ಬೀದರ್ ನಗರದ ಜನವಾಡ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದಸ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧ್ಯಯನ ಕೇಂದ್ರದಲ್ಲಿ ಹಾಳಾಗಿರುವ ತರಗತಿ ಕೋಣೆ, ಕಿಟಕಿ, ಬಾಗಿಲು ಪೀಠೋಪಕರಣ ಸುಣ್ಣ ಬಣ್ಣ ಮತ್ತು ಶೌಚಾಲಯ ಸೇರಿದಂತೆ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ʼಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಮುಚ್ಚಿರುವ ಬಗ್ಗೆ ಬೀದರ್ ವಿವಿ ಕುಲಪತಿಗಳ ಜೊತೆ ಚರ್ಚಿಸಿ ಪುನಾರಂಭ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಉಳಿವಿಗಾಗಿ ಈ ಪ್ರಾದೇಶಿಕ ಅಧ್ಯಯನ ಕೇಂದ್ರ ಮರು ಪ್ರಾರಂಭಿಸಿ ಇಲ್ಲಿನ ವಿಧ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವುದು ಉಪನ್ಯಾಸಕರ, ಸಿಬ್ಬಂದಿ ಭರ್ತಿ ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಶುಕ್ರವಾರ ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬೀದರ ಜಿಲ್ಲೆಯಲ್ಲಿ ಕಲಾ ಗ್ರಾಮ ಸ್ಥಾಪನೆ ಮಾಡು ಕುರಿತು ಸಭೆಯಲ್ಲಿ ಜಾನಪದ ಅಕಾಡೆಮಿ ಸದಸ್ಯರು ಮತ್ತು ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯನ ಕೇಂದ್ರ ಮುಖ್ಯಸ್ಥರು ವಿಜಯಕುಮಾರ ಸೋನಾರೆ ಅವರು ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಪುನಃ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಮನವಿ ಮೇರೆಗೆ ಸಂಜೆ ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ನೇತ್ರತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಒತ್ತು ನೀಡಿ : ಶಶಿಕಾಂತ ಶೆಂಬೆಳ್ಳಿ
ಪ್ರಾದೇಶಿಕ ಅಧ್ಯಾನ ಕೇಂದ್ರ ಕಚೇರಿ ಸಹಾಯಕ ಶ್ರೀಧರ್ ಜಾಧವ, ಪ್ರಮುಖರಾದ ಸುನೀಲ ಭಾವಿಕಟ್ಟಿ, ಅಂಬರೀಶ ಮಲ್ಲೇಶಿ, ಮಾರುತಿ ಮಾಸ್ಟರ್, ಗುರು ಮತ್ತಿತರರು ಇದ್ದರು.