ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹುಮನಾಬಾದ ವಿಧಾನಸಭಾ ಕ್ಷೇತ್ರದ ಸಮಿತಿಯನ್ನು ರವಿವಾರ ರಚನೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸ ಸಭೆಯಲ್ಲಿ ಬಿಎಸ್ಪಿಯ ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ ಸಿಂಗಾರೆ, ಅಶೋಕ್ ಮಂಠಳಕರ್, ಪಕ್ಷದ ಜಿಲ್ಲಾಧ್ಯಕ್ಷ ಕಪಿಲ್ ಗೊಡಬೋಲೆ, ಮುಖಂಡ ವೈಜಿನಾಥ ಸಿಂಧೆ ನೇತೃತ್ವದಲ್ಲಿ ಸಮಿತಿ ರಚಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪಿಲ್ ಗೊಡಬೋಲೆ ಮಾತನಾಡಿ, ʼಬಹುಜನ ಸಮಾಜ ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಾನ್ಯವಾರ್ ಕಾನ್ಶಿರಾಂ ಅವರ ಕನಸು ನನಸು ಮಾಡಲು ಮಾಯಾವತಿ ಅವರ ಆದೇಶ ಹಾಗೂ ರಾಜ್ಯ ಸಮಿತಿಯ ಸೂಚನೆಗಳಿಗೆ ಅನುಗುಣವಾಗಿ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲರೂ ಅತ್ಯಂತ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತರಲು ಕಂಕಣಬದ್ಧರಾಗಿ ಶ್ರಮಿಸಬೇಕುʼ ಎಂದು ತಿಳಿಸಿದರು.
ಪದಾಧಿಕಾರಿಗಳ ನೇಮಕ :
ಹುಮನಾಬಾದ ವಿಧಾನಸಭಾ ಸಂಯೋಜಕರಾಗಿ ಗೌತಮ್ ದೊಡ್ಡಿ, ಹುಮನಾಬಾದ ವಿಧಾನಸಭಾ ಅಧ್ಯಕ್ಷರಾಗಿ ನಿಲೇಶ್ ಮೇಲ್ಕೆರಿ, ಪ್ರಧಾನ ಕಾರ್ಯದರ್ಶಿಯಾಗಿ ಗೌತಮ ಮೇಲಿನಮನಿ ಅವರನ್ನು ನೇಮಕ ಮಾಡಲಾಯಿತು.
ಇದನ್ನೂ ಓದಿ : ಒಂದೇ ಹೆಸರಿನ ಮೂವರು ಸಹೋದರರು; ಹೆಸರಿನ ಹಿಂದಿನ ಗುಟ್ಟೇನು ಗೊತ್ತಾ!