ಕೇಂದ್ರ ಸರ್ಕಾರವು ರಾಜ್ಯದ ರೈತರ ಅವಶ್ಯಕತೆಗಿಂತ ಹೆಚ್ಚಿನ ಯುರಿಯಾ, ಡಿಎಪಿ ಶೇಖರಣೆ ಮತ್ತು ಕಾಂಪ್ಲೇಕ್ಸ್ ರಸಗೊಬ್ಬರಗಳನ್ನು ಸರಬರಾಜು ಮಾಡಿದ್ದರು ಕೂಡ ರಾಜ್ಯ ಸರ್ಕಾರದ ಅವೈಜ್ಞಾನಿಕ ದಾಸ್ತಾನು ಹಾಗೂ ಕಾಳಸಂತೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೈತರಿಗೆ ಅಭಾವ ಸೃಷ್ಟಿಸಿರುವುದನ್ನು ಖಂಡಿಸಿ ಬುಧವಾರ (ಜು.30) ರಂದು ಜಿಲ್ಲೆಯಾದ್ಯಂತ ಬಿಜೆಪಿಯಿಂದ ರೈತರೊಂದಿಗೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದ್ದಾರೆ.
ʼರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಎಪಿಎಮ್‌ಸಿ ಸಚಿವ ಶಿವಾನಂದ ಪಾಟೀಲ್ ಅವರು ಮಾಧ್ಯಮಗಳಲ್ಲಿ ಒಬ್ಬರಿಗೊಬ್ಬರು ತಾಳಮೇಳವಿಲ್ಲದಂತೆ ವಿಭಿನ್ನ ಹೇಳಿಕೆಗಳನ್ನು ನೀಡಿ ರೈತರಿಗೆ ಗೊಂದಲ ಮುಡಿಸಿ ಕಾಳಸಂತಕೊರರಿಗೆ ಕಡಿವಾಣ ಹಾಕುವಬದಲು ಪ್ರೊತ್ಸಾಹಿಸುವ ರೈತ ವಿರೋಧಿಗಳಾಗಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ನಡೆ ಖಂಡಿಸಿ ಜುಲೈ 30ರಂದು 10 ಗಂಟೆಗೆ ಬಸವಕಲ್ಯಾಣ ಕ್ಷೇತ್ರದ ಹುಲಸೂರಿನ ಮುಖ್ಯ ರಸ್ತೆ, ಔರಾದ ಪಟ್ಟಣದ ಎಪಿಎಂಸಿ ವೃತ್ತ, ಬೀದರ ಕ್ಷೇತ್ರದ ಜನವಾಡಾ ಗ್ರಾಮದ ಮುಖ್ಯ ರಸ್ತೆ, ಬೀದರ ದಕ್ಷಿಣ ಕ್ಷೇತ್ರದ ಮನ್ನಾಎಖ್ಖೆಳ್ಳಿಯ ಬಸವೇಶ್ವರ ವೃತ್ತ ಹುಮನಾಬಾದ ಕ್ಷೇತ್ರದ ಚಿಟಗುಪ್ಪಾ ಪಟ್ಟಣದ ಬಸವರಾಜ ವೃತ್ತ ಹಾಗೂ ಮಧ್ಯಾಹ್ನ 2 ಗಂಟೆಗೆ ಭಾಲ್ಕಿಯ ಅಂಬೇಡ್ಕರ ವೃತ್ತದಲ್ಲಿ ರಸ್ತೆ ತಡೆ ಮುಖಾಂತರ ಪ್ರತಿಭಟನೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಒಂದೇ ಹೆಸರಿನ ಮೂವರು ಸಹೋದರರು; ಹೆಸರಿನ ಹಿಂದಿನ ಗುಟ್ಟೇನು ಗೊತ್ತಾ!