ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ನಡೆದ ಜೂಜಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಗಾಂಜಾ, ಪಡಿತರ ಅಕ್ಕಿ ಅಕ್ರಮ ಸಂಗ್ರಹ, ಅಕ್ರಮ ಮದ್ಯ ಮಾರಾಟ ಕುರಿತು 189 ಪ್ರಕರಣಗಳನ್ನು ದಾಖಲಿಸಿ ಬ ಒಟ್ಟು 431 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ ತಿಳಿಸಿದ್ದಾರೆ.
ಬಂಧಿತರಿಂದ ₹35.34 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಗಳ ವಿವರ :
22 ಜೂಜಾಟ ಪ್ರಕರಣಗಳಲ್ಲಿ 227 ಆರೋಪಿತರನ್ನು ಬಂಧಿಸಿ ₹3.03 ಲಕ್ಷ, 11 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳಲ್ಲಿ 19 ಆರೋಪಿಗಳನ್ನು ಬಂಧಿಸಿ ₹62.70 ಸಾವಿರ, 49 ಮಟ್ಕಾ ಪ್ರಕರಣಗಳಲ್ಲಿ 65 ಆರೋಪಿಗಳನ್ನು ಬಂಧಿಸಿ ₹78.34 ಸಾವಿರ, ಪಡಿತರ ಅಕ್ಕಿ ಅಕ್ರಮ ಸಂಗ್ರಹ 7 ಪ್ರಕರಣಗಳಲ್ಲಿ 11 ಆರೋಪಿತರನ್ನು ಬಂಧಿಸಿ ₹6.43 ಲಕ್ಷ, ಡ್ರಗ್ಸ್ 3 ಪ್ರಕರಣಗಳಲ್ಲಿ 4 ಆರೋಪಿತರನ್ನು ಬಂಧಿಸಿ 22.51 ಲಕ್ಷ, ಹಾಗೂ 97 ಅಬಕಾರಿ ಪ್ರಕರಣಗಳಲ್ಲಿ 105 ಆರೋಪಿಗಳನ್ನು ಬಂಧಿಸಿ ₹1.95 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ʼಆರೋಪಿಗಳು ಪದೇ ಪದೇ ಕಾನೂನು ವಿರುದ್ದ ಚಟುವಟಿಕೆಗಳಲ್ಲಿ ತೊಡಗಿದರೆ ಅಂತಹ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಗಡಿಪಾರು ಮಾಡಲಾಗುವುದುʼ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದ್ದಾರೆ.