ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಡಿಪ್ಲೋಮಾ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಡಿಪ್ಲೋಮಾ ಪ್ರವೇಶ ಅರ್ಜಿಗಳನ್ನು ಕಚೇರಿ ಸಮಯದಲ್ಲಿ ಪಡೆಯಬಹುದೆಂದು ಬೀದರ್ ನಗರದ ಮೈಲೂರು ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ್ ಎಸ್.ಜಾಧವ್ ಅವರು ತಿಳಿಸಿದ್ದಾರೆ.
‘ಭರ್ತಿ ಮಾಡಿದ ಅರ್ಜಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ನಂತರ ಸಂಬಂಧಪಟ್ಟ ದಾಖಲೆಗಳೊಂದಿಗೆ ಸ್ವೀಕರಿಸಲಾಗುತ್ತದೆ. ಆದ್ದರಿಂದ ಪ್ರವೇಶ ಬಯಸುವ ವಿದ್ಯಾರ್ಥಿಗಳು ಸಂಸ್ಥೆಯಿಂದ ಅರ್ಜಿ ಪಡೆದುಕೊಂಡ ನಂತರ ಅವಶ್ಯಕ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಸೂಚಿಸಲಾಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಶ್ಯಕ ದಾಖಲೆಗಳು : ಶಾಲೆಯ ಮುಖ್ಯಸ್ಥರು ಧೃಢೀಕರಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತೀರ್ಣಗೊಂಡ ಅಂಕಪಟ್ಟಿ, ಮೂಲ ವರ್ಗಾವಣೆ ಪತ್ರ, ೧ ರಿಂದ ೧೦ನೇ ತರಗತಿವರೆಗಿನ ವ್ಯಾಸಂಗ ಪ್ರಮಾಣಪತ್ರ, 6 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ/ಗ್ರಾಮೀಣ/ಕಲ್ಯಾಣ-ಕರ್ನಾಟಕ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ ಮಾತ್ರ), ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳತಕ್ಕದ್ದು. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡು ಡಿಪ್ಲೋಮಾ ಪ್ರವೇಶಕ್ಕಾಗಿ ಪ್ರಕಟಣೆ ಹೊರಡಿಸಿದ ನಂತರ ಅರ್ಜಿಗಳನ್ನು ಸ್ವೀಕರಿಸಲಾಗುವುದೆಂದು ತಿಳಿಸಿದ್ದಾರೆ.
ಸರ್ಕಾರಿ ಪಾಲಿಟೆಕ್ನಿಕ್ ಬೀದರ್ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ (60 ಸೀಟುಗಳು), ಆಟೊಮೊಬೈಲ್ ಇಂಜಿನಿಯರಿಂಗ್ (60), ಸಿವಿಲ್ ಇಂಜಿನಿಯರಿಂಗ್ (60), ಎಲೆಕ್ಟ್ರಿಕಲ್ ಅಂಡ್ ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ (60), ಎಲೆಕ್ಟ್ರಾನಿಕ್ಸ್ ಅಂಡ್ ಕಮುನಿಕೇಶನ್ ಇಂಜಿನಿಯರಿಂಗ್ (60), ಕಂಪ್ಯೂಟರ್ ಸೈನ್ಸ್ (30) ಮತ್ತು ಕಮರ್ಷಿಯಲ್ ಪ್ರ‍್ಯಾಕ್ಟೀಸ್ (ಕನ್ನಡ-30, ಇಂಗ್ಲೀಷ್-30) ಸೀಟುಗಳು ಪ್ರವೇಶಕ್ಕಾಗಿ ಲಭ್ಯವಿವೆ ಎಂದು ತಿಳಿಸಿದ್ದಾರೆ.