ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಬೀದರ್ ನಗರದ ಎಂ.ಡಿ.ಅಲೀಮುದ್ದೀನ್ ಫೌಂಡೇಶನ್ ಮತ್ತು ಮೂವ್ಮೆಂಟ್ ಆಫ್ ಜಸ್ಟೀಸ್ ಇವರ ಸಹಯೋಗದಲ್ಲಿ ನಾಳೆ (ಏ.14) ಮೆಗಾ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಬೀದರ್ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಮೀಪದ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೆಗಾ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶಿಬಿರ ನಡೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರಕ್ತದಾನ ಶಿಬಿರದಲ್ಲಿ 18 ರಿಂದ 60 ವರ್ಷ ವಯಸ್ಸಿನವರು ರಕ್ತದಾನ ಮಾಡಬಹುದು. ದಾನಿಯಿಂದ ಸಂಗ್ರಹಿಸಿದ ಒಂದು ಯೂನಿಟ್ ರಕ್ತವು ಮೂರು ಜನರ ಜೀವ ಉಳಿಸಬಹುದು. ವಿಶೇಷವಾಗಿ ಯುವಕರು ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ದಾನಗೈದು ಮತ್ತೊಬ್ಬರ ಜೀವ ಉಳಿಸುವ ಈ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿಗಳಾದ ಮಹಮ್ಮದ್ ಅಸಾದುದ್ದೀನ್ ಹಾಗೂ ಸೈಯದ್ ಸರ್ಫರಾಜ್ ಹಾಶ್ಮಿ ಕೋರಿದ್ದಾರೆ.