ಬೀದರ್ ನೂತನ ಜಿಲ್ಲಾಧಿಕಾರಿಯಾಗಿ ಶಿಲ್ಪಾ ಶರ್ಮಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದಿನ ಡಿಸಿ ಗೋವಿಂದ ರೆಡ್ಡಿ ಅವರನ್ನು ಬೀದರ್ ಜಿಲ್ಲೆಯಿಂದ ಗದಗ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಿದೆ.
ಬೀದರ್ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿರುವ ಶಿಲ್ಪಾ ಶರ್ಮಾ ಅವರು ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದರು.
ಎರಡು ದಿನಗಳ ಹಿಂದೆ ಬೀದರ್ ಎಸ್ಪಿ ಚೆನ್ನಬಸವಣ್ಣ ಎಸ್.ಎಲ್ ಅವರನ್ನು ವರ್ಗಾವಣೆಗೊಳಿಸಿ ಅವರ ಜಾಗಕ್ಕೆ ಪ್ರದೀಪ್ ಗುಂಟಿ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ಶಿಲ್ಪಾ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ.
ವಾರದೊಳಗೆ ಡಿಸಿ, ಎಸ್ಪಿ ಇಬ್ಬರನ್ನು ವರ್ಗಾವಣೆಗೊಳಿಸಿ ಹೊಸಬರನ್ನು ನೇಮಕ ಮಾಡಿದಂತಾಗಿದೆ.