ಬಸವಕಲ್ಯಾಣ | ಮಾಧ್ಯಮಗಳು ಸಾಮಾಜಿಕ ನ್ಯಾಯ, ಸಮಾಜವಾದವನ್ನು ಜೀವಂತವಿಡುವ ಕೆಲಸ ಮಾಡಬೇಕು: ಡಾ.ಎಚ್.ವಿ.ವಾಸು

Date:

Advertisements

“ಪ್ರಭುತ್ವದ ವಿಮರ್ಶೆ ಮತ್ತು ವಿಶ್ಲೇಷಣೆಯ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾಜವಾದದ ಜೀವಂತವಿಡುವ ಕೆಲಸವು ಮಾಧ್ಯಮದಿಂದ ನಡೆಯಬೇಕು” ಎಂದು ಚಿಂತಕ, ಪತ್ರಕರ್ತ ಡಾ.ಎಚ್.ವಿ.ವಾಸು ಹೇಳಿದರು.

ಬೀದರ್ ಜಿಲ್ಲೆಯ ಬಸವಕಲ್ಯಾಣದ ಶ್ರೀಬಸವೇಶ್ವರ ಪದವಿ ಕಾಲೇಜಿನಲ್ಲಿ ರೀ-ಅಶ್ಯೂರ್ ಫೌಂಡೇಶನ್‌ನ ಸಹಯೋಗದಲ್ಲಿ ಫೌಂಡೇಶನ್ ಲೋಗೊ ಬಿಡುಗಡೆ ಹಾಗೂ ʼಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆʼ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಪ್ರಭುತ್ವದ ವಲಯದಿಂದ  ಹೊರಗಿರುವ ಮಾಧ್ಯಮಗಳು ಪ್ರಭುತ್ವವನ್ನು ವಿಮರ್ಶಿಸುವ, ಪರಾಮರ್ಶಿಸುವ, ಪ್ರಭುತ್ವದ ಕಾರ್ಯಚಟುವಟಿಕೆ ವಿಶ್ಲೇಷಿಸುವ ಪ್ರಾಮಾಣಿಕ ಹೊಣೆಗಾರಿಕೆ ಮಾಧ್ಯಮಕ್ಕಿದೆ” ಎಂದು ತಿಳಿಸಿದರು.

Advertisements

“ಮಾಧ್ಯಮ ಸುದ್ದಿಗಳು ಪಟ್ಟಣ, ಹಳ್ಳಿ ಕೇಂದ್ರಿತವಾಗಿರದೇ ಬಹುತೇಕ ಸುದ್ದಿಗಳು ರಾಜಧಾನಿ ಕೇಂದ್ರಿತವಾಗಿರುತ್ತವೆ. ಶೋಷಿತರ, ನಿರ್ಲಕ್ಷಿತ ಸಮುದಾಯಗಳ, ನಿರಾಶ್ರಿತರ, ಕೃಷಿಕರ, ಕೂಲಿ-ಕಾರ್ಮಿಕರ ಸಮಸ್ಯೆಗಳಿಗೆ ಮಾಧ್ಯಮಗಳು ದನಿಯಾಗಿ, ಅವರ ಪರ ಕಾಳಜಿ ವಹಿಸಬೇಕು. ಅಧಿಕಾರ ವಂಚಿತರ ಪರ ಮಾಧ್ಯಮಗಳು ಕೆಲಸಮಾಡಬೇಕು” ಎಂದು ಡಾ. ವಾಸು ಪ್ರತಿಪಾದಿಸಿದರು.

“ಭಾರತದ ಸಂವಿಧಾನ ಮಾಧ್ಯಮಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ನೀಡಿದೆ. ಉನ್ನತ ಶಿಕ್ಷಣದಲ್ಲಿ ಗಂಡು ಮಕ್ಕಳ ಹಾಜರಾತಿ ಹೆಚ್ಚಾದರೆ, ಹೆಣ್ಣು ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ಈ ಬಗ್ಗೆ ಮಾಧ್ಯಮಗಳು ಏಕೆ ಪ್ರಶ್ನಿಸಿ ಧ್ವನಿ ಎತ್ತುತ್ತಿಲ್ಲ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕೆಂಬ ತತ್ವ ಮಾಧ್ಯಮಗಳು ಪ್ರತಿಪಾದಿಸಬೇಕು” ಎಂದರು.

“ಬಹುಭಾಷಿಕತೆಯ, ಬಹು ಸಾಂಸ್ಕೃತಿಕತೆಯ ನೆಲವಾದ ಭಾರತದಷ್ಟು ವೈವಿಧ್ಯತೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ವಸಾಹತುಶಾಹಿಯ ಅಧೀನಕ್ಕೊಳಪಟ್ಟರೂ, ಜಾಗತೀಕರಣದ ನೆರಳಿನಲ್ಲಿದ್ದರೂ ಏಕತ್ವದ ಚೌಕಟ್ಟು ಮುರಿದು ಬಹುತ್ವ ಆಯಾಮದಲ್ಲಿ ತನ್ನನ್ನು ತಾನು ನಿರ್ವಹಿಸಿದ ದೇಶ ಇದಾಗಿದೆ. ಇಷ್ಟೆಲ್ಲ ವೈವಿಧ್ಯತೆಯ ಜತೆಗೆ ಅಸಮಾನತೆಯೂ ಉಳಿದಿದೆ. ಅದ್ಧೂರಿ ಮದುವೆಗಳ ಸಂಭ್ರಮ ಒಂದೆಡೆಗೆ, ಮತ್ತೊಂದೆಡೆಗೆ ಮದುವೆಗಾಗಿ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ವೈರುಧ್ಯಗಳು ಈ ದೇಶದಲ್ಲಿ ಕಾಣತ್ತೇವೆ. ಮಾಧ್ಯಮಗಳು ಈ ವೈರುಧ್ಯಗಳ ಬಗ್ಗೆ ಜನರನ್ನು ಜಾಗೃತಿ ಮೂಡಿಸುತ್ತಿರಬೇಕು” ಎಂದು ಹೇಳಿದರು.

