ಯುವ ಜನರು ದೇಶ ಸೇವೆಗೆ ಮುಂದಾಗಬೇಕು ಎಂದು ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜು ಪ್ರಾಚಾರ್ಯೆ ಡಾ. ರಂಜನಾ ಪಾಟೀಲ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಗರದ ಅಕ್ಕ ಮಹಾದೇವಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ದೇಶದ ಪ್ರಗತಿಗೆ ವೈಯಕ್ತಿಕ ಕೊಡುಗೆ ನೀಡಬೇಕು. ಶ್ರಮದಾನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೊಡುಗೆ ಬಹು ದೊಡ್ಡದಾಗಿದೆ’ ಎಂದು ಹೇಳಿದರು.
ಕಾಲೇಜಿನ ಐಕ್ಯೂಎಸ್‍ಸಿ ಅಧ್ಯಕ್ಷ ಡಾ. ಪ್ರವೀಣಕುಮಾರ, ಡಾ. ಗಂಗಾಂಬಿಕೆ ಪಾಟೀಲ, ಪ್ರೊ. ಶರಣಪ್ಪ ದುಬಲಗುಂಡಿ ಮಾತನಾಡಿದರು.
ಈ ಸುದ್ದಿ ಓದಿದ್ದೀರ? ಬೀದರ್ | ಮೊಬೈಲ್ ಹೆಚ್ಚು ಬಳಸಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ವಿದ್ಯಾರ್ಥಿಗಳಾದ ಮುಸ್ತಾನ್, ಅಂಜಲಿ, ರಾಜೇಶ್ವರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಡಾ.ಮೀನಾ ಗಾಯಕವಾಡ್ ಶಿಬಿರದ ವರದಿ ವಾಚಿಸಿದರು. ಎನ್‌ಎಸ್‌ಎಸ್ ‘ಬ’ ಘಟಕದ ಅಧಿಕಾರಿ ಡಾ. ಶ್ವೇತಾ ಶೇರಿಕಾರ್ ಉಪಸ್ಥಿತರಿದ್ದರು. ಶಿವಾನಿ ವಂದಿಸಿದರು.