ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ನಿಯಮ ಬಾಹಿರವಾಗಿ ಬೈಕ್‌ಗಳಿಗೆ ಅಳವಡಿಸಿದ್ದ 143 ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಬೀದರ್ ಪೊಲೀಸರು ಶುಕ್ರವಾರ ರೋಡ್ ರೋಲರ್ ಬಳಸಿ ಸಂಪೂರ್ಣ ನಾಶಪಡಿಸಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ 143 ಬೈಕ್‌ಗಳ ಸೈಲೆನ್ಸರ್ ತೆಗೆಸಿ, ರಸ್ತೆ ಮೇಲೆ ಸಾಲಾಗಿ ಇರಿಸಿ, ರೋಡ್ ರೋಲರ್ ಓಡಿಸುವ ಮೂಲಕ ಸಂಪೂರ್ಣ ನಾಶಪಡಿಸಿದರು.
ʼಜಿಲ್ಲೆಯಲ್ಲಿ ಕೆಲವು ವಾಹನ ಮಾಲೀಕರು ತಮ್ಮ ದ್ವಿಚಕ್ರ ವಾಹನಕ್ಕೆ ಕಂಪನಿಯಿಂದ ಅಳವಡಿಸಿದ ಸೈಲೆನ್ಸರ್‌ಗಳನ್ನು ತೆಗೆದು ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 143 ಬೈಕ್‌ಗಳ ಮಾಲೀಕರಿಗೆ 1.30 ದಂಡ ವಿಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು, ಯಾರು ಏನಂದ್ರು?
ʼನಾಗರಿಕರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ನಿಯಮ ಪಾಲಿಸದೇ ತಮ್ಮ ಬೈಕ್‌ಗಳಿಗೆ ಕರ್ಕಶ ಶಬ್ದವನ್ನುಂಟು ಮಾಡುವ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಅಳವಡಿಸಿ ತೊಂದರೆ ಕೊಟ್ಟಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದುʼ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ.