರದ ಮೊತ್ತವನ್ನು ಕೂಡಾ ₹10 ಲಕ್ಷ ರುಪಾಯಿಗೆ ಹೆಚ್ಚಿಸಿದ್ದೇನೆ. ಅಲ್ಲದೆ ಮೀನುಗಾರಿಕೆಗೆ ತೆರಳಿದಾಗ ಮೀನುಗಾರರು ಅಪಘಾತಕ್ಕಿಡದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುವುದರ ಜೊತೆಗೆ ಮೀನುಗಾರಿಕೆ ಬೋಟ್‘ಗಳು ಹಾನಿಯಾದಲ್ಲಿ ಅದಕ್ಕೂ ಪರಿಹಾರಕೊಡಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ವಸತಿ ರಹಿತ ಬಡ ಮೀನುಗಾರರಿಗೆ “ಮತ್ಸ್ಯಆಶ್ರಯ”ಯೋಜನೆಯಡಿಯಲ್ಲಿ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಸರಕಾರ ಇನ್ನು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಸದಾ ಮೀನುಗಾರರಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ

ಸಂಘದ ಕಲಾಸಿಗಳಿಗೆ (ಕಾರ್ಮಿಕರು) ಯಾವುದೇ ತೊಂದರೆಯಾದರೆ ಅವರ ಕ್ಷೇಮಕ್ಕಾಗಿ ಸಂಘಕ್ಕೆ ವಯಕ್ತಿಕವಾಗಿ ₹5 ಲಕ್ಷ ರೂಪಾಯಿ ಸಹಾಯ ಹಣವನ್ನು ನೀಡಿ ಸಂಘದ ಎಲ್ಲ ಕಲಾಸಿಗಳಿಗೂ ಇಂದರಿಂದ ಸಹಾಯ ಆಗುವಂತಾಗಲಿ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಡಿಪ್ ಸಿ ಟ್ರಾಲ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಕರುಣಾಕರ ಸಾಲಿಯನ್, ಡಿಪ್ ಸಿ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ದುರ್ಗಾಪರಮೇಶ್ವರಿ ದೇವಸ್ಥಾನದ ತಿಮ್ಮಪ್ಪ ಹೊನ್ನಿಮನೆ, ಹಾಗೂ ಮೀನುಗಾರ ಮುಖಂಡರು ಗಣ್ಯರು ಜೊತೆಗೆ ಕಲಾಸಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

Download Eedina App Android / iOS

X