ಬೌದ್ದರ ಹಕ್ಕಿಗಾಗಿ ಹಾಗೂ ಬಿ.ಟಿ ಕಾಯ್ದೆ-1949 ಅನ್ನು ರದ್ದುಗೊಳಿಸಿ ಬುದ್ದಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ದರಿಗೆ ನೀಡಲು ದೇಶಾದ್ಯಂತ ಆಲ್ ಇಂಡಿಯಾ ಬುದ್ದಿಷ್ಟ್ ಫೋರಮ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲಿಸಿ ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬೀದರ್ ಬುದ್ದಿಷ್ಟ ವಿಹಾರದ ಸಂಸ್ಥಾಪಕರಾದ ಭಂತೆ ಧಮ್ಮಾನಂದ ಮಹಾಥೆರೊ, ಅಧ್ಯಕ್ಷರಾದ ಭಂತೆ ಜ್ಞಾನ ಸಾಗರ, ಕಾರ್ಯದರ್ಶಿ ಭಂತೆ ಸಂಘರಖ್ಖೀತ, ರೇಕುಳಗಿ ಮೌಂಟ್‌ನ ಭಂತೆ ಧರ್ಮಪಾಲ, ಭಾಲ್ಕಿಯ ಭಂತೆ ನೌಪಾಲ ಹಾಗೂ ಭಿಕ್ಕು ಸಂಘ ಹಾಗೂ ವಿವಿಧ ಬೌದ್ಧ ಸಂಘಟನೆಗಳು, ದಲಿತ ಸಂಘಟನೆಗಳ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು.
ನಗರದ ಜನವಾಡ ರಸ್ತೆಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ತಹಸೀಲ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ತಲುಪಿತು. ರಾಜ್ಯದ ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಬುದ್ದಗಯಾ ಬಿಹಾರದಲ್ಲಿರುವ ಕಾರಣ ಬಿಹಾರದ ರಾಜ್ಯಪಾಲ, ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮೀಜಿ
ಪ್ರತಿಭಟನೆಯಲ್ಲಿ ಬೌದ್ಧ ಆಚಾರ್ಯ ಮಿಲಿಂದ ಗೂರುಜಿ, ಮುಖಂಡರಾದ ಧರ್ಮರಾಯ ಘಾಂಗ್ರೆ, ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ್, ಬಾಬು ಪಾಸ್ವಾನ್, ರಾಜಕುಮಾರ ಮೂಲಭಾರತಿ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಮಹೇಶ ಗೋರನಾಳಕರ್, ಸುರೇಶ ಜೋಜನಾಕರ್, ಅಂಬಾದಾಸ ಚಕ್ರವರ್ತಿ, ಕಾಶಿನಾಥ ಚೆಲ್ವಾ, ರಾಜಪ್ಪಾ ಗೂನಳ್ಳಿಕರ್, ಬಾಬುರಾವ ಮಿಠಾರೆ, ಚಂದ್ರಕಾಂತ ನಿರಾಟೆ, ಅರುಣ ಪಟೇಲ್, ಅವಿನಾಶ ದಿನೆ, ಭರತ ಕಾಂಬಳೆ, ರಾಜಕುಮಾರ ವಾಘಮಾರೆ, ಸಂದೀಪ ಕಾಂಟೆ, ಪ್ರಕಾಶ ರಾವಣ, ವಿನೋದಕುಮಾರ ಶಾಕ್ಯಪಾಲ್, ಪ್ರದೀಪ ನಾಟೆಕರ್, ಚಂದ್ರಕಲಾ ಬಡಿಗೇರ, ಮಂಜುಳಾ ಭಾವಿದೊಡ್ಡಿ ಪುನಿತಾ ಗಾಯಕವಾಡ, ಗಂಗಮ್ಮ ಫುಲೆ, ಲಕ್ಷ್ಮಿ ಹೊಸಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.