ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನುರಿತ ಶಿಕ್ಷಕರಿದ್ದರೂ ಗುಣಮಟ್ಟದ ಶಿಕ್ಷಣ ಸಿಗದೇ ಹಾಜರಾತಿ ಕುಂಠಿತವಾಗಲು ಕಾರಣಗಳೇನು ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ಪದಾಧಿಕಾರಿಗಳು ಒತ್ತಾಯಿಸಿದರು.
ಭಾರತೀಯ ದಲಿತ ಪ್ಯಾಂಥರ್ ವತಿಯಿಂದ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಂಖಾಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಜಂಟಿ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಸರ್ಕಾರಿ ಶಾಲೆಗಳನ್ನು ಇತ್ತೀವೆಗೆ ಮುಚ್ಚುವ ಪರಿಸ್ಥಿತಿ ಉದ್ಭವವಾಗಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಕಾರಣ ಪೋಷಕರು ನಿರುತ್ಸಾಹ ತೋರುತ್ತಿದ್ದಾರೆ. ಶಾಲೆಯಲ್ಲಿ ನುರಿತ ಶಿಕ್ಷಕರಿದ್ದರೂ ನಿರೀಕ್ಷಿತ ಪ್ರವೇಶ ಸಂಖ್ಯೆ ಇಲ್ಲ. ಆದರೆ, ಖಾಸಗಿ ಶಾಲೆಯಲ್ಲಿ ನುರಿತ ಶಿಕ್ಷಕರಿಲ್ಲದೆ ಇದ್ದರೂ ದಿನೇ ದಿನೇ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಏನೆಂಬುದನ್ನು ಪರಿಶೀಲನೆ ನಡೆಸಬೇಕು” ಎಂದು ಆಗ್ರಹಿಸಿದರು.
“ಸರ್ಕಾರಿ ಶಾಲೆಗಳಲ್ಲಿ ಪಿಠೋಪಕರಣ, ಆಟೋಪಕರಣ, ಕಂಪ್ಯೂಟರ್, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ ಆಸಕ್ತಿ ತುಂಬಬೇಕು. ಮುಚ್ಚುವ ಹಂತದಲ್ಲಿರುವ ಶಾಲೆಗಳಿಗೆ ಹೆಚ್ಚಿನ ಗಮನಹರಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ್ಗೆ ಕಡಿವಾಣ ಹಾಕಿ ಪೋಷಕರಿಗೆ ಶುಲ್ಕ ಹೊರೆಯಾಗದಂತೆ ಆದೇಶ ಹೊರಡಿಸಬೇಕು” ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಒತ್ತಾಯಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಳಕೆಯಾಗದೇ ಪಾಳುಬಿದ್ದಿದೆ ಸಂತಪೂರ ಬಸ್ ನಿಲ್ದಾಣ
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಹುಮನಾಬಾದ್ ತಾಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ,
ಚಿಟಗುಪ್ಪಾ ತಾಲೂಕಾ ಅಧ್ಯಕ್ಷ ಶಿವಕುಮಾರ್ ಸಾಗರ, ಜಿಲ್ಲಾ ಅಧ್ಯಕ್ಷ ಶಿವಾನಂದ ಕಟ್ಟಿಮನಿ ಸೇರಿದಂತೆ ಪದಾಧಿಕಾರಿಗಳಾದ ವೈಜಿನಾಥ ಸಿಂಧೆ, ಸುನೀಲ್ ಕುಮಾರ್ ಬೋಲಾ, ಅನಂತ ಮಾಳಗೆ, ಶ್ರೀಕಾಂತ್ ಜಮಗಿ, ಸುರೇಶ್ ಪಾಂಡೆ, ರಘುವೀರ್ ಹಿರೋಳೆ, ಶಿವರಾಜ್ ಸೂರ್ಯವಂಶಿ ಅಪ್ಪು ಕಟ್ಟಿಮನಿ, ಸಿದ್ಧಾರ್ಥ್ ಜಾನವೀರ್ ಇದ್ದರು.