ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂತಿಮವಾಗಿ 18 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಾಮಪತ್ರಗಳನ್ನು ಹಿಂಪಡೆಯಲು ಏ.22 ಸೋಮವಾರ ಕೊನೆಯ ದಿನವಾಗಿತ್ತು. ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರಕ್ಕೆ ಸ್ಫರ್ಧಿಸಲು ಒಟ್ಟು 20 ಅಭ್ಯರ್ಥಿಗಳ ನಾಮತ್ರಗಳು ಅಂಗೀಕೃತವಾಗಿದ್ದವು. ಅದರಲ್ಲಿ ಎರಡು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಗೆ ಹಿಂಪಡೆದ ಕಾರಣ ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.
ಕಣದಲ್ಲಿ ಉಳಿದವರು :
ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ನೋಂದಾಯಿತ ಪಕ್ಷದ 8 ಜನ ಅಭ್ಯರ್ಥಿಗಳಾದ ಪುಟರಾಜ್ ಹಣಮಂತ (ಬಿಎಸ್‌ಪಿ) ಭಗವಂತ ಖೂಬಾ (ಬಿಜೆಪಿ), ಸಾಗರ ಈಶ್ವರ ಖಂಡ್ರೆ (ಕಾಂಗ್ರೆಸ್), ಅಂಬಾದಾಸ್ ಸೋಪಾನವರ ಹುಲಸೂರ (ಬಹುಜನ ಭಾರತ ಪಾರ್ಟಿ), ಮಹೇಶ ಗೋರನಾಳಕರ್ (ಆರ್‌ಪಿಐ(ಎ), ಮಹಮ್ಮದ್ ಶಫೀಕ್ ಆರ್ (ಆಲ್ ಇಂಡಿಯಾ ಉಲಮ ಕಾಂಗ್ರೆಸ್), ರಮೇಶ ಜೆ. ಚವ್ಹಾಣ, (ಕೆಆರ್‌ಎಸ್) ರಾಮಚಂದ್ರ ನಾರಾಯಣ (ಕಚೇವು ಕ್ರಾಂತಿಕಾರಿ ಜೈ ಹಿಂದ್ ಸೇನಾ)
10 ಜನ ಪಕ್ಷೇತರ ಅಭ್ಯರ್ಥಿಗಳು :
ಗೋಪಾಲ ಎಂಪಿ ಗಾರಂಪಳ್ಳಿ, ಜೈರಾಮ ಕಾಶಪ್ಪ ಬುಕ್ಕ ವಕೀಲರು, ಡಾ.ಮೋರೆ ದೀನಕರ್, ದಿಲಿಪ್ ಕಾಡವಾದ, ಬಲಭೀಮ ಉಣ್ಣೆ, ರಾಮವಿಲಾಸ ರಾಮುಲಾಲಜಿ ನಾವಂದರ, ರಿಯಾಜ ಅಹ್ಮದ, ರೋಫ ಅಬ್ದುಲ ಗನಿ, ವಸೀಮಮೊದ್ದಿನ್, ಶಿವರಾಜ ಅಡಿವೆಪ್ಪ ಸತವಾರ ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಹಿಂಪಡೆದ ಅಭ್ಯರ್ಥಿಗಳು :
ರಾಷ್ಟ್ರೀಯ ಅಭಿವೃದ್ಧಿ ಪಕ್ಷದ ಬಾಬು ಪಾಷಾ ಹಾಗೂ ಸ್ವತಂತ್ರ ಅಭ್ಯರ್ಥಿ ಅಬ್ದುಲ ರಜಾಕ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಹಿಂಪಡೆದ ಅಭ್ಯರ್ಥಿಗಳಾಗಿದ್ದಾರೆ.
ಮೇ. 7 ರಂದು ಮತದಾನ ನಡೆಯಲ್ಲಿದ್ದು ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.