ಕರ್ನಾಟಕ ಜಾನಪದ ಅಕಾಡೆಮಿಯ 2023 ಹಾಗೂ 2024ನೇ ಸಾಲಿನ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ನಡೆಯಿತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಒಣಕೆಯಿಂದ ಭತ್ತ ಕುಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮೊಬೈಲ್ ಮೂಲಕ ಸಂದೇಶ ನೀಡಿ, ʼಕರ್ನಾಟಕವು ಜಾನಪದದ ತವರಾಗಿದೆ. ಎಲ್ಲ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ತಾಯಿಬೇರು ಜಾನಪದ. ಮನುಷ್ಯನ ಎಲ್ಲ ಹಂತಗಳಲ್ಲಿ ಜನಮಾನಸದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಯಾವುದೇ ಜಾತಿ ಮತ ಧರ್ಮಕ್ಕೆ ಸೀಮಿತವಾಗದೇ ಜಾನಪದವು ಈಗಲೂ ಉಳಿದುಕೊಂಡಿದ್ದು ಮಾನವೀಯ ಮೌಲ್ಯಗಳನ್ನು ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿದೆʼ ಎಂದರು.

ʼಕಲ್ಯಾಣ ಕರ್ನಾಟಕದ ಎಲ್ಲ ಜಾನಪದ ಸಾಹಿತಿ ಕಲಾವಿದರ ಕಾರ್ಯಕ್ರಮಕ್ಕೆ ಕೆಕೆಆರ್‌ಡಿಬಿ ವತಿಯಿಂದ ಅನುದಾನ ನೀಡುವುದಾಗಿ ಸಚಿವರು ಭರವಸೆ ನೀಡಿ ಕಲಾವಿದರಿಗೆ ಶುಭ ಹಾರೈಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಜೀವ ವಿಕಾಸದಲ್ಲಿ ಜಾನಪದ ಪ್ರಮುಖ ಪಾತ್ರ ವಹಿಸುತ್ತದೆ. ಅಮ್ಮನ ಲಾಲಿ ಹಾಡಿನಿಂದ ಮನುಷ್ಯ ಮಣ್ಣಾಗುವ ತನಕ ಜಾನಪದಯಿದೆ. ನೈತಿಕತೆ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಜಾನಪದ ನೈತಿಕತೆಯು ಅಸ್ತ್ರವಾಗಿದೆʼ ಎಂದರು.
ವಾರ್ಷಿಕ ಗೌರವ ಪ್ರಶಸ್ತಿಯು ತಲಾ ₹25 ಸಾವಿರ ನಗದು, ತಜ್ಞ ಪ್ರಶಸ್ತಿಯು ತಲಾ ₹50 ಸಾವಿರ ನಗದು, ಸ್ಮರಣಿಕೆ, ಪ್ರಮಾಣ ಪತ್ರ ಒಳಗೊಂಡಿದೆ.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜೀವ ವಿಕಾಸದಲ್ಲಿ ಜಾನಪದ ಪ್ರಮುಖ ಪಾತ್ರ ವಹಿಸುತ್ತದೆ. ಅಮ್ಮನ ಲಾಲಿ ಹಾಡಿನಿಂದ ಮನುಷ್ಯ ಮಣ್ಣಾಗುವ ತನಕ ಜಾನಪದಯಿದೆ. ನೈತಿಕತೆ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಜಾನಪದ ನೈತಿಕತೆಯು ಅಸ್ತ್ರವಾಗಿದೆʼ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಜಾನಪದ ಅಕಾಡೆಮಿ ಸದಸ್ಯ ವಿಜಯುಕುಮಾರ ಸೋನಾರೆ, ಹಲತುಂಬಿ ಮೂರ್ತಿ, ಮಂಜುನಾಥ ರಾಮಣ್ಣ, ಮೆಹಬೂಬ ಕಿಲ್ಲೇದಾರ, ಶಿವಮೂರ್ತಿ ಭೀಮಬಾಯಿ, ಡಾ.ನಿಂಗಪ್ಪ ಮುದೆನೂರ ಸೇರಿದಂತೆ ಇನ್ನಿತರ ಅಕಾಡೆಮಿ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರಿನ ಲೆಕ್ಕಾಧಿಕಾರಿ ಸುರೇಶ ನಾಯ್ಕ, ಎನ್.ನಮ್ರತಾ ಸೇರಿದಂತೆ ಇನ್ನಿತರ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಪ್ರಮುಖರಾದ ಬಸವರಾಜ ಧನ್ನೂರ, ಪರ್ನಾಡಿಂಸ್ ಹಿಪ್ಪಳಗಾಂವ, ಗೀತಾ ರೆಡ್ಡಿ, ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸಿದ್ರಾಮಪ್ಪ ಮಾಸಿಮಾಡ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮತ್ತಿತರರು ಭಾಗವಹಿಸಿದ್ದರು.
