ಭಾರತೀಯ ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಅವಿಸ್ಮರಣೀಯವಾಗಿದೆ. ಅಸ್ಪೃಶ್ಯತೆ ವಿರುದ್ದ ನಡೆದ ಸಂಘರ್ಷ ಸ್ವಾಭಿಮಾನದ ಸಂಕೇತವಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯಿಂದ ಆಯೋಜಿಸಿದ ಭೀಮಾ ಕೋರೆಗಾಂವ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಅಸ್ಪೃಶ್ಯತೆಯ ನೋವುನ್ನುಂಡು ಅನ್ಯಾಯದ ವಿರುದ್ಧ ಹೋರಾಡಿ ಜೀವತೆತ್ತ 21 ಮಂದಿ ಮಹಾರ್ ಸೈನಿಕರ ವೀರ ಬಲಿದಾನದ ಚರಿತ್ರೆಯನ್ನು ಶೋಷಿತ ಸಮುದಾಯ ಮರೆಯಲು ಸಾಧ್ಯವಿಲ್ಲ. ಭೀಮಾ ಕೋರೆಗಾಂವ ಐತಿಹಾಸಿಕ ಘಟನೆಯಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಪ್ರತಿಭಟಿಸಲು ನಾವೆಲ್ಲರೂ ಸಿದ್ಧರಾಗೋಣ” ಎಂದು ಕರೆ ನೀಡಿದರು.
ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಮಾತನಾಡಿ,”ಭೀಮಾ ಕೋರೆಗಾಂವ ವಿಜಯೋತ್ಸವ ನಮಗೆ ಪ್ರೇರಣೆಯಾಗಬೇಕು. ಸ್ವಾಭಿಮಾನದ ಬದುಕಿಗೆ ನಾವು ಬದ್ಧರಾಗೋಣ. ಭೀಮಾ ಸೈನಿಕರ ಹೋರಾಟದ ಸ್ಫೂರ್ತಿ ನಮ್ಮೆಲ್ಲರಿಗೂ ಆದರ್ಶವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಹಾರ | ದಲಿತ ಮಹಿಳೆಗೆ ಮನಬಂದಂತೆ ಲಾಠಿಯಿಂದ ಬಡಿದ ಪೊಲೀಸ್; ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಹೇಡಿಗೊಂಡ, ಲಿಂಗರಾಜ ದಂಡೆಮ್ಮನವರ, ಬಸವರಾಜ ಮಾಸೂರ, ಮರಿಯಪ್ಪ ನಡುವಿನಮನಿ, ಶೆಟ್ಟಿ ವಿಭೂತಿ, ರೆಹಮತವುಲ್ಲಾ ಮುಲ್ಲಾ, ಮಂಜಪ್ಪ ಮರೋಳ, ರಮೇಶ ಜಾಲಿಹಾಳ, ಬಸವರಾಜ ಕಾಳೆ, ಸುನೀಲ ಭೇಟಗೇರಿ, ಹನಮಂತಪ್ಪ ಹುಚ್ಚಣ್ಣನವರ, ಚಿಕ್ಕಪ್ಪ ಆಡೂರ, ಮಂಜಪ್ಪ ಹರಪನಹಳ್ಳಿ, ಹನಮಂತಪ್ಪ ಹರಿಜನ, ಶಂಭಲಿಂಗಪ್ಪ ದೀವಟಗೇರ, ಪ್ರೇಮಾ ಹರಿಜನ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.