ಬೀದರ್ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಪೂರ್ವ ಹಾಗೂ ನೈರುತ್ಯ ಮುಂಗಾರು ಮಳೆ ಅಬ್ಬರಿಸಿದ್ದು, ಪರಿಣಾಮ ತೋಟಗಾರಿಕೆ ಮತ್ತು ಕೃಷಿ ಸೇರಿ ಒಟ್ಟು 569 ಹೆಕ್ಟೇರ್‌ಗಳಲ್ಲಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಗಾರು ಪೂರ್ವ ಹಂಗಾಮಿನಲ್ಲಿ 66ಮಿ.ಮಿ. ವಾಡಿಕೆ ಮಳೆಯಾಗಬೇಕಿತ್ತು. ಈ ಬಾರಿ 136 ಮಿ.ಮಿ. ಮಳೆಯಾಗಿದೆ. ವಾಡಿಕೆಗಿಂತ ಶೇ.69ರಷ್ಟು ಅಧಿಕ ಮಳೆಯಾಗಿದ್ದು, ಹೆಚ್ಚಿನ ಮುಂಗಾರು ಪೂರ್ವ ಮಳೆಯಿಂದಾಗಿ ಜಿಲ್ಲೆಯಲ್ಲಿ 7 ಮನೆ ಹಾನಿ, 34 ದೊಡ್ಡ ಜಾನುವಾರು, 9 ಸಣ್ಣ ಜಾನುವಾರು ಸೇರಿ ಒಟ್ಟು 43 ಜಾನುವಾರು ಸಾವನಪ್ಪಿದ್ದು, ಯಾವುದೇ ಮಾನವ ಹಾನಿ ಸಂಭವಿಸಿಲ್ಲ.
ನೈರುತ್ಯ ಮುಂಗಾರು ಮಳೆ 373 ಮಿ.ಮೀ ವಾಡಿಕೆ ಮಳೆಯಾಗುತಿತ್ತು. ಆದರೆ ಈ ಬಾರಿ 246 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ -34ರಷ್ಟು ಕಡಿಮೆ ಮಳೆಯಾಗಿದೆ.
ನೈರುತ್ಯ ಮಳೆಯಿಂದಾಗಿ ಜಿಲ್ಲೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಗೋಡೆ ಕುಸಿತದಿಂದ 83 ಮನೆಗಳಿಗೆ ಹಾನಿಯಾಗಿದೆ, 8 ದೊಡ್ಡ ಜಾನುವಾರುಗಳ ಜೀವ ಹಾನಿಯಾಗಿದೆ. ಜನ-ಜಾನುವಾರು ಜೀವಹಾನಿಗೆ ಪರಿಹಾರ ವಿತರಿಸಲಾಗಿದೆ ಎಂದು ಡಿಸಿ ಶಿಲ್ಪಾ ಶರ್ಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೀದರ್ | ಸರ್ಕಾರಿ ಶಾಲೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ, ಮಕ್ಕಳಿಗೆ ಗಣಿತ ಪಾಠ ಬೋಧನೆ