ಬೀದರ್ ಜಿಲ್ಲಾದಾದ್ಯಂತ ಜೂನ್ 1ರಿಂದ ಜುಲೈ 25ರವರೆಗೆ ಸುರಿದ ಮುಂಗಾರು ಮಳೆಯಿಂದ ಒಟ್ಟು 36 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯ ಬಸವಕಲ್ಯಾಣ (20), ಭಾಲ್ಕಿ (6), ಚಿಟಗುಪ್ಪ (5), ಔರಾದ್ (4) ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ (1) ಮನೆಗಳು ನಿರಂತರವಾಗಿ ಸುರಿದ ಮಳೆಗೆ ಭಾಗಶಃ ಗೋಡೆ ಉರುಳಿದೆ. ಇನ್ನು ಚಿಟಗುಪ್ಪ, ಬಸವಕಲ್ಯಾಣ, ಹುಲಸೂರ ಹಾಗೂ ಔರಾದ್ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಒಟ್ಟು 6 ಜಾನುವಾರು ಸಾವನ್ನಪ್ಪಿರುವುದು ಬಗ್ಗೆ ವರದಿಯಾಗಿದೆ.
ಜೂನ್ 1ರಿಂದ ಆರಂಭವಾದ ಮಳೆಯಿಂದಾಗಿ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದಾಗಿ ಜಿಲ್ಲಾಡಳಿತ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.