ಕಮಲನಗರ ತಾಲೂಕಿನ ಬೆಳಕುಣಿ (ಭೋ) ಗ್ರಾಮದಲ್ಲಿ ತಥಾಗತ ಗೌತಮ ಬುದ್ಧರ 2588ನೇ ಜನ್ಮ ವಾರ್ಷಿಕೋತ್ಸವವನ್ನು ಪ್ರಜ್ಞೆ ಮತ್ತು ಉತ್ಸಾಹದಿಂದ ಆಚರಿಸಲಾಯಿತು.
ಪ್ರೊ.ದಿಗಂಬರ್ ಡೊಂಗ್ರೆ ಅವರು ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ಕಪಿಲ್ ಡೊಂಗ್ರೆ ಅವರು ಬುದ್ಧ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಪೂಜೆ ಸಲ್ಲಿಸಿದರು.
ಬಳಿಕ ಬುದ್ದ ಪೂರ್ಣಿಮೆಯ ಸಂಭ್ರಮದಲ್ಲಿ ಪಂಚಶೀಲ ಬುದ್ಧ ವಿಹಾರದಿಂದ ಅಂಬೇಡ್ಕರ್ ವೃತ್ತದವರೆಗೆ ಮೇಣದಬತ್ತಿ ಬೆಳಕಿನ ಮೆರವಣಿಗೆ ನಡೆಯಿತು.
ಚಿಂತಕ ಸುಖದೇವ್ ಡೊಂಗ್ರೆ ಅವರು ಮಾತನಾಡಿ, ‘ಬುದ್ಧರ ಪ್ರಜ್ಞೆ, ಶೀಲ ಮತ್ತು ಕರುಣೆಯನ್ನು ಅಳವಡಿಸಿಕೊಳ್ಳಬೇಕು. ಈ ಮೌಲ್ಯಗಳು ಒಳ್ಳೆಯ ನಡವಳಿಕೆ, ಸದಾಚಾರದ ಜೀವನ, ಸ್ನೇಹಪರತೆ, ಮತ್ತು ಕರುಣೆಯನ್ನು ಬೆಳೆಸುತ್ತವೆ. ಬೌದ್ಧ ತತ್ವಗಳನ್ನು ಅಳವಡಿಸಿಕೊಳ್ಳಲು ಮತ್ತು ಸಂತೋಷದಾಯಕ ಹಾಗೂ ಸಮೃದ್ಧ ಜೀವನಕ್ಕಾಗಿ ಅಷ್ಟಾಂಗ ಮಾರ್ಗವನ್ನು ಅನುಸರಿಸಲು ಅವರು ಕರೆ ನೀಡಿದರು.
ರಾಜಕುಮಾರ್ ಡೊಂಗ್ರೆ, ಶಿಕಿಂದರ್ ಕಾಂಬಳೆ, ತಾನಾಜಿ ಕಾಂಬಳೆ, ರಾಹುಲ್ ಗಾಯಕವಾಡ್, ರಾಜ್ ಡೊಂಗ್ರೆ ಯದವರಾವ್ ರಾನಡೆ, ಮಾರುತಿ ರಾನಡೆ, ಲೋಕೇಶ್ ರಾನಡೆ, ಮಾಧಬಾಯಿ ರಾನಡೆ, ದತ್ತಾ ಸಾವಂತ್, ವೈಭವ್ ಕಾಂಬಳೆ ಹಾಗೂ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.