ಬೀದರ್‌ನ ಪತ್ರಕರ್ತ ರವಿ ಭೂಸಂಡೆ ಮೇಲೆ ಹಲ್ಲೆ ನಡೆಸಿದ ಅರಣ್ಯಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ, ವೀರ ಕನ್ನಡಿಗರ ಸೇನೆ, ಕನ್ನಡಿಗರ ರಕ್ಷಣಾ ವೇದಿಕೆ, ಕರವೇ ಕಾವಲು ಪಡೆ ಸಂಘಟನೆಗಳ ನೇತೃತ್ವದಲ್ಲಿ ಬೀದರ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ʼಏ.15ರಂದು ಅರಣ್ಯ ಅಧಿಕಾರಿ ರಾತ್ರಿ ವೇಳೆ ಬೀದರ್ ಏರ್‌ಪೋರ್ಟ್ ರಸ್ತೆ ಬದಿಗೆ ಸಸಿಗಳನ್ನು ಹಚ್ಚುವ ಕೆಲಸವನ್ನು ಮಾಡುತ್ತಿದ್ದರು. ಅರಣ್ಯ ಅಧಿಕಾರಿಗಳು ಮಾಡುವ ಕೆಲಸದ ಸ್ಥಳಕ್ಕೆ ಹೋಗಿ ಸಸಿಗಳನ್ನು ಹಚ್ಚುತ್ತಿರುವ ಫೋಟೊ ಮತ್ತು ವಿಡಿಯೊ ಮಾಡಿಕೊಂಡು ವರದಿ ಮಾಡಲು ಬಂದಿರುವ ರವಿ ಭೋಸಂಡೆ ಅವರ ಮೇಲೆ ಹಲ್ಲೆ ಮಾಡಿದ್ದಾರೆʼ ಎಂದು ಆರೋಪಿಸಿದರು.
ʼಇಡೀ ರಾತ್ರಿ ಖಾಸಗಿ ವಾಹನದಲ್ಲಿ ಅಲೆದಾಡಿಸಿ ಅವಾಚ್ಛ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಂತರ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋಗಿದ್ದಾರೆ. ಆ ನಂತರ ಹಲ್ಲೆಗೊಳಗಾಗಿರುವ ರವಿ ಅವರು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ರವಿ ಭೋಸಂಡೆ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ’ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಯುಸಿ ಪರೀಕ್ಷೆ ಫಲಿತಾಂಶ : ಜಿಲ್ಲೆಯ 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
ಭೀಮ್ ಆರ್ಮಿ ಜಿಲ್ಲಾ ಗೌರವ ಅಧ್ಯಕ್ಷ ಘಾಳಪ್ಪ ಲಾದಕರ್, ಜಿಲ್ಲಾಧ್ಯಕ್ಷ ಅಂಬರೀಶ್ ಕುದರೆ, ರಾಜ್ಯ ಸಮಿತಿ ಪ್ರತಿನಿಧಿ ಆಕಾಶ ವಿ ಆರ್ ಕೆ, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ, ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ, ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಅವಿನಾಶ ಬುದೇರಾಕರ್, ಅಂಬಾದಾಸ ಸೈನೆ, ಕರ್ನಾಟಕ ಭೀಮ ಸೈನೆ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ ವಾಲದೊಡ್ಡಿ, ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ಮಾರುತಿ ಕಂಠಿ ಕಪಿಲ ಗೋಡಬಲೆ, ಹರ್ಷಿತ್ ವಾಡೆಕರ ಅಮೃತ ಮುಂತ್ತಂಗಿಕರ ರಾಜಕುಮಾರ ಡೋಗ್ರೇರೆ, ವಿನಿತ ಗೀರಿ ಸೇರಿದಂತೆ ಮತ್ತಿತರರಿದ್ದರು