2023ನೇ ಸಾಲಿನ ತಜ್ಞ ಪ್ರಶಸ್ತಿ ಪುರಸ್ಕೃತರು: ಅಕ್ಕಮ್ಮ, ಏಸಪ್ಪ ಗುಂಡಪ್ಪ, ಶಾಂತಮ್ಮ ಜಂಬಣ್ಣ, ರೇವಣಪ್ಪ ನಿಂಗಪ್ಪ , ಡಾ.ರಾಮು ಮೂಲಿ, ಅಮರಯ್ಯ ಸ್ವಾಮಿ, ಡಾ.ಕೆ.ಚಿನ್ನಪ್ಪಗೌಡ, ಡಾ.ಮಂಜುನಾಥ ಬೇವಿನಕಟ್ಟಿ ಅವರಿಗೆ ತಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು.
2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಬಿ.ಪಿ.ಪರಮೇಶ್ವರಪ್ಪ (ಭಜನೆ), ಸಿದ್ದರಾಜು ಆರ್. (ತಂಬೂರಿ ಪದ), ಜಯಂತಿ (ಪಾಡ್ದನ), ಎನ್.ಗಣೇಶ ಗಂಗೊಳ್ಳಿ (ಜಾನಪದ ಗಾಯನ), ಎಸ್.ಆರ್.ಸರೋಜ (ಬುಡಕಟ್ಟು ಕೋಲಾಟ), ಕಮಲಾ ಮರಗನ್ನವರ (ಚೌಡಿಕೆ ಪದ), ಪ್ರಭು ಬಸಪ್ಪ ಕುಂದರಗಿ (ಜಾನಪದ ಸಂಗೀತ), ಸೋಮಣ್ಣ ದುಂಡಪ್ಪ ಧನಗೊಂಡ (ಡೊಳ್ಳು ಕುಣಿತ), ಗಂಗಪ್ಪ ಮ. ಕರಡಿ (ಕರಡಿ ಮಜಲು), ಗಣಪು ಬಡವಾ ಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಗಿರಿಜವ್ವ ಹನುಮಪ್ಪ ಬಣಕಾರ (ಸೋಬಾನೆ ಪದ), ಡಾ.ಗೋವಿಂದಪ್ಪ ರಾಮಚಮದ್ರಪ್ಪ (ಹಗಲುವೇಷ), ಬೋರಮ್ಮ (ತತ್ವಪದ ಗಾಯನ), ಮಾರುತಿ ಕೋಳಿ (ಜಾನಪದ ಗಾಯನ), ಯಲ್ಲಮ್ಮ (ತತ್ವಪದ), ಹೆಚ್.ಚಂದ್ರಶೇಖರ ಹಡಪದ (ಭಜನೆ), ಕೆ.ಶಂಕರಪ್ಪ (ಹಗಲುವೇಷ), ಗೋಪಣ್ಣ (ತತ್ವಪದ/ಭಜನೆ).
ಡಾ.ಮೈಲಹಳ್ಳಿ ರೇವಣ್ಣ, ಡಾ.ವೆಂಕಟೇಶ ಇಂದ್ವಾಡಿ ಅವರಿಗೆ 2024ನೇ ಸಾಲಿನ ತಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು.

