ಔರಾದ್ ಪಟ್ಟಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು ಅಗತ್ಯ ನಿವೇಶನ ಮಂಜೂರು ಮಾಡುವಂತೆ ಡಾ.ಬಿ.ಆರ್. ಅಂಬೇಡ್ಕರ್ ನೂತನ ಭವನ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಹೋರಾಟ ಸಮಿತಿಯ ಮುಖಂಡರು ಗುರುವಾರ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಔರಾದ್ ತಾಲೂಕು ಕೇಂದ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಆಗಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಈಗಾಗಲೇ ಸರ್ಕಾರ ₹1 ಕೋಟಿ ಅನುದಾನ ಮಂಜೂರು ಮಾಡಿದೆ. ಹಾಗಾಗಿ ಸಮುದಾಯದ ಧಾರ್ಮಿಕ ಕಾರ್ಯಕ್ರಮ, ಗ್ರಂಥಾಲಯ ಸೇರಿದಂತೆ ವಿವಿಧ ಚಟುವಟಿಕೆ ನಡೆಸಲು ಅನುಕೂಲ ಆಗುವಂತೆ ಅಂಬೇಡ್ಕರ್ ಭವನ ಅತ್ಯವಶ್ಯಕವಾಗಿದೆʼ ಎಂದರು.
ಕೂಡಲೇ ಔರಾದ್ ಪಟ್ಟಣದಲ್ಲಿ ಭವನ ನಿರ್ಮಾಣಕ್ಕಾಗಿ ಮಾರ್ಚ್ 31ರೊಳಗಾಗಿ ನಿವೇಶನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಮೊಬೈಲ್ ಹೆಚ್ಚು ಬಳಸಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ಅಂಬೇಡ್ಕರ್ ಹೋರಾಟ ಸಮಿತಿಯ ಸುಭಾಷ ಲಾಧಾ, ಝರೆಪ್ಪ ವರ್ಮಾ, ಗಣಪತರಾವ ಶೆಂಬೆಳ್ಳಿ, ಸಂತೋಷ ಸೂರ್ಯವಂಶಿ, ಸಂತೋಷ ಸಿಂಧೆ, ರಾಹುಲ್ ಖಂದಾರೆ, ನವನಾಥ ಚಟ್ನಾಳ, ಪಂಢರಿ ಕಸ್ತೂರೆ, ಉತ್ತಮ ಮಾಂಜ್ರೆಕರ್, ಮಾರುತಿ ಜಗದಾಳೆ,ರಾಹುಲ ಬೋರೆ ಸೇರಿದಂತೆ ಮತ್ತಿತರರಿದ್ದರು.