ಔರಾದ್ ತಾಲ್ಲೂಕಿನ ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯನಗರ ತಾಂಡಾ (ಬಾರ್ಡರ್) ಸಿವಾರದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ/ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ತಾಂಡಾ ನಿವಾಸಿ ಅಂಬಾಜಿ (56) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 7.5 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ತನ್ನ ಹೊಲದಲ್ಲಿ ಸೋಯಾ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7.5 ಕೆ.ಜಿ. ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಬೀದರ್ ಜಿಲ್ಲಾ ಪೊಲೀಸ್ ಘಟಕದಲ್ಲಿ ಮಾದಕ ದ್ರವ್ಯ ಪತ್ತೆ ಪರಿಣತಿ ಹೊಂದಿರುವ ‘ದೀಪಾ’ ಎಂಬ ಶ್ವಾನ ಯಶಸ್ವಿಯಾಗಿರುವುದು ವಿಶೇಷ.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಸಂತಪೂರ ಠಾಣೆ ಪಿಎಸ್‌ಐ ನಂದಕುಮಾರ್ ಮುಳೆ, ಸುನೀಲಕುಮಾರ್ ಕೋರೆ, ಏಕನಾಥ, ಕೊಟ್ರೆಶ, ರಾಮರೆಡ್ಡಿ, ಸುಭಾಷ, ಸಿದ್ದಣ್ಣಾ, ಗೌತಮ ಹಾಗೂ ಮತ್ತಿತರರು ಕಾರ್ಯಾಚರಣೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎಸ್ಸೆಸ್ಸೆಲ್ಸಿ ಪರೀಕ್ಷೆ : ಮೊದಲ ದಿನ 1,039 ವಿದ್ಯಾರ್ಥಿಗಳು ಗೈರು
ಶ್ವಾನ ʼದೀಪಾʼ ತರಬೇತಿದಾರ ಅಶೋಕ ಹಾಗೂ ತನಿಖಾ ತಂಡದ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಶ್ಲಾಘಿಸಿದ್ದಾರೆ. ಈ ಸಂಬಂಧ ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.