ಮಕ್ಕಳಲ್ಲಿ ಅಡಗಿರುವ ಅಗಾಧವಾದ ಪ್ರತಿಭೆ ಗುರುತಿಸಲು ಕಲಿಕೋತ್ಸವ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಚಾಂಗಲೇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಗಣಪತಿ ಹೇಳಿದರು.
ಬೀದರ್ ತಾಲ್ಲೂಕಿನ ಚಾಂಗಲೇರಾ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯತ್ ಚಾಂಗಲೇರಾ ಇವರ ಸಹಯೋಗದಲ್ಲಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ಶಾಲಾ ವಾರ್ಷಿಕೋತ್ಸವ, ಕಲಿಕೋತ್ಸವ ಹಾಗೂ ಇಕೋ ಕ್ಲಬ್ ಉದ್ಘಾಟನೆ ಹಾಗೂ 8ನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಮಕ್ಕಳ ಪ್ರತಿಭೆ ಹಾಗೂ ಕಲಿಕಾ ಸಾಮರ್ಥ್ಯವನ್ನು ಅನಾವರಣಗೊಳಿಸಿ ಶಿಕ್ಷಕರು ಮಕ್ಕಳ ವಿಭಿನ್ನ ಪ್ರತಿಭೆಯನ್ನು ಕಣ್ಣಾರೆ ನೋಡುವಂತೆ ಮಾಡಿದ್ದಾರೆ. ಮಕ್ಕಳ ಕಲಿಕೆ ಮತ್ತು ಅವರ ಪ್ರತಿಭೆಯನ್ನು ನೋಡಿ ಸಂತೋಷವಾಗಿದೆʼ ಎಂದು ಶ್ಲಾಘಿಸಿದರು.
ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ವಾಲಿ ಮಾತನಾಡಿ, ʼಮಕ್ಕಳು ಸಿದ್ಧಪಡಿಸಿದ ವಿವಿಧ ಮಾದರಿ ಚಟುವಟಿಕೆ, ಕ್ರಿಯಾಶೀಲತೆ, ದೇಶಭಕ್ತಿ ನೋಡಿ ಹೆಮ್ಮೆ ಎನಿಸಿದೆ. ಇನ್ನೂ ಹೆಚ್ಚಿನ ಜ್ಞಾನವೃದ್ಧಿ ಗಳಿಸಿ ಗ್ರಾಮಕ್ಕೆ ಕೀರ್ತಿ ತರಬೇಕುʼ ಎಂದು ಹಾರೈಸಿದರು.

ಶಾಲೆಯ ಮುಖ್ಯಗುರು ಧರ್ಮಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಅಶೋಕ, ಶ್ರೀಮತಿ ಯಶೋಧಾ, ಕಂಟೆಪ್ಪಾ ಚಾಂಗಲೇರಾ, ಸೊಸೈಟಿ ಅಧ್ಯಕ್ಷರಾದ ಪರಮೇಶ್ವರ ಸ್ವಾಮಿ, ಎಪಿಎಂಸಿ ಸದಸ್ಯ ದೇವಿಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ಉಪ್ಪಿನ್, ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ ಜಮಾದಾರ, ಖಜಾಂಚಿ ರಮೇಶ ಕ್ಯಾತಾ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಪ್ರೇಮಿಲಾಬಾಯಿ ರೆಡ್ಡಿ, ನಿರ್ದೇಶಕ ಮೋಜೆಷ್, ಸಿಆರ್‌ಪಿ ಶಿವಕುಮಾರ ರಾಠೋಡ್, ಮಲ್ಲಯ್ಯ ಸ್ವಾಮಿ, ಮುಖ್ಯಗುರುಗಳ ಸಂಘದ ಅಧ್ಯಕ್ಷ ಮಾರುತಿ ಜಟಗೊಂಡ, ನಿರ್ದೇಶಕ ಶ್ರೀಮತಿ ಕಸ್ತೂರಿ ಉಪಸ್ಥಿತರಿದ್ದರು.
ಚಾಂಗಲೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ವಿವಿಧ ಸರಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ಫಾರೆಲ್, ವಿಜಯಕುಮಾರ, ಜ್ಯೋತಿ, ರಾಜಶೇಖರ ಮಳ್ಳಿ, ಶಿವಕುಮಾರ ಸಾಲಿ, ನಾರಾಯಣ ಮಡಿವಾಳ, ಸಾವಿತ್ರಿಬಾಯಿ, ಸುಧಾರಾಣಿ ಶರ್ಮಾ, ನಿರಂಜನ್, ಶಿವಕುಮಾರ ತೊಂಟೆ, ಗೌತಮ್ ರಾಹುಲ್, ಪ್ರಕಾಶ ರಾಹುಲ್, ಶಿವರಾಜ್, ಸುಜಾತಾ, ರಮೇಶ ರೆಡ್ಡಿ, ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕೆಎಸ್‌ಆರ್‌ಟಿಸಿ ಬಸ್; ಪ್ರಯಾಣಿಕರು ಪಾರು
ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶಿಕ್ಷಕಿ ಜೈಶ್ರೀ ಸ್ವಾಗತ ಗೀತೆ ನಡೆಸಿಕೊಟ್ಟರು. ರಾಜಪ್ಪ ಸಾಗರ್ ಸ್ವಾಗತಿಸಿದರು. ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರುಗಳು ವರದಿ ವಾಚನ ಮಾಡಿದರು. ಎಂ.ಎಸ್.ಮನೋಹರ ನಿರೂಪಿಸಿದರು. ಶಿವಕುಮಾರ ಹೂಗಾರ್ ವಂದಿಸಿದರು. ಶಿಕ್ಷಕರಾದ ಮಸ್ತಾನ್, ಶಿಕ್ಷಕಿಯರಾದ ಗಾಯತ್ರಿ, ಪ್ರತಿಭಾ, ಭುವನೇಶ್ವರಿ, ರೇಣುಕಾ, ಕವಿತಾ ಸೇರಿದಂತೆ ವಿದ್ಯಾರ್ಥಿ, ಸಿಬ್ಬಂದಿ ಹಾಗೂ ಪಾಲಕರು ಇದ್ದರು.