ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲು ದಾಳಿ ನಡೆಸಿ, ಜಪ್ತಿ ಮಾಡಿದ್ದ ₹53.30 ಲಕ್ಷ ಮೌಲ್ಯದ ಗಾಂಜಾ ಅನ್ನು ಜಿಲ್ಲಾ ಪೊಲೀಸರು ಬುಧವಾರ ನಾಶಪಡಿಸಿದರು.
ಭಾಲ್ಕಿ ತಾಲ್ಲೂಕಿನ ಧನ್ನೂರ ಗ್ರಾಮದ ʼಇನ್ವೆರೊʼ ಬಯೋಟೆಕ್ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ಗಾಂಜಾ, ನಶೆ ಏರಿಸುವ ಗುಳಿಗೆ, ಸಿರಪ್, ಬಾಟಲಿಗಳನ್ನು ನಾಶಗೊಳಿಸಿದರು. ಜಿಲ್ಲೆಯ ವಿವಿಧ ಠಾಣೆಗಳಲ್ಲಿ 22 ಪ್ರಕರಣಗಳು ದಾಖಲಾಗಿದ್ದವು. 182 ಕೆಜಿ 285 ಗ್ರಾಂ ನಶೆಯ ವಸ್ತುಗಳು ಸೇರಿವೆ.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಜಿಲ್ಲಾ ಡ್ರಗ್ಸ್ ವಿಲೇವಾರಿ ಕಮಿಟಿ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಿದರು.
ಇದನ್ನೂ ಓದಿ : ಬೀದರ್ | ಬಸವತತ್ವಕ್ಕೆ ಬದ್ಧರಾಗಿ ಬದುಕೋಣ : ಶಶಿಕಾಂತ ಶೆಂಬೆಳ್ಳಿ