ಆಧುನಿಕ ಆಹಾರ ಪದ್ಧತಿಯಿಂದ ಆರೋಗ್ಯ ಹದಗೆಡುತ್ತಿದ್ದು, ಮತ್ತೆ ನಾವು ಹಳೆಯ ಪರಂಪರೆಗೆ ಮಾರು ಹೋಗುವ ಅವಶ್ಯಕತೆ ಇದೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ದೈವತಾ ಪಲಂಪಲ್ಲೆ ಹೇಳಿದರು.
ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಸವಕಲ್ಯಾಣದ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆರೋಗ್ಯವೇ ಭಾಗ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಒತ್ತಡ ಜೀವನ ಶೈಲಿ ತೊರೆದು ನೆಮ್ಮದಿಯ ಬದುಕನ್ನು ನಡೆಸಲು ಆಹಾರ ಪದ್ಧತಿ ಮುಖ್ಯವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಮೀನಾಕ್ಷಿ ಬಿರಾದಾರ ಮಾತನಾಡಿ, ‘ನಮ್ಮ ಪೂರ್ವಜರು ಅನೇಕ ಕೆಲಸಗಳನ್ನು ಸ್ವತಃ ಮಾಡಿಕೊಳ್ಳುತ್ತಿದ್ದರು. ಅದರಿಂದ ಅವರಿಗೆ ವ್ಯಾಯಾಮ ದೊರೆಯುತ್ತಿತ್ತು. ಆಧುನಿಕ ತಂತ್ರಜ್ಞಾನ ಬಂದ ಬಳಿಕ ಇಂದು ಮನುಷ್ಯ ಸೋಮಾರಿಯಾಗಿದ್ದೇನೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಮಕ್ತುಂಬಿ ಅವರು ಮಾತನಾಡಿ, ‘ಆಹಾರ ಬದಾವಣೆ ಇಂದಿನ ಅಗತ್ಯವಾಗಿದೆ. ಜಪಾನಿನ ತ್ರಿಕೋನ ಪದ್ದತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಬೇಕರಿ ತಿಂಡಿ ತಿನಿಸು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಹೇಳಿದರು.
ಜಿಲ್ಲಾ ತರಬೇತಿ ಆಯುಕ್ತ ಬಾಬುರಾವ್ ನಿಂಬೂರೆ, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಅನೀಲಕುಮಾರ ಶಾಸ್ತ್ರಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ ಮಕ್ಕಳು, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿದ್ದರಾಜ ಬೋಗಾರೆ ನಿರೂಪಿಸಿದರು. ಲಕ್ಷ್ಮಿ ಅವರು ಪ್ರಾರ್ಥನೆ ನಡೆಸಿಕೊಟ್ಟರು