ಡಿಸಿಸಿ ಬ್ಯಾಂಕಿನ ಹೊಸ ಆಡಳಿತ ಮಂಡಳಿ ಹಾಗೂ ಎನ್‌ಎಸ್‌ಎಸ್‌ಕೆ ಮಂಡಳಿಯವರು ತಮ್ಮ ರಾಜಕೀಯ ಪ್ರತಿಷ್ಠೆಗೆ ಬಿದ್ದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಹಳ್ಳಿಖೇಡದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಬಂದ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
“ಜಿಲ್ಲೆಯ ಡಿಸಿಸಿ ಬ್ಯಾಂಕ್ ದಿವಂಗತ ವೀರಶೆಟ್ಟಿ ಕುಶನೂರ ಅವರು ಪ್ರಾರಂಭಿಸಿ ನಂತರ ದಿವಂಗತ ಗುರುಪಾದಪ್ಪಾ ನಾಗಮಾರಪಳ್ಳಿರವರ ಅಧ್ಯಕ್ಷತ್ಯೆಯಲ್ಲಿ ಮುನ್ನಡೆದು ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿತ್ತು. ಮುಂದೆ ಗುರುಪಾದಪ್ಪಾ ನಾಗಮಾರಪಳ್ಳಿಯವರ ಪುತ್ರ ಉಮಾಕಾಂತ ನಾಗಮಾರಪಳ್ಳಿಯವರ ಅಧ್ಯಕ್ಷತೆ ಅವಧಿಯಲ್ಲಿಯೂ ಬ್ಯಾಂಕ್ ಉತ್ತಮ ಸಾಧನೆ ಮಾಡಿದೆ. ಹಲವು ದಶಕಗಳ ಬಳಿಕ ಇದೀಗ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಸಹೋದರ ಅಮರ ಖಂಡ್ರೆ ಅವರ ಪೆನಾಲ್ ಜಯ ಸಾಧಿಸಿದ್ದು ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ” ಎಂದಿದ್ದಾರೆ.
“ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಡಿಸಿಸಿ ಬ್ಯಾಂಕಿನ ನಂಟು ಮೊದಲಿನಿಂದಲೂ ಇದೆ. ಸದ್ಯಕ್ಕೆ ನಾರಂಜಾ ಸಕ್ಕರೆ ಕಾರ್ಖಾನೆ (ಎನ್.ಎಸ್.ಎಸ್.ಕೆ) ಸಾಲದಲ್ಲಿ ಮುಳುಗಿ ಆರ್ಥಿಕ ಸಂಕಷ್ಟದಲ್ಲಿದೆ. ಆದ್ದರಿಂದ ಡಿ.ಸಿ.ಸಿ.ಬ್ಯಾಂಕಿನ ಹೊಸ ಆಡಳಿತ ಮಂಡಳಿ ಮೊದಲಿನಂತೆ ಸಹಕರಿಸಿದರೆ ನಾರಂಜಾ ಸಕ್ಕರೆ ಕಾರ್ಖಾನೆಯ ರೈತರ ಬಾಳು ಹಸನವಾಗುತ್ತದೆ. ಇಲ್ಲವಾದಲ್ಲಿ ಹಳಿಖೇಡ (ಬಿ) ಬಿ.ಎಸ್.ಎಸ್.ಕೆ. ಪರಿಸ್ಥಿತಿ ಉಂಟಾಗುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿವೆ. ಈ ಬಗ್ಗೆ ಡಿಸಿಸಿ ಬ್ಯಾಂಕಿನ ಹೊಸ ಆಡಳಿತ ಮಂಡಳಿ ಯೋಚಿಸಿ ನಾರಂಜಾ ಸಕ್ಕರೆ ಕಾರ್ಖಾನೆ ಆರ್ಥಿಕ ಸುಧಾರಣೆಗೆ ಸಹಕರಿಸಬೇಕೆಂದು” ಕಬ್ಬು ಬೆಳೆಗಾರರ ಪರವಾಗಿ ಭಾರತೀಯ ಕಿಶಾನ್ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಸಹಕಾರ ಖಾತೆಯಲ್ಲಿ ನುರಿತ, ಅನುಭವಿಗಳು. ಹೀಗಾಗಿ ಕಬ್ಬು ಬೆಳೆಗಾರರ ಸಹಾಯ ಹಸ್ತಕ್ಕಾಗಿ ಪುನಃ ಅವರ ಅಧ್ಯಕ್ಷತೆಯಲ್ಲಿಯೇ ಸಹಕಾರ ಸಕ್ಕರೆ ಕಾರ್ಖಾನೆ ಮುನ್ನಡೆಸಬೇಕು. ಇದಕ್ಕೆ ಡಿ.ಸಿ.ಸಿ. ಬ್ಯಾಂಕಿನ ಹೊಸ ಆಡಳಿತ ಮಂಡಳಿಯವರು ಸಹಕಾರ ಕೊಟ್ಟು ಸಕ್ಕರೆ ಕಾರ್ಖಾನೆ ಮುಂದುವರೆಸಿದರೆ ಕಬ್ಬು ಬೆಳೆಗಾರರ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿಶ್ವದ ಶೇ.20% ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ
ಜಿಲ್ಲಾ ಭಾರತೀಯ ಕಿಸಾನ್ ಸಂಘದ ಗೌರವಾಧ್ಯಕ್ಷ ವೈಜಿನಾಥ ನೌಬಾದೆ, ಜಿಲ್ಲಾಧ್ಯಕ್ಷ ಪ್ರಭು ಮೂಲಗೆ, ಕಾರ್ಯದರ್ಶಿ ಅಮೀತಕುಮಾರ, ನಿರ್ದೇಶಕ ಬಸವರಾಜ ಪಾಟೀಲ್ ಬೀರಿ (ಬಿ) ಅವರು ಜಂಟಿಯಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.