ʼಅನ್ನಭಾಗ್ಯʼ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಕೇಂದ್ರ ಸರ್ಕಾರದ 5ಕೆ.ಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ ₹34 ರಂತೆ ಪಡಿತರ ಬ್ಯಾಂಖ್ ಖಾತೆಗೆ ನೇರವಾಗಿ ₹170 ಹಣ ಜಮೆ ಮಾಡಲಾಗುತ್ತಿತ್ತು. ಆದರೆ 2025ರ ಫೆಬ್ರವರಿ ತಿಂಗಳಿಂದ ನೇರ ನಗದು ಬದಲಾಗಿ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಫೆಬ್ರುವರಿ ತಿಂಗಳ ಪಡಿತರ ವಿತರಣೆ ಪೂರ್ಣಗೊಂಡಿರುವುದರಿಂದ ಫೆಬ್ರವರಿ ತಿಂಗಳ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್ ತಿಂಗಳ ಹಂಚಿಕೆಯೊಂದಿಗೆ ವಿತರಣೆ ಮಾಡಲಾಗುವುದು. ಮಾರ್ಚ್ ತಿಂಗಳಲ್ಲಿ ಆದ್ಯತಾ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗಳಿಗೆ ಒಟ್ಟು 15 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು. 4 ಸದಸ್ಯರಿಗಿಂತ ಕಡಿಮೆ ಇರುವ ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದುʼ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ (ಎವೈ) 4 ಸದಸ್ಯರಿರುವ ಪಡಿತರ ಚೀಟಿದಾರರಿಗೆ 45 ಕೆ.ಜಿ ಅಕ್ಕಿ, 5 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 65 ಕೆ.ಜಿ ಅಕ್ಕಿ ಹಾಗೂ 6 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 85 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು. ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಪಡಿತರ ಚೀಟಿದಾರರು ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಪಡಿತರ ಅಕ್ಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಪಡಿತರ ಚೀಟಿದಾರರ ಪಡಿತರ ಚೀಟಿ ಅಮಾನತ್ತುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಯಾವುದೇ ದೂರುಗಳು ಇದ್ದಲ್ಲಿ ಆಹಾರ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದಾದ ವಿವರ:
ಬೀದರ ಗ್ರಾಮಾಂತರ ಆಹಾರ ಶಿರಸ್ತೆದಾರ ಅನಿಲ್‌ಕುಮಾರ ವ್ಯಾಸ್ (6360177221), ಬೀದರ ಗ್ರಾಮಾಂತರ ಆಹಾರ ನಿರೀಕ್ಷಕರು ಅರುಣ್‌ಕುಮಾರ (7892199014), ಬೀದರ ಪಟ್ಟಣ ಆಹಾರ ನಿರೀಕ್ಷಕರು ರಾಮರತನ ದೆಗಲಿ (9844302280), ಬೀದರ ಪಟ್ಟಣ ಆಹಾರ ನಿರೀಕ್ಷಕರು ಶೋಭಾ (9740226135), ತಾಲ್ಲೂಕು ಕಛೇರಿ ಭಾಲ್ಕಿ: ಆಹಾರ ಶಿರಸ್ತೆದಾರರು ವೆಂಕಟರಾವ (9110413724), ಆಹಾರ ನಿರೀಕ್ಷಕರು ರಾಜೇಂದ್ರಕುಮಾರ (9972460457) ತಾಲ್ಲೂಕು ಕಛೇರಿ ಹುಮನಾಬಾದ: ಆಹಾರ ಶಿರಸ್ತೆದಾರರು ಪರಮೇಶ್ವರ (9448349496), ಆಹಾರ ನಿರೀಕ್ಷಕರು ಬಿಂದುಕುಮಾರಿ (9449382228)
ಈ ಸುದ್ದಿ ಓದಿದ್ದೀರಾ? ಔರಾದ್ ಪಾಲಿಟೆಕ್ನಿಕ್‌ನಲ್ಲಿ ಒಬ್ಬರೇ ಖಾಯಂ ಉಪನ್ಯಾಸಕ : ಬೋಧಕ ಸಿಬ್ಬಂದಿ ನೇಮಕಕ್ಕೆ ಶಾಸಕ ಪ್ರಭು ಚವ್ಹಾಣ ಆಗ್ರಹ
ತಾಲ್ಲೂಕು ಕಛೇರಿ ಚಿಟಗುಪ್ಪಾ: ಆಹಾರ ನಿರೀಕ್ಷಕರು ಶೇಖರ್ (9964874917), ತಾಲ್ಲೂಕು ಕಛೇರಿ ಬಸವಕಲ್ಯಾಣ: ಆಹಾರ ಶಿರಸ್ತೆದಾರರು ನಿಂಗಯ್ಯಾ (9916241166), ಆಹಾರ ನಿರೀಕ್ಷಕರು ನಾಗರಾಜ (8951753186), ದ್ವಿ.ದ.ಸ ರಾಜೇಶ್ವರಿ (9986775659), ತಾಲ್ಲೂಕು ಕಛೇರಿ ಹುಲಸೂರು: ಆಹಾರ ನಿರೀಕ್ಷಕರು ಪ್ರದೀಪ್ (8095453026), ತಾಲ್ಲೂಕು ಕಛೇರಿ ಔರಾದ (ಬಿ): ಆಹಾರ ಶಿರಸ್ತೆದಾರರು ಪರಮೇಶ್ವರ (9448349496), ಆಹಾರ ನಿರೀಕ್ಷಕರು ಪ್ರೇಮಲತಾ (9901741151), ತಾಲ್ಲೂಕು ಕಛೇರಿ ಕಮಲನಗರ: ಆಹಾರ ನಿರೀಕ್ಷಕರು ಶಿವಾನಂದ ಪಾಟೀಲ್ (9741614855)