ಭಾಲ್ಕಿ ತಾಲೂಕಿನ ತಳವಾಡ(ಎಂ) ಗ್ರಾಮದಲ್ಲಿ ಈಚೆಗೆ ಮಾಂಜ್ರಾ ನದಿ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ರೈತ ವಿಲಾಸ ಗಣಪತರಾವ ಪಂಚಾಳ (65) ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭಾನುವಾರ ಭೇಟಿ ನೀಡಿದರು.
ಮೃತ ರೈತನ ಕುಟುಂಬ ಸದಸ್ಯರನ್ನು ಸಾಂತ್ವನ ತಿಳಿಸಿದ ಸಚಿವರು 5 ಲಕ್ಷ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಸಚಿವರು, ʼಮಾಂಜ್ರಾ ನದಿ ನೀರಿನಲ್ಲಿ ಇದೇ ಜೂ.೧೮ ರಂದು ರೈತ ವಿಲಾಸ ಅವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ವಿಷಯ ತಿಳಿದು ತೀವ್ರ ದುಖ ತರಿಸಿದೆ. ಪರಿವಾರದ ದುಖದಲ್ಲಿ ನಾನು ಭಾಗಿಯಾಗಿದ್ದೇನೆ. ಎಲ್ಲರೂ ಧೈರ್ಯದಿಂದ ಇರಬೇಕು. ಸರಕಾರದ ವತಿಯಿಂದ 5 ಲಕ್ಷ ಪರಿಹಾರ ಧನ ಮಂಜೂರು ಮಾಡಿಸಿ ಚೆಕ್ ನೀಡಿದ್ದೇನೆʼ ಎಂದರು.
ʼಪರಿಹಾರ ಧನವನ್ನು ಮಕ್ಕಳ ಶಿಕ್ಷಣ ಮತ್ತು ಮದುವೆ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಮುಂದೆಯೂ ಏನೇ ಸಹಾಯ ಸಹಕಾರ ಬೇಕಿದ್ದರೂ ನಿಮ್ಮೊಂದಿಗೆ ಇರುತ್ತೇವೆʼ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು.