ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪದಾಧಿಕಾರಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಮಂಗಳವಾರ ಬೀದರ್ ನಗರದಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ʼವಕ್ಫ್ ತಿದ್ದುಪಡಿಯಿಂದ ಸಂವಿಧಾನದ 14, 25, 26 ಮತ್ತು 29ನೇ ವಿಧಿಗಳಲ್ಲಿ ಪರಿಗಣಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಿಂದೂ, ಸಿಖ್, ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಈ ವಿಧಿಗಳ ಪ್ರಕಾರ ರಕ್ಷಣೆ ಒದಗಿಸಲಾಗಿದೆ. ವಕ್ಫ್ ರಕ್ಷಣೆ ಮತ್ತು ಆಸ್ತಿಗೆ ಲಭ್ಯವಿರುವ ನಿಬಂಧನೆಗಳನ್ನು ಕೊನೆಗೊಳಿಸುವ ಮೂಲಕ ಅದನ್ನು ಮುಸ್ಲಿಂ ಸಮುದಾಯದವರೊಂದಿಗೆ ತಾರತಮ್ಯ ಮಾಡಲಾಗುತ್ತಿದೆʼ ಎಂದು ಆತಂಕ ವ್ಯಕ್ತಪಡಿಸಿದರು.
ʼಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು (ಪರಿಚ್ಛೇದ 25) ಮತ್ತು ಸ್ವಂತ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕಿಗೆ (ಪರಿಚ್ಛೇದ 26 ಮತ್ತು 29) ವಿರುದ್ಧವಾಗಿದೆ.1995ರ ವಕ್ಫ್ ಕಾಯ್ದೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿ ತಾರತಮ್ಯದಿಂದ ಕೂಡಿದೆ. ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ಧಾರ್ಮಿಕ ಆಚರಣೆ ಮತ್ತು ಆಯಾ ಧಾರ್ಮಿಕ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದಕ್ಕೆ ಅಡ್ಡಿಪಡಿಸುತ್ತದೆʼ ಎಂದು ತಿಳಿಸಿದರು.
ʼಸರ್ಕಾರ ವಕ್ಫ್ ಆಸ್ತಿ ವಶಕ್ಕೆ ಪಡೆದು ಅದರ ಮೇಲೆ ಮಾಲೀಕತ್ವ ಸಾಧಿಸಲು ಹೊರಟಿದೆ. ಈ ರೀತಿಯ ಅನೇಕ ಬದಲಾವಣೆಗಳನ್ನು ತರಲಾಗಿದೆ. ಮುಸ್ಲಿಂ ಸಮುದಾಯದವರಿಗೆ ಅನ್ಯಾ ಯವಾಗಿದೆ. ಈ ಹಿಂದಿನಂತೆ ಕಾಯ್ದೆ ಮುಂದುವರಿಸಿಕೊಂಡು ಹೋಗಲು ಕ್ರಮ ಜರುಗಿಸಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಕಳೆದ ಮೂರು ವರ್ಷದಲ್ಲಿ 39 ಬಾಲ ಕಾರ್ಮಿಕರ ರಕ್ಷಣೆ : ಬೇಕಿದೆ ಇನ್ನಷ್ಟು ಬಿಗಿ ಕ್ರಮ!
ಮಂಡಳಿಯ ಪ್ರಮುಖರಾದ ಅಬ್ದುಲ್ ಖದೀರ್, ಗುರುನಾಥ ಗಡ್ಡೆ, ಡಾ.ಸಿ.ಆನಂದರಾವ್, ಕ್ಲೇ ಡಿಸೋಜಾ, ವಿಲ್ಸನ್ ಫರ್ನಾಂಡಿಸ್, ಫಾದರ್ ಡೆರ್ರಿಕ್, ಅಸೀಮ್ ಖಾನ್, ಜಗದೀಶ್ವರ ಬಿ., ಮುಹಮ್ಮದ್ ಅಮೀನ್ ನವಾಜ್, ಎಂ.ಎ.ಮುಕ್ತದೀರ್, ದೀಪ ನಂದಿ, ಅಸ್ಮಾ ಸುಲ್ತಾನ, ಸಂತೋಷ ಜೋಳದಾಪಕೆ, ವಿಠ್ಠಲದಾಸ ಪ್ಯಾಗೆ, ಮುಹಮ್ಮದ್ ನಿಜಾಮುದ್ದೀನ್ ಮತ್ತಿತರರು ಇದ್ದರು.