ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಹೊಸಪೇಟೆಯಲ್ಲಿರುವ ವಿಜಯನಗರ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಕಲಬುರ್ಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಗೆ ಬೀದರ್ ಜಿಲ್ಲೆಯಿಂದ ಇಬ್ಬರು ಯುವ ಕವಿಗಳು ಆಯ್ಕೆಯಾಗಿದ್ದಾರೆ.
ಬೀದರ್‌ನ ಕರ್ನಾಟಕ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಂಗಪ್ಪ ತೌಡಿ ಹಾಗೂ ಶಿಕ್ಷಕ, ಕವಿ ಅಜಿತ್ ಎನ್.ನೇಳಗಿ ಅವರು ಯುವ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಇಬ್ಬರೂ ಕವನ ಸಂಕಲನ ಸೇರಿದಂತೆ ಇತರೆ ಕೃತಿಗಳನ್ನು ರಚಿಸಿದ್ದು, ಸಾಹಿತ್ಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಾಲ್ಕು ವಿಭಾಗಗಳಲ್ಲಿ ಯುವ ಕವಿಗೋಷ್ಠಿ ಹಮ್ಮಿಕೊಂಡಿದೆ. ಅದರಂತೆಯೇ ಜೂನ್ 17ರಂದು ವಿಜಯನಗರ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ಕಲಬುರ್ಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿ ನಡೆಯಲಿದ್ದು, ಕಲಬುರಗಿ ವಿಭಾಗದ ಜಿಲ್ಲೆಗಳ 20ಕ್ಕೂ ಹೆಚ್ಚು ಯುವ ಕವಿಗಳು ಭಾಗವಹಿಸಲಿದ್ದಾರೆ.
ಈ ಗೋಷ್ಠಿಯಲ್ಲಿ ತಮ್ಮ ಸ್ವ ರಚಿತ ಕವನವನ್ನು ವಾಚಿಸಲು ಸಂಗಪ್ಪಾ ತೌಡಿ ಹಾಗೂ ಅಜಿತ್ ಎನ್. ನೇಳಗಿ ಅವರನ್ನು ಆಯ್ಕೆ ಮಾಡಿ ಆಹ್ವಾನಿಸಿದೆ.
ಇದನ್ನೂ ಓದಿ : ವಿಮಾನ ದುರಂತ : ಕೇಂದ್ರ ವಿಮಾನಯಾನ ಸಚಿವ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಆಗ್ರಹ
👌🥰🌹