ರಾಜ್ಯದ ಗಡಿ ಅಂಚಿಗೆ ಕೇವಲ 3 ಕಿಮೀ ಅಂತರದಲ್ಲಿರುವ ಕರ್ನಾಟಕ-ತೆಲಂಗಾಣ ಮಾರ್ಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಾಜ್ಯಗಳ ಕೊಂಡಿಯಂತಿರುವ ಈ ರಸ್ತೆಯು ರಾಜ್ಯದ ಮಾನ ಮರ್ಯಾದೆಯನ್ನೇ ಹರಾಜು ಹಾಕುತ್ತಿದೆ.
ತೆಲಂಗಾಣದ ಪ್ರಮುಖ ಕೇಂದ್ರ ಪಿಟ್ಲಂ, ಕಂಗಟಿ, ನಾರಾಯಣಖೇಡ ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ಸಂಚರಿಸುವ ಗಡಿ ಗ್ರಾಮಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಸಂಚರಿಸುವುದು ದೊಡ್ಡ ಸಾಹಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

“ಚಿಂತಾಕಿ-ನಾಗನಪಲ್ಲಿ ಮಧ್ಯೆ ಹೊರವಲಯದ ವರೆಗೆ ರಸ್ತೆ ನಿರ್ಮಾಣ ಮಾಡಿದ್ದು, ನಾಗನಪಲ್ಲಿ ಹೊರವಲಯದಿಂದ ಕರ್ನಾಟಕ ಗಡಿವರೆಗೆ ರಸ್ತೆ ಅಗಲೀಕರಣ ಮಾಡಲಾಗಿದೆ. ಇದರಿಂದ ರಸ್ತೆ ಮಧ್ಯೆ ಮಳೆ ನೀರು ಸಂಗ್ರಹವಾಗಿದೆ. ಇಂಥ ಹದಗೆಟ್ಟ ರಸ್ತೆ ಮೇಲೆ ಮರಳು ಲಾರಿ, ಬಸ್ ಸೇರಿದಂತೆ ಬಹುತೇಕ ವಾಹನಗಳು ಸಿಲುಕಿರುವ ಘಟನೆ ಜರುಗಿದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಹದಗೆಟ್ಟ ರಸ್ತೆ; ದುರಸ್ತಿಗೆ ಗ್ರಾಮಸ್ಥರ ಆಗ್ರಹ
“ಹದಗೆಟ್ಟಿರುವ ರಸ್ತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಿತ್ಯ ಸಂಚಾರ ಮಾಡಲು ಹೈರಾಣಾಗುತ್ತಿದೆ” ಎಂದು ಔರಾದ್ ತಾಲೂಕಿನ ನಾಗನಪಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.