ಬೀದರ್‌ | ಆಸ್ತಿಗಾಗಿ ನಡೆದ ಕೊಲೆಗೆ ಕೋಮು ಬಣ್ಣ ಬಳಿದ ಗೋದಿ ಮಾಧ್ಯಮಗಳು!

Date:

Advertisements

ಆಸ್ತಿಗಾಗಿ ನಡೆದಿದ್ದ ಕೊಲೆಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದಕ್ಕೆ ಪತ್ನಿ ಹಾಗೂ ಮೂವರು ಮಕ್ಕಳು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯದ ಕೆಲವೊಂದು ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿರುವುದು ವರದಿಯಾಗಿದೆ.

ಬೀದ‌ರ್ ತಾಲೂಕಿನ ಮನ್ನಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾತೋಳಿ ಗ್ರಾಮದಲ್ಲಿ ನ.8ರಂದು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಿವುಡ ಹಾಗೂ ಮೂಕ ವ್ಯಕ್ತಿ ಬಸವರಾಜ ನರಸಪ್ಪ ಶೇರಿಕಾರ್ (52) ಎಂಬವರನ್ನು ಆತನ ಪತ್ನಿ ಮತ್ತು ಮೂವರು ಮಕ್ಕಳು ಸೇರಿ ಮನೆಯಲ್ಲಿ ಕೈ ಕಾಲು ಕಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿತ್ತು.

ಈ ಕೊಲೆಗೆ ಕೋಮುಬಣ್ಣ ಬಳಿಯುವ ಉದ್ದೇಶದಿಂದ ಕೆಲವು ಖಾಸಗಿ ಸುದ್ದಿ ಮಾಧ್ಯಮಗಳು ಮತಾಂತರಕ್ಕೆ ಒಪ್ಪದಿದ್ದಕ್ಕೆ ಮೂಗ ತಂದೆಯನ್ನೇ ಕೊಲೆ ಮಾಡಲಾಗಿದೆ ಎಂದು ವಿವಿಧ ಶೀರ್ಷಿಕೆಯಡಿ ಸುಳ್ಳು ಸುದ್ದಿ ಪ್ರಕಟಿಸಿದವು ಎನ್ನಲಾಗಿದೆ.

Advertisements

ನ.8 ರಂದು ಬೆಳಗ್ಗೆ ಬಸವರಾಜ್ ನರಸಪ್ಪ ಮನೆಗೆ ಹೋಗಿದ್ದಾಗ ಮನೆಯರ ಮಾತು ಕೇಳದ ಕಾರಣಕ್ಕಾಗಿ ಪತ್ನಿ ಅಡೇಮಾ (45) ಪುತ್ರರಾದ ಪ್ರಭಾಕರ್ (25), ಹಣಮಂತ್ (22) ಹಾಗೂ ಪುತ್ರಿ ರತ್ನಮ್ಮಾ (28) ಮನೆಯ ಕೋಣೆಯಲ್ಲಿ ಆತನ ಕೈ ಕಾಲು ಕಟ್ಟಿಹಾಕಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಸಹೋದರ ಮಲ್ಲಿಕಾರ್ಜುನ್ ನರಸಪ್ಪಅವರು ಮನ್ನಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಕುರಿತು ಸತ್ಯಶೋಧನೆಗಾಗಿ ʼಈದಿನ.ಕಾಮ್‌ʼ ಮೀಡಿಯಾ ತಂಡ ಘಟನೆ ಜರುಗಿದ ಸಾತೋಳಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಾಗ ಇದು ಮತಾಂತರಕ್ಕೆ ಸಂಬಂಧಿಸಿದ ಕೊಲೆ ಅಲ್ಲ ಎಂದು ತಿಳಿದು ಬಂದಿದೆ.

ಕೌಟುಂಬಿಕ ಆಸ್ತಿ ವಿಚಾರಕ್ಕಾಗಿ ನಡೆದ ಕೊಲೆಯನ್ನು ಕೆಲವು ಮಾಧ್ಯಮಗಳು ಮತಾಂತರಕ್ಕೆ ಒಪ್ಪದ ಕೊಲೆ ಎಂದು ಬಿಂಬಿಸಿ ಸುಳ್ಳು ಸುದ್ದಿ ವರದಿ ಮಾಡಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದೇವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X