ಬಸವಕಲ್ಯಾಣ ಜಗತ್ತಿಗೆ ನೈತಿಕತೆಯ ಪಾಠ ಹೇಳಿಕೊಟ್ಟ ನೆಲ

“ಬಸವಕಲ್ಯಾಣವು ಇಡೀ ಪ್ರಪಂಚಕ್ಕೆ ನೈತಿಕತೆಯ, ವೈಚಾರಿಕತೆಯ, ಬೌದ್ಧಿಕತೆಯ ಪಾಠ ಹೇಳಿಕೊಟ್ಟ ನೆಲ. ಬಸವಣ್ಣ, ಅಲ್ಲಮಪ್ರಭು , ಅಕ್ಕಮಹಾದೇವಿ, ಬೀದರನ ಗವಾನ್ ಇವರೆಲ್ಲರೂ ಸೈದ್ಧಾಂತಿಕ ಚಿಂತನೆಯನ್ನು ಕಟ್ಟಿಕೊಟ್ಟಿದ್ದಾರೆ. ವಚನಕಾರರ ಬೌದ್ಧಿಕ ನಿಲುವುಗಳು ಹಾಗೂ ಈ ನೆಲದಲ್ಲಿ ಇರುವ ಸಮಸ್ಯೆ ಕುಂದುಕೊರತೆ ಎರಡನ್ನೂ ಕೇಂದ್ರಿಕರಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ” ಎಂದರು.

“ಪ್ರಪಂಚದ ಯಾವ ಕಡೆಗೂ ಇರದೇ ಇರುವ ಪ್ರಜಾಪ್ರಭುತ್ವದ ಪರಿಕಲ್ಪನೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಒಂಬತ್ತು ನೂರು ವರ್ಷಗಳ ಹಿಂದೆ ಇತ್ತು ಎಂಬುದು ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಗತಿ. ವಚನಕಾರರ ತಾತ್ವಿಕ ಚಿಂತನೆಗಳು ಜಗತ್ತಿನ ಬೌದ್ಧಿಕ ಭಾಗವಾಗಿಸುವ ಹೊಣೆಗಾರಿಕೆ ಮಾಧ್ಯಮ ಮತ್ತು ಈ ನಾಡಿನ ವಿದ್ವತ್ ವಲಯದ ಮೇಲಿದೆ” ಎಂದರು.

ರೀ-ಅಶ್ಯೂರ್ ಫೌಂಡೇಶನ್‌ನ ಸದಸ್ಯ ರವೀಂದ್ರ ಕೊಳಕುರ ಮಾತನಾಡಿ, “ಬಸವಕಲ್ಯಾಣದ  ಮಾತೃ ಸಂಸ್ಥೆಯಾದ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯಿಂದ ಉತ್ತಮ ಕೆಲಸಗಳು ನಡೆದಿವೆ. ಬಸವೇಶ್ವರ ಪದವಿ ಕಾಲೇಜಿನಲ್ಲಿ ಇಂತಹ ಉಪನ್ಯಾಸಗಳು  ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲವಾಗಿಟ್ಟ ಸಂಸ್ಥೆಯವರ ಕೆಲಸ ಶ್ಲಾಘನಿಯ. ರೀ-ಅಶ್ಯೂರ್ ಫೌಂಡೇಶನ್ ಅನ್ನು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.

ಬಸವೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, “ಮಾಧ್ಯಮಗಳು ಬೌದ್ಧಿಕ ಪ್ರಜ್ಞೆಯ ಬೆಳೆವಣಿಗೆಗೆ, ಸತ್ಯದ ಶೋಧನೆಗೆ ದಾರಿಯಾಗಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕಟ್ಟುವಿಕೆಯಲ್ಲಿ ಮಹತ್ವವಾದ ಸ್ಥಾನ ಪಡೆದಿವೆ. ಲೋಕವನ್ನು ಸಾಂಸ್ಕೃತಿಕವಾಗಿ ಕಟ್ಟುವ ಮಾಧ್ಯಮಗಳ ಕುರಿತು ವಿಮರ್ಶಾತ್ಮಕ ಅನುಸಂಧಾನ ಅಗತ್ಯವಾಗಿದೆ” ಎಂದರು.

ಇದನ್ನು ಓದಿದ್ದೀರಾ? ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು

ಕಾರ್ಯಕ್ರಮದಲ್ಲಿ ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರಿಕಾಂತ ಬಡದಾಳೆ, ಪತ್ರಕರ್ತ ಸಿದ್ದಪ್ಪ ಮೂಲಗೆ, ಕಲಬುರ್ಗಿಯ ರಂಗಕರ್ಮಿ ಸುನಿಲ ಹುಡಗಿ ಮೊದಲಾದವರಿದ್ದರು.

ಡಾ.ಶಾಂತಲಾ ಪಾಟೀಲ್, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪುರೆ, ಅಶೋಕ ರೆಡ್ಡಿ ಗದಲೇಗಾಂವ, ಜಗದೇವಿ ಹಾವಳಿಗೆ ಸೇರಿ ಹಲವರಿದ್ದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಚನ್ನಬಸಪ್ಪ ಗೌರ ವಂದಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X