2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಡಾ.ಜೋಗಿಲ ಸಿದ್ಧರಾಜು (ಜಾನಪದ ಗಾಯನ), ಸಿದ್ದಯ್ಯ ಸಿ.ಎಚ್. (ತತ್ವಪದ ಮತ್ತು ಗೀಗೀಪದ), ಎಂ.ಮಹೇಶ (ಡೊಳ್ಳು ಕುಣಿತ), (ಸುನಂದಮ್ಮ (ಕೋಲಾಟ), ವೆಂಕಟರಮಣಪ್ಪ (ಅರೆವಾದ್ಯ ತಮಟೆ), ಸಿದ್ದಪ್ಪ (ಕಿನ್ನರಿ ಜೋಗಿ), ಮಾರ್ತಾಂಡಪ್ಪ (ಭಜನೆ), ಎ.ಶ್ರೀನಿವಾಸ (ಹಗಲುವೇಷ), ಗೌರಮ್ಮ (ಹಸೆ ಚಿತ್ತಾರ), ಸಿ.ಮಂಜುನಾಥ (ನಗಾರಿ ವಾದನ), ಹುರುಗಲವಾಡಿ ರಾಮಯ್ಯ (ಜಾನಪದ ಗಾಯನ0, ಬಿ.ಟಿ.ಮಾನವ (ಕೋಲಾಟ ಸಂಘನಟ), ಕೆ.ಎಂ.ರಾಮಯ್ಯ (ಏಕತಾರಿ ತಂಬೂರಿ ಪದ), ಓಬಮ್ಮ ವೆಂಕಟೇಶ (ಸೋಬಾನೆ ಪದ), ರಂಗಯ್ಯ (ಪಟ ಕುಣಿತ), ತೋಪಣ್ಣ (ಕೀಲು ಕುದರೆ ಕುಣಿತ), ದೊಡ್ಡ ಕೂರ್ಲಪ್ಪ (ತಮಟೆ ವಾದನ), ಕದರಮ್ಮ (ಜಾನಪದ ಹಾಡುಗಾರ್ತಿ), ಕಾಟಮ್ಮ (ಕಥನ ಕಾವ್ಯ), ಸಿರಿಯಮ್ಮ (ಮಹಾಕಾವ್ಯ), ಟೀಕಪ್ಪ ಕಣ್ಣೂರ (ಡೊಳ್ಳು ಕುಣಿತ), ದೇವಕಿ ಕೆ.ಸಿ. (ಊರ್ಟಿಕೋಟ್ ಆಟ), ಗುರುಬಸವಯ್ಯ (ತಂಬೂರಿ ಪದ), ವೀರಭದ್ರಯ್ಯ (ತತ್ವಪದ ಗಾಯನ), ನಾಗರಾಜಪ್ಪ ವೈ.ಪಿ. (ಕರಡಿಗೆ ವಾದ್ಯ), ಗುರುಸಿದ್ದಯ್ಯ (ತಂಬೂರಿ ಪದ), ಅಪ್ಪಿ (ಜಾನಪದ ಸೂಲಗಿತ್ತಿ), ಲೀಲಾವತಿ (ನಾಟಿ ವೈದ್ಯೆ), ಗೌರಮ್ಮ (ಸೋಬಾನೆ ಪದ, ಅಂಧ ಕಲಾವಿದರು), ಶಿವನಪ್ಪ ಚಂದರಗಿ (ಡೊಳ್ಳು ಕುಣಿತ), ಹನಮಂತ ವೆಂಕಪ್ಪ ಸುಗತೇಕರ (ಗೊಂದಳಿ ಪದ), ಇಮಾಂಬಿ ಇಮಾಮಸಾಬ್ ದೊಡ್ಡಮನಿ (ಸೋಬಾನೆ ಪದ), ಬಸಪ್ಪ ಹಡಗಲಿ (ಗೀಗಿ ಪದ), ದಳವಾಯಿ ಚಿತ್ತಪ್ಪ (ಜಾನಪದ ಮಹಾಕಾವ್ಯ), ಸಾವಕ್ಕಾ ಓಲೇಕಾರ (ಸಂಪ್ರದಾಯ ಪದ), ಈರಯ್ಯ ಮೋಗೆರ (ಕಾರಿನಮನೆ ಮತ್ತು ಹೌಂದೆರಾಯನ ಕುಣಿತ)
ಈ ಸುದ್ದಿ ಓದಿದ್ದೀರಾ? ಔರಾದ್ ಸೀಮೆಯ ಕನ್ನಡ | ಹಂತಿ ಹೊಡಿಲಾಕ್ ನಮ್ ಎತ್ಗೊಳ್ ಖಾಲಿನೇ ಅವಾ!
ಬಿ.ಎಸ್.ಸ್ವಾಮಿ, ಡಾ.ಕುರುವ ಬಸವರಾಜು, ಡಾ.ನಾಗ ಹೆಚ್.ಹುಬ್ಬಿ, ವ.ನಂ.ಶಿವರಾಮು, ಡಾ.ವಿಜಯಶ್ರೀ ಸಬರದ ಅವರಿಗೆ ಪುಸ್ತಕ ಬಹುಮಾನ ಪ್ರದಾನ ವಿತರಿಸಲಾಯಿತು.